ಕಿತ್ತೂರ ವಿಜಯ
ಚನ್ನಮ್ಮನ ಕಿತ್ತೂರು : ಉತ್ತರ ಕನ್ನಡ (ಕೆನರಾ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿಗೆ ನಾಳೆ ಸೋಮವಾರ ಐತಿಹಾಸಿಕ ಚನ್ನಮ್ಮನ ಕಿತ್ತೂರು ಮತಕ್ಷೇತ್ರಕ್ಕೆ ಆಗಮಿಸುತ್ತಿರುವ ನಿಕಟಪೂರ್ವ ಸಭಾಧ್ಯಕ್ಷರು ಲೋಕಸಭಾ ನೂತನ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಅದ್ದೂರಿ ಸ್ವಾಗತ ನೀಡಲು ಚನ್ನಮ್ಮನ ಕಿತ್ತೂರು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ನೇತೃತ್ವದಲ್ಲಿ, ಮಂಡಲ ಅಧ್ಯಕ್ಷ ಡಾ ಬಸವರಾಜ ಪರವಣ್ಣವರ ಅವರ ಮುಂದಾಳತ್ವದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಲು ಸಕಲ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ.
ಮುಂಜಾನೆ 10 ಗಂಟೆಗೆ ಚನ್ನಮ್ಮನ ಕಿತ್ತೂರು ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸುವರು. ನಂತರ ಕ್ಷೇತ್ರದಲ್ಲಿ 2 ಬೃಹತ್ ಕಾರ್ಯಕರ್ತರ ಸಭೆ ನಡೆಸಿ ನಂತರ ಕ್ಷೇತ್ರದಲ್ಲಿರುವ ದೇವರಶಿಗಿಹಳ್ಳಿ ಮಡಿವಾಳೇಶ್ವರ ಮಠ, ಕಿತ್ತೂರು ಕಲ್ಮಠ, ಕಾದರವಳ್ಳಿ ಸೀಮಿಮಠ, ಹಾಗೂ ರಾಮ ಮಂದಿರ ಸೇರಿದಂತೆ ಇತರೆ ಕೆಲವು ಮಠಗಳಿಗೆ ಭೇಟಿ ನೀಡಲಿದ್ದಾರೆ ಎಂದು ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ತಿಳಿಸಿದ್ದಾರೆ
0 Comments