ಶಿವಮೊಗ್ಗ : ಮಕ್ಕಳೆದುರು ಪೋಷಕರು ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆ ಮಾಡುವುದು ಸಲ್ಲದು ಎಂದು ಸರ್ಜಿ ಆಸ್ಪತ್ರೆಗಳ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಧನಂಜಯ ಸರ್ಜಿ ಹೇಳಿದರು.
ಶಿವಮೊಗ್ಗದ ಜೆ.ಎಚ್.ಪಟೇಲ್ ಬಡಾವಣೆಯ ಶ್ರೀ ರವಿಶಂಕರ್ ವಿದ್ಯಾ ಮಂದಿರದಲ್ಲಿ ಗುರುವಾರ ಬೆಳಗ್ಗೆ ಹಮ್ಮಿಕೊಂಡ ಶ್ರೀ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೋಷಕರೇ ಮಕ್ಕಳೆದುರು ಹೆಚ್ಚು ಟಿವಿ ಮತ್ತು ಮೊಬೈಲ್ ಫೋನ್‌ನಲ್ಲಿ ತಲ್ಲೀನರಾಗಿ ಕಾಲ ಹರಣ ಮಾಡಿದರೆ, ಮಕ್ಕಳು ಅದನ್ನೇ ಪಾಲನೆ ಮಾಡುತ್ತಾರೆ, ಹಾಗಾಗಿ ಪೋಷಕರು ಟಿವಿ ಮತ್ತು ಮೊಬೈಲ್ ಫೋನ್ ಬಳಕೆಯಿಂದ ದೂರವಿರಬೇಕು ಎಂದು ಹೇಳಿದರು.
ಪ್ರತಿ ತಂದೆ ತಾಯಿಗಳಿಗೂ ಮಕ್ಕಳು ಬಹದೊಡ್ಡ ಸಾಧನೆ ಮಾಡಬೇಕೆಂಬ ಮಹತ್ವಾಕಾಂಕ್ಷೆ ಇರುತ್ತದೆ, ಇದು ಈಡೇರಬೇಕಾದರೆ ಒಳ್ಳೆಯ ಗುರುವಿನ ಮಾರ್ಗದರ್ಶನ ಇರಬೇಕು, ಸ್ಪಷ್ಟವಾದ ಗುರಿಯೂ ಇರಬೇಕು, ಇದಕ್ಕೆ ಪೋಷಕರು ಬೆಂಬಲವಾಗಿ ನಿಲ್ಲಬೇಕು ಎಂದು ಅಭಿಪ್ರಾಯಿಸಿದರು.
ವೇದಿಕೆಯಲ್ಲಿ ಶ್ರೀ ರವಿಶಂಕರ್ ವಿದ್ಯಾ ಮಂದಿರದ ಕಾರ್ಯದರ್ಶಿ ಬಿ.ಪ್ರಭಾಕರ, ಬಿಇಒ ಪಿ.ನಾಗರಾಜ್ ಹಾಜರಿದ್ದರು. ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
0 Comments