10 ಕೋಟಿ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಹಾಗೂ ಶಾಸಕರ ನೂತನ ಕಾರ್ಯಾಲಯ ಉದ್ಘಾಟಿಸಿದ ಸಚಿವ ಸತೀಶ ಜಾರಕಿಹೊಳಿ

 

ಸಂಸದ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷವಾಗಿ ಕುಟುಕಿದ ಸಚಿವ ಸತೀಶ ಜಾರಕಿಹೊಳಿ

ಕಿತ್ತೂರ ವಿಜಯ

ಚನ್ನಮ್ಮನ ಕಿತ್ತೂರು ನೂತನವಾಗಿ ಆಯ್ಕೆಯಾದ ಶಾಸಕರಿಗೆ ಸರ್ಕಾರದ ಕಾರ್ಯವೈಖರಿ, ಕ್ಷೇತ್ರದ ಅಭಿವೃದ್ಧಿಯಲ್ಲಿ ಶಾಸಕರ ಪಾತ್ರ, ಇಲಾಖಾವಾರು ಅನುದಾನದ ಲಭ್ಯತೆ ಹಾಗೂ ಅನುಷ್ಠಾನ ಪ್ರಕ್ರಿಯೆ ಮೊದಲಾದವುಗಳನ್ನು ತಿಳಿದುಕೊಳ್ಳಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಆದರೆ ಶಾಸಕ ಬಾಬಾಸಾಹೇಬ ಪಾಟೀಲ ಅತಿ ಕಡಿಮೆ ಅವಧಿಯಲ್ಲಿ  ಕ್ರಿಯಾಶೀಲತೆಯಿಂದ ಎಲ್ಲ ಇಲಾಖೆಗಳು ಸಚಿವರು ಸರ್ಕಾರದ ಅಧಿಕಾರಿಗಳೊಂದಿಗೆ  ಸರಳವಾಗಿ ಕ್ಷೇತ್ರದ ಅಭಿವೃದ್ಧಿಗೆ ಅವಶ್ಯಕ ಪ್ರಸ್ತಾವನೆ ಸಲ್ಲಿಸಿ ಅಭಿವೃದ್ಧಿ ಕೆಲಸದಲ್ಲಿ ತೊಡಗಿಕೊಂಡು ಮತದಾರರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು

ಪಟ್ಟಣದ ಹಳೆಯ ತಹಶೀಲ್ದಾರ ಕಛೇರಿ ಅಂಗಳದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶಾಸಕರ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದವರು.

ಸರ್ಕಾರ ರಚನೆಯಾಗಿ ವರ್ಷ ತುಂಬುವ ಹೊತ್ತಲ್ಲೇ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆ ಅನುದಾನವನ್ನು ಒದಗಿಸಲಾಗಿದೆ ವಿಶೇಷವಾಗಿ ಬಾಬಾಸಾಹೇಬ ಅವರು ನೂತನವಾಗಿ ಶಾಸಕರಾದ ತಕ್ಷಣವೇ ಕಿತ್ತೂರು ಉತ್ಸವದ ಸಂದರ್ಭದಲ್ಲಿ ಕಿತ್ತೂರು ಪಟ್ಟಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದರು. ಪ್ರತಿ ವರ್ಷ ಐದು ಕೋಟಿ ಅನುದಾನ ನೀಡುವ ಭರವಸೆ ನೀಡಿದಂತೆ ಭರವಸೆಗೂ ಮೀರಿ ಪಟ್ಟಣದ ಅಭಿವೃದ್ಧಿಗೆ 7.5 ಕೋಟಿ ಅನುದಾನವನ್ನು ಒದಗಿಸಲಾಗಿದೆ ಇದಕ್ಕೆ ಅವರ ಕ್ರಿಯಾಶೀಲತೆಯೇ ಕಾರಣ ಎಂದರು. ಇದಲ್ಲದೇ ರಸ್ತೆ ಅಭಿವೃದ್ಧಿ ಕೆಲಸಗಳಿಗಾಗಿ ಸಾಕಷ್ಟು ಅನುದಾನ ನೀಡಿದ್ದು ಪ್ರಸ್ತುತ ಟೆಂಡರ್ ಹಂತದಲ್ಲಿವೆ ಲೋಕಸಭಾ ಚುನಾವಣೆ ನಂತರ ಪ್ರಾರಂಭವಾಗುತ್ತವೆ ಎಂದರು. ಎಂದ ಅವರು ಕಿತ್ತೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಒಳಗೊಂಡು ಲೋಕೋಪಯೋಗಿ ಇಲಾಖೆಯಿಂದ ಕಟ್ಟಡ ಡೆಸ್ಕ ಸೇರಿ ಅವುಗಳಿಗೆ ಮೂಲ ಸೌಲಭ್ಯ ಒಳಗೊಡಂತೆ  5 ಸರ್ಕಾರಿ ಶಾಲೆಗಳನ್ನು ನಿರ್ಮಿಸಿಕೊಡಲಾಗುವುದು. ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುವಂತೆ ವ್ಯವಸ್ಥೆ ಮಾಡಲಾಗುವುದು. ಹಾಳಾಗಿರುವ ರಸ್ತೆ ಸದ್ಯದಲ್ಲಿ ಸರಿಪಡಿಸಲು ತಕ್ಷಣ ದುರಸ್ತಿಗೆ ಸಹಾಯವಾಗುವಂತೆ 1500 ಮೈಲ್ ಕೂಲಿಕಾರ್ಮಿಕರನ್ನು ನೇಮಕ ಮಾಡಿಕೊಂಡು ಪ್ರತಿ 30 ಕಿ.ಮೀ. ಒಬ್ಬರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು. ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದಿದೆ ಸರ್ಕಾರದ ಎಲ್ಲ ಗ್ಯಾರಂಟಿ ಗಳು ಬಡವರಿಗೆ ಅನುಕೂಲವಾಗಿದೆ ಎಂದರು.

