ಈರನಗೌಡ ಶೀಲವಂತರ ರವರಿಗೆ ಗೌರವ ಡಾಕ್ಟರೇಟ್ ಪ್ರದಾನ
ಖಾಸಗಿ ವಾಹಿನಿ ವರದಿಗಾರರು,ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ದ್ವನಿ ಸಂಘಟನೆಯ ಬೈಲಹೊಂಗಲ ತಾಲೂಕು ಅಧ್ಯಕ್ಷರಾದ ಶ್ರೀ ಈರನಗೌಡ ಶೀಲವಂತರ ರವರಿಗೆ ಇಂಟರ್ನ್ಯಾಷನಲ್ ಹ್ಯೂಮನ್ ಡೆವಲಪ್ಮೆಂಟ್ ಯೂನಿವರ್ಸಿಟಿ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಆರ್ಗನೈಸೇಶನ್ ( USA) ವತಿಯಿಂದ ಇವರು ಮಾಡಿದ ಸಾಮಾಜಿಕ ಸೇವೆ ಗುರುತಿಸಿ ಗೋವಾದ ಇನ್ಸ್ಟಿಟ್ಯೂಟ್ ಮೆನಜೆಸ್ ಬ್ರಗಾಂಜಾ ಮೇನ್ ಹಾಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಮೂಲತಃ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದವರಾದ ಇವರು ರಾಜಕೀಯ, ಮಾಧ್ಯಮ, ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದು ಇವರ ಸಾಧನೆಗೆ
ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ದ್ವನಿ ಸಂಘಟನೆ ಎಲ್ಲ ಸದಸ್ಯರು ಹಾಗೂ ಕುಟುಂಬಸ್ಥರು,ಗ್ರಾಮಸ್ಥರು, ಸ್ನೇಹಿತರು, ಹಿತೈಷಿಗಳು, ಅಭಿನಂದನೆ ಸಲ್ಲಿಸಿ ಹರ್ಷ ವ್ಯಕ್ತ ಪಡಿಸಿದ್ದಾರೆ.
0 Comments