ಕಕ್ಕೇರಿಯಲ್ಲಿ ಶಾರ್ಟ್ ಸರ್ಕ್ಯೂಟನಿಂದ ಸುಟ್ಟು ಕರಕಲಾದ ಕಬ್ಬು



ಎಂ.ಕೆ. ವಾಣಿ ನ್ಯೂಸ್ 

ಖಾನಾಪುರ:  ತಾಲೂಕಿನ ಕಕ್ಕೇರಿ ಗ್ರಾಮದ ರೈತ ರವೀಂದ್ರ  ಅಪ್ಪಯ್ಯ ಡೊಳ್ಳಿನವರ ಇವರ  3 ಎಕರೆ ಭೂಮಿಯಲ್ಲಿ ಬೆಳೆದಿರುವ ಸುಮಾರು 60 ಟನ್ ಕಬ್ಬು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸುಟ್ಟು ಕರಕಲಾಗಿದೆ.

ಹೊಲದ ಪಕ್ಕದಲ್ಲಿ ಇನ್ನೂ ಸಾವಿರಾರು ಟನ್ ಕಬ್ಬಿಣ ಬೆಳೆ ಇದ್ದು  ತಕ್ಷಣ ಅಕ್ಕಪಕ್ಕದ ರೈತರು ಹೊಲಗಳಲ್ಲಿ ಕೆಲಸ ಕಾರ್ಯಗಳು ಬಿಟ್ಟು ಎಲ್ಲರೂ ಕೂಡಿಕೊಂಡು ಹರಸಾಸಪಟ್ಟು ಪಕ್ಕದ ಹೊಲಗಳಿಗೆ ಬೆಂಕಿಯ ಕೆನ್ನಾಲಿಗೆ ತಗುಲದಂತೆ ಜೀವದ ಹಂಗು ತೊರೆದು ಬೆಂಕಿ ನಂದಿಸುವಲ್ಲಿ ರೈತರ ಯಸಶ್ವಿಯಾಗಿದ್ದಾರೆ.

ರೈತ  ರವೀಂದ್ರ ಅಪ್ಪಯ್ಯ ಡೊಳ್ಳಿನನವರ ಕಬ್ಬು ನಾಟಿಮಾಡುವಾಗ ಬ್ಯಾಂಕಿನಲ್ಲಿ ಸಾಲ ಮಾಡಿ ಕಬ್ಬು ಬೆಳೆಸಲು ಗ್ರಾಮದ ಶ್ರೀಮಂತರ ಬಳಿ ಕೈಗಡ ಹಣ ಪಡೆದು ತನ್ನ 3 ಎಕ್ಕರೆ ಭೂಮಿಯಲ್ಲಿ ಕಬ್ಬು ಬೆಳೆದಿದ್ದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.


ಸುಟ್ಟು ಕರಕಲಾದ ವಸ್ತುಗಳು:

ಪಶುಗಳನ್ನು ಕಟ್ಟುವ ಹಾಗೂ ಭೂಮಿ ಉಳುಮೆ ಮಾಡುವ ಸಾಮಗ್ರಿಗಳನ್ನು ಸಂಗ್ರಹಿಸಿ  ಇಡಲು ಕಟ್ಟಿದ ಮನೆ ಹಾಗೂ  ಕೊಳವೆ ಬಾವಿಯಿಂದ ನೀರು ಹಾಯಿಸಲು ತಂದು ಮನೆಯ ಪಕ್ಕದಲ್ಲಿದ್ದ  ದಡ್ಡಿಯಲ್ಲಿ ಸಂಗ್ರಹಿಸಿಟ್ಟ ನೂರಾರು ಪೈಪುಗಳು, ಮೋಟರ್, ಮೋಟರ್ ಡಬ್ಬಿ ಹಾಗೂ ಎತ್ತುಗಳಿಗೋಸ್ಕರ ಸಂಗ್ರಹಿಸಿಟ್ಟ ಭತ್ತದ ಬಣವಿ ಸುಟ್ಟು ಕರಕಲಾಗಿದೆ.

ರೈತ ರವೀಂದ್ರ ಅವರ ಕುಟುಂಬದಲ್ಲಿ ತಂದೆ ,ತಾಯಿ, ಪತ್ನಿ, ಇಬ್ಬರು ಮಕ್ಕಳು, ತಮ್ಮ, ತಮ್ಮನ  ಪತ್ನಿ, ಇಬ್ಬರು ಮಕ್ಕಳು ಸೇರಿದಂತೆ ಒಟ್ಟು 10 ಜನ ಸದಸ್ಯರು ವಾಸವಾಗಿರುತ್ತಾರೆ. ತಾನು ಬೆಳೆದಿರುವ ಕಬ್ಬಿನ ಬೆಳೆಯ ಆದಾಯದ ಮೇಲೆ ಬಂದ ಹಣದಲ್ಲಿ ಜೀವನ ಸಾಗಿಸುವ ಈ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ. ಇನ್ನು ಮುಂದೆ ಹೇಗೆ ಜೀವನ ಸಾಗಿಸಬೇಕೆನ್ನುವ ಚಿಂತೆ ರೈತ ಕುಟುಂಬದಲ್ಲಿ ಕಾಡುತ್ತಿದೆ.


ಬೇಟಿ ನೀಡದ ಜನಪ್ರತಿನಿಧಿಗಳು ಹಾಗೂ  ಅಧಿಕಾರಿಗಳು:

ಇದುವರೆಗೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಭೇಟಿ ನೀಡಿರುವುದಿಲ್ಲ.

ರೈತ ಮುಖಂಡರು ಹಾಗೂ ಅಖಿಲ ಕರ್ನಾಟಕ ರೈತ ಸಂಘ ರಿ ಬೆಂಗಳೂರು ಇದರ ರಾಜ್ಯ ಉಪಾಧ್ಯಕ್ಷ ಕಿಶೋರ ಮಿಠಾರಿ ಅವರು ರೈತ ರವೀಂದ್ರ ಅವರ ಹೊಲಕ್ಕೆ ಹೋಗಿ ಸುಟ್ಟಿರುವ ಬೆಳೆ ಹಾಗೂ ಸಾಮಗ್ರಿಗಳನ್ನು ನೋಡಿ ಪರಿಶೀಲಿಸಿ ಅವರ ಕುಟುಂಬಕ್ಕೆ ಸಾಂತ್ವಾನ ಹೇಳಿ . ಸರ್ಕಾರದಿಂದ ಪರಿಹಾರವನ್ನು ಕೊಡಿಸುವ ಭರವಸೆ ನೀಡಿದ್ದಾರೆ.

Post a Comment

0 Comments