ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ನೂತನ ಕಿತ್ತೂರ ವಿಜಯ ಪತ್ರಿಕಾ ಭವನ ಉದ್ಘಾಟನೆ

ಶ್ರೀಗಳಿಗೆ ಸನ್ಮಾನಿಸಿ ಗೌರವಿಸುತ್ತಿರುವುದು

ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರು: ಪಟ್ಟಣದ ಚೌಕಿಮಠ ಕ್ರಾಸ್ ಹತ್ತಿರ ಇರುವ ಆರೇಂಜ್ ಕೌಂಟಿ ಹಾಲನಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ "ಕಿತ್ತೂರ ವಿಜಯ" ಪತ್ರಿಕಾ ಭವನದ ಉದ್ಘಾಟನೆ ಜರುಗಿತು.

ರಾಜಗುರು ಸಂಸ್ಥಾನ ಕಲ್ಮಠದ ಶ್ರೀ ಮಡಿವಾಳ ರಾಜಯೋಗೇಂದ್ರ ಮಹಾಸ್ವಾಮಿಗಳು ಕಿತ್ತೂರ ವಿಜಯ ಪತ್ರಿಕಾ ಭವನವನ್ನು ಉದ್ಘಾಟಿಸಿ ಮಾತನಾಡಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಧ್ವನಿ ಸಂಘದಲ್ಲಿ ಇರುವ ಎಲ್ಲಾ ಪತ್ರಕರ್ತರು ಸಮಾಜ ಸೇವೆ ಮಾಡುವವರಾಗಿದ್ದು ಕಿತ್ತೂರು ನಾಡಿಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದಾರೆ. ಪತ್ರಿಕಾ ಭವನದಲ್ಲಿ ಕಿತ್ತೂರು ನಾಡಿನ ವೀರರ ಪರಿಚಯ, ಸಂಸ್ಕೃತಿ ಹಾಗೂ ಕಲೆಗಳನ್ನು ಸಾರುವ ಪಟಗಳನ್ನು ಅಳವಡಿಸುವ ಮೂಲಕ ಎಲ್ಲರಿಗೂ ನಮ್ಮ ನಾಡಿನ ಪರಿಚಯ ಆಗುವಂತೆ ಮಾಡಿದ್ದು ವಿಶೇಷ ಎಂದ ಅವರು ಈ ಸಂಘ ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಸಾಪ ಅದ್ಯಕ್ಷ ಡಾ ಎಸ್.ಬಿ. ದಳವಾಯಿ ಮಾತನಾಡಿದರು

ಪತ್ರಿಕಾ ರಂಗವನ್ನು ರಾಷ್ಟ್ರದ ನಾಲ್ಕನೆಯ ಅಂಗ ಅಂದು ಹೇಳಲಾಗುತ್ತದೆ. ಪತ್ರಕರ್ತರು ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದಿ ಸರಿ ದಾರಿಗೆ ತರು ಕೆಲಸವನ್ನು ಮಾಡುತ್ತಾರೆ. ಪತ್ರಕರ್ತರು ನೈಜ ಸುದ್ದಿಗಳನ್ನು ಮಾಡಬೇಕು. ಈ ಸಂಘ ಒಂದು ಮಾದರಿಯಾಗಿ ಬೆಳೆದು ಹೆಮ್ಮರವಾಗಲಿ. ಡಾ ಶ್ರೀಕಾಂತ ದಳವಾಯಿ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್

ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ಮಾತನಾಡಿದರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಸರ್ವ ಸದಸ್ಯರು ಸೇರಿ ಕಿತ್ತೂರಿನಲ್ಲಿ ಕಿತ್ತೂರು ವಿಜಯ ಪತ್ರಿಕಾ ಭವನ ಉದ್ಘಾಟನೆ ಮಟಡಿದ್ದು ಸಂತಸ ತಂದಿದ್ದು ತಮ್ಮ ಸಂಘದ ಆಶ್ರಯದಲ್ಲಿ ಸ್ವಾಸ್ತ್ಯ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪತ್ರಕರ್ತರ ಪಾತ್ರ ಬಹಳ ಮುಖ್ಯವಾದದ್ದು. ಈ ಸಂಘದಿಂದ ಒಳ್ಳೆಯ ಸಂದೇಶಗಳು ನಾಡಿನ ತುಂಬೆಲ್ಲ ಹೋಗಲಿ. ಸಂಘದ ಮೂಲಕ ಅನೇಕ ಸಾಮಾಜಿಕ ಕಾರ್ಯಗಳು ಆಗಲಿ ಎಂದು ಆಶಿಸುವೆ. ಮಹೇಶ ಚನ್ನಂಗಿ. ಉಪ ಪ್ರಾಂಶುಪಾಲರು ಎಸ್.ಜಿ. ಹೈಸ್ಕೂಲ್ ಚನ್ನಮ್ಮನ ಕಿತ್ತೂರು.

