ಕಿತ್ತೂರ ವಿಜಯ
ಬೆಳಗಾವಿ: ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ 01-ಚಿಕ್ಕೋಡಿ ಮತ್ತು 02-ಬೆಳಗಾವಿ ಲೋಕಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗವು ನಿಯೋಜಿಸಿರುವ ಸಾಮಾನ್ಯ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಜಿಲ್ಲೆಗೆ ಆಗಮಿಸಿದ್ದು, ಸಾರ್ವಜನಿಕರ ಭೇಟಿಗೆ ಲಭ್ಯವಿರುತ್ತಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದ್ದಾರೆ.
02-ಬೆಳಗಾವಿ ಲೋಕಸಭಾ ಕ್ಷೇತ್ರ ಸಾಮಾನ್ಯ ವೀಕ್ಷಕರು:
ಕೆ.ಅರವಿಂದಕುಮಾರ್(ಐ.ಎ.ಎಸ್), ಮೊಬೈಲ್ ಸಂಖ್ಯೆ-7338201395; ಬೆಳಗಾವಿ ಪಿಡಬ್ಲ್ಯುಡಿ ಹೊಸ ಐ.ಬಿ. ಕೊಠಡಿ ಸಂಖ್ಯೆ -5;
ಸಾರ್ವಜನಿಕ ಭೇಟಿ ಸ್ಥಳ-ಸಮಯ: ಮೀಟಿಂಗ್ ಹಾಲ್, ಮೊದಲ ಮಹಡಿ, ಸರ್ಕ್ಯೂಟ್ ಹೌಸ್, ಬೆಳಗಾವಿ ಬೆಳಿಗ್ಗೆ 10 ರಿಂದ 11 ಗಂಟೆ.
* 01-ಚಿಕ್ಕೋಡಿ ಲೋಕಸಭಾ ಕ್ಷೇತ್ರ ಸಾಮಾನ್ಯ ವೀಕ್ಷಕರು:
ಎಸ್.ಪಾಂಡಾ ದಾಸ್(ಐ.ಎ.ಎಸ್), ಮೊಬೈಲ್ ಸಂಖ್ಯೆ-7349611395; ನಿಪ್ಪಾಣಿ, ಪಿಡಬ್ಲ್ಯುಡಿ ವಿ.ಐ.ಪಿ. ಸೂಟ್ ಸಂಖ್ಯೆ -1;
ಸಾರ್ವಜನಿಕ ಭೇಟಿ ಸಮಯ: ಬೆಳಿಗ್ಗೆ 10 ರಿಂದ 11 ಗಂಟೆ.
* ಪೊಲೀಸ್ ವೀಕ್ಷಕರ ನೇಮಕ:
02-ಬೆಳಗಾವಿ ಮತ್ತು 01-ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಪೊಲೀಸ್ ವೀಕ್ಷಕರಾಗಿ ಹಿರಿಯ ಐಪಿಎಸ್ ಅಧಿಕಾರಿ ಪವನಕುಮಾರ್, ಮೊಬೈಲ್ ಸಂಖ್ಯೆ-8123241395; ಬೆಳಗಾವಿ ಪಿಡಬ್ಲ್ಯುಡಿ ಹೊಸ ಐ.ಬಿ. ಕೊಠಡಿ ಸಂಖ್ಯೆ -4;
ಸಾರ್ವಜನಿಕ ಭೇಟಿ ಸಮಯ: ಬೆಳಿಗ್ಗೆ 10 ರಿಂದ 11 ಗಂಟೆ.
ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ನಿಗದಿತ ಸಮಯ ಹಾಗೂ ಸ್ಥಳದಲ್ಲಿ ಸಾಮಾನ್ಯ ವೀಕ್ಷಕರು ಮತ್ತು ಪೊಲೀಸ್ ವೀಕ್ಷಕರನ್ನು ಭೇಟಿ ಮಾಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ನಿತೇಶ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments