ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನಿಮಿತ್ತ ನಡೆಯಲಿರುವ ಬೆಳಗಾವಿ ಜಿಲ್ಲಾ ಕವಿಗೋಷ್ಠಿಗೆ ಕವನಗಳ ಆಹ್ವಾನ.. ಡಾ ಎಸ್ ಬಿ ದಳವಾಯಿ. ಚನ್ನಮ್ಮನ ಕಿತ್ತೂರು :- ಸುವರ್ಣ ಕರ್ನಾಟಕ ಸಂಭ್ರಮಾಚರಣೆ ನಿಮಿತ್ತವಾಗಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಚನ್ನಮ್ಮನ ಕಿತ್ತೂರಿನ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ವಿಶೇಷ ಕವಿಗೋಷ್ಟಿಯನ್ನು ಆಯೋಜಿಸಲಾಗಿದೆ. ಕಾರಣ ಭಾಗವಹಿಸಲು ಇಚ್ಚಿಸುವ ಬೆಳಗಾವಿ ಜಿಲ್ಲೆಯ ಕವಿ ಕವಯತ್ರಿಯರು ತಮ್ಮ ಸ್ವರಚಿತ ಒಂದು ಕವಿತೆಯನ್ನು ಕನ್ನಡ ನುಡಿ ಪಾoಟ್ ನಲ್ಲಿ ಒಂದು ಪುಟಕ್ಕೆ ಮೀರದಂತೆ ಎ ಫೋರ್ ಸೈಜಿನಲ್ಲಿ ಟೈಪಿಸಿ ಕೆಳಗೆ ತಿಳಿಸಲಾದ ಜಂಗಮವಾಣಿ ಸಂಖ್ಯೆಗಳಿಗೆ ಕಳುಹಿಸಲು ಮನವಿ ಮಾಡಲಾಗಿದೆ. ಕವನ ಕಡ್ಡಾಯವಾಗಿ ಕನ್ನಡ ನಾಡು ನುಡಿಗೆ ಮಾತ್ರ ಸಂಬಂಧಿಸಿರಬೇಕು. ಆಯ್ಕೆ ಸಮಿತಿ ಆಯ್ಕೆ ಮಾಡಿದ ಕವನಗಳ ವಾಚನಕ್ಕೆ ಮಾತ್ರ ಅವಕಾಶವಿದ್ದು ಕವಿಗೋಷ್ಠಿ ನಡೆಯುವ ದಿನ ಸಮಯ ಸ್ಥಳಗಳನ್ನು ಆಯ್ಕೆ ಮಾಡಲಾದ ಕವಿಗಳಿಗೆ ಮಾತ್ರ ತಿಳಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಚನ್ನಮ್ಮನ ಕಿತ್ತೂರಿನ ಅಧ್ಯಕ್ಷರಾದ ಡಾ ಎಸ್ ಬಿ ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ 15 ನವಂಬರ್ 2023. ಕವನಗಳನ್ನು ಕಳುಹಿಸಬೇಕಾದ ವ್ಯಾಟ್ಸಪ್ ಸಂಖ್ಯೆಗಳು. 9972508745,9945603871, 8792442546.
0 Comments