ಅವರಾದಿಯಲ್ಲಿ ಗುಡಿಸಲಿಗೆ ಬೆಂಕಿ ಅಪಾರ ಹಾನಿ; ಶಾಸಕ ಬಾಬಾಸಾಹೇಬ ಪಾಟೀಲ ಬೇಟಿ

 

             ಘಟನಾ ಸ್ಥಳಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಬೇಟಿ ನೀಡಿದರು


ಕಿತ್ತೂರ ವಿಜಯ 

ಚನ್ನಮ್ಮನ ಕಿತ್ತೂರು:  ಶಾರ್ಟ್ ಸರ್ಕ್ಯೂಟ್ ನಿಂದ ತೆಂಗಿನ ಮರ ಹಾಗೂ ಪಕ್ಕದಲ್ಲಿ ಇರುವ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡ ಘಟನೆ ತಾಲೂಕಿನ ಅವರಾದಿ ಗ್ರಾಮದಲ್ಲಿ ನಡೆದಿದೆ.

ರಾಮಪ್ಪ ಹೊಸಮನಿ ಅವರಿಗೆ ಸಂಬಂಧಿಸಿದ ಗುಡಿಸಲಿಗೆ ಬೆಂಕಿ ಬಿದ್ದ ಪರಿಣಾಮ ಒಂದು ಎಮ್ಮೆ ಹಾಗೂ ಎರಡು ಕರುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಗುಡಿಸಲಿನಲ್ಲಿದ್ದ ಹಿರೋ ಸ್ಲ್ಪೆಂಡರ್ ದ್ವಿ ಚಕ್ರ‌ ವಾಹನ ಸಂಪೂರ್ಣ ಸುಟ್ಟು ಹೋಗಿದೆ. ದಿನ ಬಳಕೆ ವಸ್ತುಗಳು ಸಹಿತ ಸುಟ್ಟು ಕರಕಲಾಗಿವೆಒಟ್ಟಾರೆ ಹೆಸ್ಕಾಂ ನಿರ್ಲಕ್ಷ್ಯದಿಂದಾಗಿ ಗುಡಿಸಲು ಸುಟ್ಟು ಭಸ್ಮವಾಗಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. 

ಅಗ್ನಿ ಅನಾಹುತದಿಂದ ಸುಮಾರು ಮೂರು ಲಕ್ಷದಷ್ಟು  ಹಾನಿಯಾಗಿದೆ ಅಂತ ಅಂದಾಜಿಸಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕ ಬಾಬಾಸಾಹೇಬ ಪಾಟೀಲ ಬೇಟಿ ನೀಡಿ ಪರಿಹಾರದ ಭರವಸೆ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ. 

 

ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post a Comment

0 Comments