
ಕಿತ್ತೂರು ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿದರು
ಕಿತ್ತೂರವಿಜಯ
ಚನ್ನಮ್ಮನ ಕಿತ್ತೂರು: ನಾವು ಪ್ರದಾನಿ ನರೇಂದ್ರ ಮೋದಿ ಅವರ ಗಾಳಿ ಇದೆ ಎಂದು ಮೈಮರೆತು ಚುನಾವಣೆ ಮಾಡಿದರೆ ನಾನು ಉತ್ತರ ಕನ್ನಡ ಸಂಸದನಾಗುವುದಿಲ್ಲ, ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಆಗುವುದಿಲ್ಲ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
ಐತಿಹಾಸಿಕ ಚನ್ನಮ್ಮನ ಕಿತ್ತೂರು ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 10 ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ನೋಡಿ ಮತದಾರರು ಭಾರತೀಯ ಜನತಾ ಪಕ್ಷಕ್ಕೆ ಮತ ಹಾಕಬೇಕು. ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಭಾರದತ ದೇಶದ ಬಡ ಜನರಿಗೆ ಉಚಿತ ಧಾನ್ಯವನ್ನು ವಿತರಿಸಿದ್ದಾರೆ. ರೈತರಿಗೆ ವರ್ಷಕ್ಕೆ ರೂ 6 ಸಾವಿರ ಜನಧನ ಖಾತೆಗಳಿಗೆ ಹಾಕಿದ್ದಾರೆ. ಆಯುಸ್ಮಾನ ಭಾರತ ಯೋಜನೆ ಅಡಿಯಲ್ಲಿ 5 ಲಕ್ಷದ ವರೆಗೆ ಉಚಿತ ಆರೋಗ್ಯ ಚಿಕಿತ್ಸೆಗೆ ಹಣ ನೀಡುತ್ತಿದ್ದಾರೆ. ಬಡವರಿಗೆ ಶೌಚಾಲಯಗಳ ನಿರ್ಮಾಣ ಮಾಡಿದ್ದಾರೆ. ಪ್ರಧಾನ ಮಂತ್ರಿ ಆವಾಸ ಯೋಜನೆ ಅಡಿಯಲ್ಲಿ ಮನೆಗಳನ್ನು ಕಟ್ಟಿ ಕೊಟ್ಟಿದ್ದಾರೆ. ಜಲ್ ಜೀವನ್ ಮಿಷನ್ ಅಡಿಯಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಮಾಡಿದ್ದಾರೆ. ಉಚಿತ ಗ್ಯಾಸ್ ಸಿಲೆಂಡರ ವಿತರಣೆ ಮಾಡುವ ಮೂಲಕ ಹೊಗೆ ಮುಕ್ತ ವಾತವರಣ ನಿರ್ಮಾಣ ಮಾಡಿದ್ದಾರೆ. ಮಹಾಮಾರಿ ಕೊವಿಡ್-19 ಸಮಯದಲ್ಲಿ ವ್ಯಾಕ್ಷಿನ್ ಕಂಡು ಹಿಡಿದು ಭಾರತಿಯರಿಗೆ ಉಚಿತವಾಗಿ ನೀಡಿದ್ದಾರೆ. ಬುಲೆಟ್ ಟ್ರೇನ್ ಅಂದರೆ ಏನು ಎಂದು ಗೊತ್ತಿರದ ನಮಗೆ ಅದರ ಕಲ್ಪನೆಯನ್ನು ನೀಡಿದ್ದಾರೆ. ಕಾಶ್ಮೀರದಲ್ಲಿದ್ದ 370 ಕಾಯಿದೆಯನ್ನು ತೆಗೆದು ಹಾಕಿದ್ದಾರೆ. ಭಯೋತ್ಪಾದನೆಯನ್ನು ಮಟ್ಟಾ ಹಾಕಿದ್ದಾರೆ. ಕಳೆದ ಐದಾರು ಶತಮಾನಗಳಿಂದ ಕಗ್ಗಂಟಾದ ರಾಮ ಮಂದಿರ ನಿರ್ಮಾಣ ಮಾಡಿದ್ದಾರೆ. ಕಳೆದ 10 ವರಷಗಳಿಂದ ಭ್ರಷ್ಟಾಚಾರ ಮುಕ್ತ ಆಡಳಿತ ಮಾಡಲಾಗುತ್ತಿದೆ. ಭಾರತವನ್ನು ಸದೃಡವಾಗಿ ಮಾಡಲು ತಾವುಗಳು ಬಿಜೆಪಿ ಪಕ್ಷಕ್ಕೆ ಮತ ಹಾಕುವ ಮೂಲಕ ತಮ್ಮ ವಾರ್ಡಗಳಲ್ಲಿರುವ ಮತದಾರರ ಮತಗಳನ್ನು ಹಾಕಿಸಬೇಕು ಎಂದು ಮನವಿ ಮಾಡಿದರು.