ಟ್ರೀ ಪಾರ್ಕ್‌ ಕಾರ್ಯಕ್ಕೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಮತ್ತು ಶಾಸಕ ಬಾಬಾಸಾಹೇಬ ಪಾಟೀಲ

ಅಭಿವೃದ್ಧಿ ಕೆಲಸ ಮಾಡಿ ಮತ ಕೇಳುವವರಿಗೆ ಮತ ಕೊಡಿ ನೆರೆ ಹಾವಳಿ ಹಾಗೂ ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ನೆರವಾಗದೇ ಆಸ್ಪತ್ರೆಯಿಂದ ನೇರವಾಗಿ ಚುನಾವಣೆ ಪ್ರಚಾರಕ್ಕೆ ಬರುವವರಿಗೆ ಮತ ನೀಡಬೇಡಿ ಅಂತ ಪರೋಕ್ಷವಾಗಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಕುಟುಕಿದರು.

 

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದಲ್ಲಿ ನನ್ನ ಮೇಲೆ ಭರವಸೆ ಇಟ್ಟು ಮತ ಹಾಕಿದ ಮತದಾರರ ಋಣ ತೀರಿಸಲು ನಾನು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕವೇ ಉತ್ತರಿಸುತ್ತೇನೆ. ನಾನು ಮಾತನಾಡುವುದು ಅಳಿದು ಹೋಗಬಹುದು ಮಾಡಿದ ಕೆಲಸ ಉಳಿಯಬೇಕು ಹೀಗಾಗಿ ಮಾತಿಗಿಂತ ಕೃತಿಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಈಗಾಗಲೇ ಐದು ವರ್ಷಗಳವರೆಗೆ ಮಾಡಬೇಕಾದ ಕೆಲಸಗಳ ಪಟ್ಟಿ ಮಾಡಿಕೊಂಡು ಸಂಬಂಧಿತ ಇಲಾಖೆಗಳಿಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ಹಂತ ಹಂತವಾಗಿ ಅಭಿವೃದ್ಧಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ. ಮಾನ್ಯ ಸಚಿವರು ನೀಡಿದ ಭರವಸೆಗಿಂತ ಹೆಚ್ಚಿನ ಅನುದಾನ ನೀಡಿದ್ದಾರೆ ಅವರ ಇಲಾಖೆಯಿಂದ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅನುದಾನ ಪಡೆದಿರುವ ಏಕೈಕ ಕ್ಷೇತ್ರ ಕಿತ್ತೂರು ಹೀಗಾಗಿ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದರು. ಇದು ಕೇವಲ ಪಟ್ಟಣಕ್ಕೆ ನೀಡಿದ ಅನುದಾನ ಇದಲ್ಲದೇ ಇತರೆ ಅಭಿವೃದ್ಧಿ ಕೆಲಸಗಳಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ ಚುನಾವಣೆ ನಂತರ ಅವುಗಳಿಗೆ ಚಾಲನೆ ಕೊಡಲಾಗುವುದು ಎಂದರು.

