ಎಂ.ಕೆ. ವಾಣಿ
ಹುಕ್ಕೇರಿ: ಪಟ್ಟಣದಲ್ಲಿ ಮಂಗಳವಾರ ನಡೆದ ತಾಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರ ಸಭೆಯಲ್ಲಿ ಹೊಸದಾಗಿ ವಿವಿಧ ದಲಿತಪರ ಸಂಘಟನೆಗಳ ಮಹಾ ಒಕ್ಕೂಟ ರಚಿಸಲು ತೀರ್ಮಾನಿಸಲಾಯಿತು.
ಮಹಾ ಒಕ್ಕೂಟದ ಗೌರವ ಅಧ್ಯಕ್ಷರಾಗಿ ಕಲ್ಲಪ್ಪ ಕಟ್ಟಿ, ಅಧ್ಯಕ್ಷರಾಗಿ ಸಿದ್ದಪ್ಪ ಹೊಸಮನಿ, ಉಪಾಧ್ಯಕ್ಷರಾಗಿ ವಿಠ್ಠಲ ಮಾದರ ಹಾಗೂ ಸುಂದರ ಶಿಂಗೆ, ಪ್ರಧಾನ ಕಾರ್ಯದರ್ಶಿಯಾಗಿ ಕೆಂಪಣ್ಣ ಶಿರಹಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.
ನಂತರ ಶೀಘ್ರವೇ ಹುಕ್ಕೇರಿ ಪಟ್ಟಣದಲ್ಲಿ ಬೃಹತ್ ಸಮಾವೇಶ ಏರ್ಪಡಿಸುವ ಮೂಲಕ ತಾಲೂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಕ್ತಿ ಪ್ರದರ್ಶನ ನಡೆಸಲು ನಿರ್ಧರಿಸಲಾಯಿತು.
ಮುಖಂಡರಾದ ಬಸವರಾಜ ಖಡಕಭಾಂವಿ, ಮಲ್ಲಿಕಾರ್ಜುನ ರಾಶಿಂಗೆ, ದಿಲೀಪ ಹೊಸಮನಿ, ಪ್ರಕಾಶ ಮೈಲಾಖೆ, ಕೆ.ವೆಂಕಟೇಶ, ಆನಂದ ಕೆಳಗಡೆ, ಶ್ರೀನಿವಾಸ ವ್ಯಾಪಾರಿ, ಆನಂದ ಖಾತೇದಾರ, ಚಿದಾನಂದ ಹಿರೇಕೆಂಚನವರ, ರಾಜು ಮೂಥಾ, ಮಂಜು ಪಡದಾರ, ಲಕ್ಷö್ಮಣ ಹೂಲಿ, ಸೋಮು ಜೀವಣ್ಣವರ, ಮಾರುತಿ ಚಿಕ್ಕೋಡಿ, ಬಾಹುಸಾಬ ಪಾಂಡ್ರೆ, ಸುನೀಲ ಖಾತೇದಾರ, ಮಹೇಶ ಮಾಳಗೆ, ಕಾಡೇಶ ಹೊಸಮನಿ, ಸುಖದೇವ ತಳವಾರ, ವಿಠ್ಠಲ ಅವುಬಾಯಿಗೋಳ, ಮಹಾದೇವಿ ಪಾಟೀಲ, ರೇಖಾ ಬಂಗಾರಿ, ಬಸವರಾಜ ಕಾಂಬಳೆ, ಕಿರಣ ಕೋಳಿ, ಶಿವಾನಂದ ಮಾಳಗೆ ಮತ್ತಿತರರು ಉಪಸ್ಥಿತರಿದ್ದರು.
0 Comments