Kittur-ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ದಾಸ ಶ್ರೇಷ್ಠ ಕನಕದಾಸರು

ಸಾಹಿತ್ಯದ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ದಾಸ ಶ್ರೇಷ್ಠ ಕನಕದಾಸರು
ಚನ್ನಮ್ಮನ ಕಿತ್ತೂರ : ಕನಕದಾಸರು ಅತ್ಯಂತ ಪ್ರಸಿದ್ಧ ಭಕ್ತಿ ಕವಿಗಳಲ್ಲಿ ಒಬ್ಬರಾಗಿದ್ದು ಪ್ರಸಿದ್ಧ ಕವಿ, ತತ್ವಜ್ಞಾನಿ ಮತ್ತು ಸಮಾಜ ಸುಧಾರಕ ಭಕ್ತಿಗೀತೆಯನ್ನು ರಚಿಸಿ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತನ್ನ ಸಾಹಿತ್ಯದ ಮೂಲಕ ತಿದ್ದಿದ ದಾಸ ಶ್ರೇಷ್ಠ ಶ್ರೀ ಕನಕದಾಸರು ಎಂದು ಕಿನಾವಿವ ಸಂಘದ ಚೇರಮನ್ನರಾದ ಜಗದೀಶ ವಸ್ತ್ರದ ಹೇಳಿದರು.
ಕಿನಾವಿವ ಸಂಘದ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತಿಯಲ್ಲಿ ಮುಖ್ಯ ಅತಿಥಿಗಳಾದ ಮಾತನಾಡಿದ ಜಗದೀಶ ವಸ್ತ್ರದ ಕನಕದಾಸರು ತಮ್ಮ
ಜೀವನದಲ್ಲಿ ಸುಮಾರು ೩೦೦ಕ್ಕಿಂತಲೂ ಹೆಚ್ಚು ಕೀರ್ತನೆಗಳನ್ನು ನಾಲ್ಕು ಕೃತಿಗಳನ್ನು ರಚಿಸಿ ತಮ್ಮ ಕೀರ್ತನೆಗಳಲ್ಲಿ ಭಕ್ತಿ ಪಾರಮ್ಯವನ್ನು ಮೆರೆದಿದ್ದಾರೆ. ಕನಕದಾಸರು ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ತಮ್ಮ ಕೀರ್ತನೆಗಳಲ್ಲಿ ಮತ್ತು ಕೃತಿಗಳಲ್ಲಿ ಜಾತಿ ಪದ್ಧತಿಯನ್ನು ತೊರೆದು ಸಮಾಜದಲ್ಲಿ ಸಾಮರಸ್ಯ ಮೂಡುವಂತೆ
ಮಾಡಿದ ದಾಸಶ್ರೇಷ್ಠ. ಅವರು ಸಮಾಜ ಸುಧಾರಕರಾಗಿ ಜನರಲ್ಲಿ ಸಮಾಜಿಕ ಜಾಗೃತಿಯನ್ನು ಹರಡಲು ತಮ್ಮ ಸಾಹಿತ್ಯದ ಮೂಲಕ ಜಾಗೃತಿಯನ್ನು ಮೂಡಿಸಿದರು ಎಂದು ಹೇಳಿದರು. ಅಧ್ಯಕ್ಷತೆವಸಿದ್ದ ಪ್ರಾಚಾರ್ಯ ಡಾ. ಜಿ.ಕೆ.ಭೂಮನಗೌಡರ ಮಾತನಾಡಿ, ಭಕ್ತಿಯ ಪರಾಕಾಷ್ಠೆ ಎಷ್ಟು ಇರುತ್ತದೆ ಎಂದು ಸಮಾಜಕ್ಕೆ ತೋರಿಸಿದ ಮಹಾನ ಭಕ್ತ ಕನಕದಾಸರು, ತನ್ನ ಭಕ್ತಿಯಿಂದ ಕಲ್ಲಿನ ಮೂರ್ತಿಯನ್ನೆ
ತನ್ನಡೆಗೆ ತಿರುಗುವಂತೆ ಜೀವ ತುಂಬಿದ ಭಕ್ತ. ತನ್ನ ಕೃತಿಗಳ ಮೂಲಕ ದೈವ ಭಕ್ತಿ ಹಾಗೂ
ಸಮಾಜಸುಧಾರಣೆಯನ್ನು ಕೈಗೊಂಡ ಕವಿಶ್ರೇಷ್ಠ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾರ್ಥಿ ಒಕ್ಕೂಟದ ಚೇರಮನ್ನರು ಹಾಗೂ ಕನ್ನಡ ವಿಭಾಗದ
ಮುಖ್ಯಸ್ಥರಾದ ಡಾ. ಕೆ.ಆರ್.ಮೆಳವಂಕಿ ಮಾತನಾಡಿ ಕನಕದಾಸರು ಸರ್ವಶ್ರೇಷ್ಠ ಭಕ್ತರಾಗಿ ಹರಿದಾಸ ಸಂತ,
ತತ್ವಜ್ಞಾನಿ ಮತ್ತು ಸಂಗೀತಗಾರರಾಗಿದ್ದರು. ಭಕ್ತಿ ಚಳುವಳಿಯ ಬೆಳಗಣಿಗೆಯಲ್ಲಿ ಪ್ರಮುಖಪಾತ್ರವಹಿಸಿದ್ದರು ಎಂದರು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಸಂಗೀತ ವಿಭಾಗದ ಮುಖ್ಯಸ್ಥರಾದ ಪ್ರೊ.ಎಚ್.ಕೆ.ನಾಗರಾಜ ಹಾಗೂ ಶ್ರೀ ಈಶ್ವರ ಗಡಿಬಿಡಿ ಇವರಿಂದ ಕನಕದಾಸದ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು.

ಶ್ರೀ ಸತೀಶ ಶಹಾಪೂರಮಠ, ಎಮ್.ಜಿ.ಹಿರೇಮಠ, ನಿಜಲಿಂಗಪ್ಪ ಹಡಪದ, ರೇಖಾ ಗಾಣಿಗೇರ,
ಪಿ.ಸಿ.ಶಿವನವ್ವನವರ, ಎನ್.ಜಿ.ಪಾಟೀಲ, ಕೆರಾಳ, ಪ್ರವೀಣ ಹಿತ್ತಲಮನಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಕುಮಾರಿ ಸಂಗೀತಾ ಧಾರವಾಡ ಹಾಗೂ ವಿದ್ಯಾರ್ಥಿನಿಯರು ಪ್ರಾರ್ಥನೆ ಹೇಳಿದರು, ಪಿ. ಬಿ.
ಹೊನ್ನಪ್ಪನವರ ಸ್ವಾಗತಿಸಿದರು, ಆನಂದ ಕರೆಪ್ಪನವರ ವಂದಿಸಿದರು, ಹೊನ್ನರಾಜು ಎಸ್. ವಿ. ಕಾರ್ಯಕ್ರಮ
ನಿರೂಪಿಸಿದರು.

Post a Comment

0 Comments