ನ್ಯಾಯಬೆಲೆ ಅಂಗಡಿಯಿಂದ ಪಡಿತರ ಚೀಟಿದಾರರಿಗೆ ತಲುಪುವ ಮಧ್ಯೆ ನೂರೆಂಟು ನಿಯಮ ಮಾಡಿರುವ ಆಹಾರ ಇಲಾಖೆ ಅದೇ ನ್ಯಾಯಬೆಲೆ ಅಂಗಡಿಯಿಂದ ಯಾರಿಗೂ ತಿಳಿಯದಂತೆ ಕಳ್ಳ ಸಾಗಾಣಿಕೆ ಆಗುತ್ತಿರುವುದನ್ನು ತಡೆಯುವಲ್ಲಿ ವಿಫಲ ಆಗಿದ್ದೆ. ರಾಜ್ಯದಲ್ಲಿ ಸಾಲು ಸಾಲು ಹಗರಣಗಳಿಗೆ ಕಾರಣವಾಗಿದೆ.
ಆಹಾರ ಭದ್ರತಾ ಕಾಯಿದೆಯಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ವಿತರಣೆ ಮಾಡುವ ಪಡಿತರ ಅಕ್ಕಿಗೆ ಯಾವುದೇ ಭದ್ರತೆ ಇಲ್ಲದಿರುವುದು ಪದೇ ಪದೆ ಕಳ್ಳತನ ಮತ್ತು ಕಳ್ಳ ಸಾಗಾಣಿಕೆ ಆಗುತ್ತಿರುವುದಕ್ಕೆ ಕಾರಣವಾಗಿದೆ. ಪಡಿತರ ಅಕ್ಕಿಯನ್ನು ದಾಸ್ತಾನು ಇರಿಸಿರುವ ಗೋದಾಮಿಗಾಗಲಿ, ಗೋದಾಮಿನಿಂದ ಅಕ್ಕಿ ವಿಲೇವಾರಿಯಾಗುವ ವಿಚಾರದಲ್ಲಾಗಲಿ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದಿರುವುದು ಅಕ್ಕಿ ಕಳ್ಳರಿಗೆ ರಹದಾರಿ ನೀಡಿದಂತಾಗಿದೆ.
ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ಕಾರಿ ನಿಯಮ ಪಾಲನೆ ಮಾಡದೇ ನಾಗರಿಕರ ಕಣ್ಣಿಗೆ ಮಣ್ಣೆರಚುತ್ತಿದ್ದು ಯಾವ ಕಾರ್ಡ್ ಈ ತಿಂಗಳು ಎಷ್ಟು ಸೌಲಭ್ಯ ಪಡೆಯುತ್ತದ್ದೆ ಎಂಬ ನಾಮಪಲಕ ನ್ಯಾಯಬೆಲೆ ಅಂಗಡಿಯಲ್ಲಿ ಮಾಯವಾಗಿರುತ್ತದೆ. ಜೊತೆಗೆ ಸುರಕ್ಷತೆಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮೆರಾವಾಗಲಿ, ಆವರಣದಲ್ಲಿ ಬೆಳಕಿನ ವ್ಯವಸ್ಥೆಯಾಗಲಿ ಇಲ್ಲದಿರುವುದು ಅವಾಂತರಕ್ಕೆ ಕಾರಣವಾಗಿದೆ.
ಸರಕಾರ ಹಣ ನೀಡಿದರೂ ಅಕ್ಕಿ ದೊರೆಯದ ಸನ್ನಿವೇಶವಿದ್ದು, ಇಂತಹ ಸಮಯದಲ್ಲಿ ಇರುವ ಅಕ್ಕಿಯನ್ನು ಜೋಪಾನ ಮಾಡಿಕೊಳ್ಳಬೇಕಾದ ಜವಾಬ್ದಾರಿ ಆಹಾರ ಇಲಾಖೆಯ ಅಧಿಕಾರಿಗಳ ಮೇಲಿದೆ. ಆದರೆ ಪಡಿತರ ಚೀಟಿದಾರರಿಗೆ ನೀಡುವ ಪ್ರತಿ ಕೆಜಿ ಅಕ್ಕಿಗೆ ಸಾಕಷ್ಟು ಮಾನದಂಡ ವಿಧಿಸುವ ಆಹಾರ ಇಲಾಖೆ ಗೋದಾಮಿನಲ್ಲಿ ಮತ್ತು ನ್ಯಾಯಬೆಲೆ ಅಂಗಡಿಗಳಲ್ಲಿರುವ ಅಕ್ಕಿಯನ್ನು ರಕ್ಷಣೆ ಮಾಡುವಲ್ಲಿ ಮತ್ತು ಯಶಸ್ವಿಯಾಗಿ ಸೂಕ್ತ ವ್ಯಕ್ತಿಗಳಿಗೆ ಮುಟ್ಟಿಸುವಲ್ಲಿ ತನ್ನ ಬೇಜವಾಬ್ದಾರಿಯನ್ನು ಮರೆತ್ತಿರುವ ಸರ್ಕಾರ ಮತ್ತು ಅಧಿಕಾರಿ ವರ್ಗ ಸಾರ್ವಜನಿಕ ವಲಯದ ಮೇಲೆ ಇರುವ ಕಾಳಜಿಯನ್ನು ಎತ್ತಿ ತೋರಿಸುತ್ತದ್ದೆ.
ರಾಜ್ಯದಲ್ಲಿ ಅದೆಷ್ಟೋ ಶ್ರೀಮಂತರ ಬಳಿ ಬಿಪಿಎಲ್ ಕಾರ್ಡ್ ಇದ್ದು ಅದೆಷ್ಟೋ ಬಡ ಜನತೆಯ ಬಳಿ ಎಪಿಎಲ್ ಕಾರ್ಡ್ ಇದೆ ಇದು ಸಾಮಾನ್ಯವಾಗಿ ಸರ್ಕಾರದ ನಡೆಯನ್ನು ಎತ್ತಿ ತೋರಿಸುತ್ತದೆ. ಇಲ್ಲಿ ಗಮನಿಸಬೇಕಾದ್ದದ್ದು ಅಧಿಕಾರಿ ವರ್ಗ ತನ್ನ ಅಧಿಕಾರದಲ್ಲಿ ಎಷ್ಟು ಸರಿಯಾಗಿ ಕೆಲಸ ಮಾಡಿದೆ ಎಂದು.
ರಾಜ್ಯದಲ್ಲಿ ಸರಿಯಾದ ಸರ್ವೆಯಂತೆ ಪಂಡಿತರ ಚೀಟಿಗಳನ್ನು ಕೊಟ್ಟಿದ್ದರೆ ಅನ್ನಭಾಗ್ಯದ ಯೋಜನೆ ಮಾಡಿದ್ದಕ್ಕೋ ಸಾರ್ಥಕವಾಗುತ್ತಿತ್ತು. ಆದರೆ ಇಲ್ಲಿ ಆಗಿದ್ದು ಬಡವ ಎಪಿಎಲ್ ಶ್ರೀಮಂತ ಬಿಪಿಎಲ್ ಇದು ಈ ರಾಜ್ಯದ ನಿಯಮಪಾಲನೆ.

.jpeg)
0 Comments