ನಮ್ಮ ಭಾರತ ದೇಶದದಲ್ಲಿ ಹಿಂದೂಗಳು ಭಗವಾ ಧ್ವಜ ಹಾಕಿದರೆ, ಹಣುಮಾನ ಚಾಲೀಸ್ ಹಚ್ಚಿದರೆ ವಿರೋಧ ಮಾಡುವ ಇವರು ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಭಾದ ಎಂದು ಹೇಳುವ ದೇಶದ್ರೋಹಿಗಳ ಪರ ನಿಲ್ಲುತ್ತಾರೆ. ಇಂತವರು ನಮ್ಮ ದೇಶಕ್ಕೆ ಬೇಕಾ ಅಥವಾ ಭಾರತವನ್ನು ವಿಶ್ವಗುರು ಮಾಡುವ ಮೋದಿ ಅಂಥವರು ಬೇಕಾ ಎಂದು ಜನರು ಆಯ್ಕೆ ಮಾಡಿಕೊಳ್ಳಬೇಕು. ಅಧಿಕಾರ ಅನುಭವಿಸಲು ಉಚಿತ ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿ ಮಾಡದೆ ರಾಜ್ಯವನ್ನು ಹಾಳು ಮಾಡಿದ್ದಾರೆ ಎಂದು ಜರಿದರು.
ಬೆಳಗಾವಿ-ಧಾರವಾಡ-ಕಿತ್ತೂರು ರೈಲು ಕುರಿತು ನನಗೆ ತಿಳಿದಿದೆ. ಕಿತ್ತೂರು ಕೋಟೆ ಕುರಿತು ಈಗಾಗಲೇ ತಯಾರಿಸಿದ ನೀಲನಕ್ಷೆ ಅದನ್ನು ಪರಿಶೀಲಿಸಿ ಬೇಕಾದರೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರದಿಂದ ಆಗುವ ಕಾರ್ಯಗಳನ್ನು ನಾನು ಸಂಸದನಾದರೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಅನಂತಕುಮಾರ ಹೆಗಡೆ ಮತ್ತು ಶಿವರಾಮ ಹೆಬ್ಬಾರ ಅವರು ನಿಮಗೆ ಸ್ಪಂದಿಸುತ್ತಿಲ್ಲಾ ಎಂದು ಕೇಳಿದ ಪ್ರಶ್ನೆಗೆ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಭೂತ ಪ್ರಮುಕರು, ಪದಾಧಿಕಾರಿಗಳು, ಮುಖಂಡರು ಬಿಲಿಷ್ಠರಾಗಿದ್ದಾರೆ ಅವರ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.
ಈ ವೇಳೆ ಬೆಳಗಾವಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಡಾ ಜಗದೀಶ ಹಾರುಗೊಪ್ಪ, ಮಂಜುನಾಥ ಬನಶಂಕರಿ, ಬಸನಗೌಡ ಶಿದ್ರಾಮಣಿ, ರಾಯಪ್ಪ ಹಣಜಿ, ಮಹಾಂತೇಶ ಚಿನ್ನಪ್ಪಗೌಡರ, ಪ್ರಮೋದ ಕಾಜಗಾರ, ನಾಗೇಶ ಸೊಂಟಕ್ಕಿ, ಬಸವರಾಜ ಮಂಗಳಗಟ್ಟಿ, ಸರಸ್ವತಿ ಹೈಬತ್ತಿ, ಸೇರಿದಂತೆ ಇತರರಿದ್ದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಜೆಡಿಎಸ್ ಮುಖಂಡ ಶಂಕರ ಮಾಡಲಗಿ, ಮಾತನಾಡಿದರು. ಮಂಡಲ ಪ್ರಧಾನ ಕಾರ್ಯದರ್ಶಿ ಶಿವಾನಂದ ಹಣಮಸಾಗರ ನಿರೂಪಿಸಿದರು, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಮೇಶ ಉಗರಕೋಡ ಸ್ವಾಗತಿಸಿದರು, ಬೆಳಗಾವಿ ಜಿಲ್ಲಾ ಮಾದ್ಯಮ ಪ್ರಮುಖ ಬಸವರಾಜ ಮಾತನವರ ವಂದಿಸಿದರು.
0 Comments