                                       ನಿವೃತ್ ಅಂಚೆ ಫಾಲಕ ಸೋಮಶೇಖರ ಹುಣಶ್ಯಾಳ ಮತನಾಡಿದರು 


ಅನ್ಯಾಯ, ಅನೀತಿ, ಭ್ರಷ್ಠಾಚಾರ ಸೇರಿದಂತೆ ಅನೇಕ ಹೇಯ ಕೃತ್ಯಗಳು ಬೆಳಕಿಗೆ ಬರುವಲ್ಲಿ ಪತ್ರಕರ್ತರ ಪಾತ್ರ ಮುಖ್ಯವಾಗಿರುತ್ತದೆ. ಪತ್ರಿಕಾ ಭವನದ ಜೊತೆ ಜೊತೆಗೆ ಈ ಸ್ಥಳವನ್ನು ವಿವಿಧ ಶುಭ ಸಮಾರಂಭಗಳಿಗೆ ಈ ಭವನವನ್ನು ಕೊಡುತ್ತಿರುವುದು  ಶ್ಲ್ಯಾಘನೀಯ, ರೈತರು, ಅಸಹಾಯಕರು ಸೇರಿದಂತೆ ಯಾರಿಗೇ ಅನ್ಯಾಯವಾದರೆ ಅವರಿಂದ ಯಾವುದೇ ಫಲಾಪೇಕ್ಷೆ ಬಯಸದೆ ನ್ಯಾಯ ಕೊಡಿಸುವ ನಿಮ್ಮ ಕಾರ್ಯಕ್ಕೆ ಅಭಿನಂದನೆಗಳು. ಸೋಮಶೇಖರ ಹುಣಶ್ಯಾಳ ನಿವೃತ್ ಅಂಚೆ ಫಾಲಕರು

 ಮಾದಿಗರ ಮಿಸಲಾತಿ ಹೋರಾಟ ಸಮಿತಿ ಅಧ್ಯಕ್ಷ ರಾಜು ಜಾಂಗಟಿ ಮಾತನಾಡಿದರು
ನಮ್ಮ ಕಿತ್ತೂರು ತಾಲೂಕಿನ ಪತ್ರರ‍್ತರು ಅನೇಕ ಜನಪರ ಕಾಳಜಿಯ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಅವರಿಗೆ ನಮ್ಮ ಸಹಕಾರ ಯಾವತ್ತು ಇರುತ್ತದೆ. ಕಿತ್ತೂರು ವಿಜಯ ಭವನ ನಿರ್ಮಾಣ ಮಾಡಿದ್ದು ಖುಷಿ ತಂದಿದೆ. ಸಂಘದಿಂದ ಅನೇಕ ಸಾಮಾಜಿಕ ಕಾರ್ಯಗಳು ನಮ್ಮ ನಾಡಿನ ಜನತೆಗೆ ಸಿಗುವಂತಾಗಲಿ. ಎಲ್ಲರಿಗೂ ಶುಭವಾಗಲಿ. ರಾಜು ಜಾಂಗಟಿ. ಅಧ್ಯಕ್ಷರು ಮಾದಿಗರ ಮಿಸಲಾತಿ ಹೋರಾಟ ಸಮಿತಿ ಬೆಳಗಾವಿ

ಕರ್ನಾಟಕ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಮಡಿವಾಳೆಪ್ಪ ವಕ್ಕುಂದ ಮಾತನಾಡಿದರು

ಮಾದ್ಯಮ ಮಿತ್ರರು ಯಾರಿಗೂ ಹೆದರದೆ ನೈಜ ಸುದ್ದಿಗಳನ್ನು ಬಿತ್ತರಿಸಬೇಕು. ಕಿತ್ತೂರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ವತಿಯಿಂದ ನೂತನವಾಗಿ ನಿರ್ಮಾಣವಾದ ಕಿತ್ತೂರು ವಿಜಯ ಭವನದ ಆಶ್ರಯದಲ್ಲಿ  ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ತಿದ್ದುವ ಕಾರ್ಯಗಳು ಆಗಲಿ. ನಮ್ಮ ಸಹಕಾರ ಯಾವತ್ತು ನಿಮಗೆ ಇರುತ್ತದೆ. ಮಡಿವಾಳೆಪ್ಪ ವಕ್ಕುಂದ ಜಿಲ್ಲಾ ಅಧ್ಯಕ್ಷರು ರ‍್ನಾಟಕ ಮಾದಿಗರ ಸಂಘ ಬೆಳಗಾವಿ

ರಾಷ್ಟ್ರೀಯ ಬಸವ ದಳದ ಅಧ್ಯಕ್ಷ ಅಶೋಕ ಅಳ್ನಾವರ, ಜಂಗಮ ವೇದಿಕೆ ಮುಖುಸ್ಥ ಆನಂದ ನರೇಂದ್ರಮಠ, ಭಜರಂಗದಳದ ಮುಖಂಡ ಶೀವಾ ಹಿರೇಮಠ, ಶಿಕ್ಷಕ ಗುರುರಾಜ ಶೆಟ್ಟರ ಮಾತನಾಡಿದರು.


ಈ ವೇಳೆ ಬಸವರಾಜ ಮಾತನವರ, ಶಿವಾನಂದ ಎಮ್ಮಿ, ರಾಚಪ್ಪ ಕೋಟಗಿ, ಪತ್ರರ‍್ತರಾದ ಸುರೇಶ ಮುರಡಿಮಠ, ಗೋಪಾಲ ಪೂಜಾರಿ ವೈಡಿ, ವಿಠ್ಠಲ ಮಿರಜಕರ, ಕಲ್ಲಪ್ಪ ಅಗಸಿಮನಿ.ವಿರೇಶ ಹಿರೇಮಠ, ಮಹಾಂತೇಶ ಕರಬಸನ್ನವರ, ಸಂತೋಷ ಮಾರಿಹಾಳ, ಡಾ ಗುರಶಿದ್ದ ಕಲ್ಮಠ, ಶಿಕ್ಷಕರಾದ ಬಸವಪ್ರಭು ಪಾಟೀಲ ರವೀಂದ್ರ ಬನ್ನೂರ ಸೇರಿದಂತೆ ಅನೇಕರು ಇದ್ದರು. 


Post a Comment

0 Comments