 

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಕಿತ್ತೂರ ಮತ್ತೇ ತನ್ನ ಗತವೈಭವಕ್ಕೆ ಮರಳುತ್ತಿದೆ. ನಾಡು ಕಂಡ ಕ್ರಿಯಾಶೀಲ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದಂತೆ ನಡೆವ ಸಚಿವರಾಗಿದ್ದು ಅವರ ಕಿತ್ತೂರು ಕ್ಷೇತ್ರದ ಮೇಲಿಟ್ಟ ಪ್ರೀತಿ ಮತ್ತು ಸ್ಥಳೀಯ ಶಾಸಕರ ಕ್ರಿಯಾಶೀಲತೆಯಿಂದ ಇಂತಹ ಅಭಿವೃದ್ಧಿ ಕೆಲಸಗಳು ಅನುಷ್ಠಾನಗೊಳ್ಳುತ್ತಿರುವುದು ಅಭಿನಂದನೀಯ. ಸಚಿವರು,  ಶಾಸಕರು ಕ್ರೀಯಾಶೀಲರಾಗಿದ್ದಾರೆ ಇವರಿಬ್ಬರು ಸೇರಿ ಕಿತ್ತೂರಿನ ಸರ್ವಾಗೀಣ ಅಭಿವೃದ್ಧಿಗೆ ಬದ್ಧರಾಗಿದ್ದಾರೆ. ಇವರ ಸದುಪಯೋಗ ಕಿತ್ತೂರ ನಾಡಿನ ಜನತೆ ಪಡೆದುಕೊಳ್ಳಬೇಕು. ಅವರ ಅವಧಿಯಲ್ಲಿ ಪಟ್ಟಣ ಇನ್ನಷ್ಟು ಸುಧಾರಣೆ ಕಾಣುವಂತಾಗಲಿ ಅಂತ ಹಾರೈಸಿದರು. 

ಧಾರವಾಡ ಗ್ರಾಮೀಣ ಶಾಸಕ ಹಾಗೂ ರಾಜ್ಯ ನಗರ ನೀರು ಸರಬರಾಜು  ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ವಿನಯ ಕುಲಕರ್ಣಿ ಮಾತನಾಡಿ ನಮ್ಮ ಇಲಾಖೆಯಿಂದ ಕಿತ್ತೂರ ಪಟ್ಟಣದ ಒಳಚರಂಡಿ ಅನುಷ್ಠಾನ ಕೆಲಸಕ್ಕೆ ಈಗಾಗಲೇ ವಿಸ್ತೃತ ಯೋಜನಾ ವರದಿ ಸಿದ್ದವಾಗಿದ್ದು ಚುನಾವಣೆ ನಂತರ ಅನುದಾನ ಬಿಡುಗಡೆ ಮಾಡಲಾಗುವುದುಎಂದರು. 

ಶಾಸಕರ ಕಾರ್ಯಾಲಯ ಉದ್ಘಾಟನೆ ನೆರವೇರಿಸಲಾಯಿತು


ವೇಳೆ ಕಿತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಗನಗೌಡ ಪಾಟೀಲ ನೇಸರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಕೇರಿ, ಕೆಪಿಸಿಸಿ ಮಾಜಿ ಸದಸ್ಯ ಶಂಕರ ಹೊಳಿ, ಶಿವಯೋಗಿಗೌಡ ಪಾಟೀಲ, ಪುಂಡಲೀಕ ನೀರಲಕಟ್ಟಿ, ಕಿರಣ ವಾಳದ, ಕೃಷ್ಣಾ ಬಾಳೇಕುಂದರಗಿ, ಮುದಕಪ್ಪ ಮರಡಿ, ಎಂ.ಎಫ್ ಜಕಾತಿ, ಚಂದ್ರಗೌಡ ಪಾಟೀಲ, ಸುನೀಲ ಘೀವಾರಿ ಅಶ್ಪಾಕ್ ಹವಾಲ್ದಾರ, ಶಂಕರ ಬಡಿಗೇರ, ಮುದಕಪ್ಪ ಮರಡಿ, ಪ.ಪಂ ಸರ್ವಸದಸ್ಯರು, ಮುಖಂಡರು, ಕಂದಾಯ ಇಲಾಖೆ, ಪೋಲಿಸ ಇಲಾಖೆ, ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು,ಪಕ್ಷದ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು.

ಅನೀಲ ಎಮ್ಮಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾಡಿದರುಸಾಗರ ಕಾಗತಿ ವಂದಿಸಿದರು.

 

          

Post a Comment

0 Comments