ಹಿರಿಯ ಸಾಹಿತಿ ಶ್ರೀ ಬಿ.ವ್ಹಿ.ನೇಸರಗಿ ಇವರಿಗೆ ರಾಜ್ಯೋತ್ಸವ ದಿನದಂದು ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಸನ್ಮಾನ. -- ಡಾ ಎಸ್. ಬಿ. ದಳವಾಯಿ. ಚನ್ನಮ್ಮನ ಕಿತ್ತೂರು :-- ಕವಿ,ಲೇಖಕ,ಹಿರಿಯ ಸಾಹಿತಿ, ಶಿಕ್ಷಕ, ನಿವೃತ್ತ ಶಿಕ್ಷಣಾಧಿಕಾರಿಗಳಾದ ಶ್ರೀ ಬಿ. ವ್ಹಿ ನೇಸರಗಿ ಇವರನ್ನು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪರವಾಗಿ ಸನ್ಮಾನಿಸಲಾಗುವುದು ಎಂದು ಕಸಾಪ ಅಧ್ಯಕ್ಷರಾದ ಡಾ ಎಸ್. ಬಿ. ದಳವಾಯಿ ತಿಳಿಸಿದ್ದಾರೆ. "ಕರ್ನಾಟಕ ಸುವರ್ಣ ಸಂಭ್ರಮ -50 " ರ ನಿಮಿತ್ತ ರಾಜ್ಯೋತ್ಸವದ ದಿನದಂದು ಸಾಹಿತಿಗಳ ಮನೆ ಮನೆಗೆ ಕಿತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಭಿಯಾನ ದ ಅಂಗವಾಗಿ ತುರುಮರಿಯ ಬಿ ವ್ಹಿ ನೇಸರಗಿ ಇವರ ಮನೆಯಲ್ಲಿ ತಾಯಿ ಭುವನೇಶ್ವರಿ ದೇವಿಯ ಪೂಜೆಯನ್ನು ನೆರವೇರಿಸಿ ಹಿರಿಯ ಸಾಹಿತಿಯನ್ನು ಸನ್ಮಾನಿಸಲಾಗುವುದು. ಹಲವಾರು ಕೃತಿಗಳನ್ನು ರಚಿಸಿರುವ, ಪ್ರಶಸ್ತಿಗಳನ್ನು ಪಡೆದಿರುವ ಕೀರ್ತಿ ಇವರದ್ದಾಗಿದೆ.
ಈ ಮೊದಲು ಬೈಲಹೊಂಗಲ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ, ಕಿತ್ತೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ 94 ವರ್ಷದ ಹಿರಿಯ ಸಾಹಿತಿಗಳಾದ ಶ್ರೀ ಬಿ ವ್ಹಿ ನೇಸರಗಿ ಇವರನ್ನು ಸನ್ಮಾನಿಸುವುದು ಹೆಮ್ಮೆಯ ವಿಷಯವಾಗಿದೆ. ಈ ಸಮಾರಂಭದ ಅಧ್ಯಕ್ಷತೆಯನ್ನು ಹಿರೇನಂದಿಹಳ್ಳಿ ಸರಕಾರಿ ಪ್ರೌಢಶಾಲೆಯ ಮುಖ್ಯ ಅಧ್ಯಾಪಕರಾದ ಶ್ರೀ ಬಸವರಾಜ್ ಬಿದರಿ ವಹಿಸಲಿದ್ದು, ಆಶಯ ನುಡಿಗಳನ್ನು ಕಿತ್ತೂರು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಸುನಂದಾ ಪಾಟೀಲ ಆಡಲಿದ್ದಾರೆ." ಕರ್ನಾಟಕ ಸಂಭ್ರಮ- 50" ಕುರಿತು ಕಿತ್ತೂರು ವಸ್ತು ಸಂಗ್ರಹಾಲಯದ ಕ್ಯೂರೇಟರ ಶ್ರೀ ರಾಘವೇಂದ್ರ ಉಪನ್ಯಾಸ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಕಿತ್ತೂರು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮತ್ತು ತುರಮರಿಯ ಶ್ರೀ ಬಿ ವ್ಹಿ ನೇಸರಗಿ ಇವರ ಅಭಿಮಾನಿಗಳು ಉಪಸ್ಥಿತರಿರುವರು ಎಂದು ಡಾ ಎಸ್ ಬಿ ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
0 Comments