Bailongal : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಶಾಲಾ ವಾಹನ ತಪ್ಪಿದ ಭಾರಿ ಅನಾಹುತ

ಶಾಲಾ ವಾಹನ ಅಪಘಾತ ಕೂದಲೆಳೆಯಲ್ಲಿ ತಪ್ಪಿದ ಭಾರೀ ಅನಾಹುತ

ಬೈಲಹೊಂಗಲ - ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಶಾಲಾ ವಾಹನ ತಪ್ಪಿದ ಭಾರಿ ಅನಾಹುತ,

ಟಾಟಾ ಮ್ಯಾಜಿಕ್ ವಾಹನದಲ್ಲಿ 37 ಮಕ್ಕಳನ್ನು ಹಾಕಿಕೊಂಡು ತೆರಳುತ್ತಿದ್ದ ಮಾಹಿತಿ,

ಗಣಾಚಾರಿ ಶಿಕ್ಷಣ ಸಂಸ್ಥೆಯ ಎಕ್ಸಲಂಟ್ ಎಜುಕೇಷನ್ ಸೊಸೈಟಿಗೆ ಸೇರಿದ ಶಾಲಾ ವಾಹನ,
 ಬೈಲಹೊಂಗಲ‌ದ  ಮರಕುಂಬಿಯಲ್ಲಿರುವ ಗಣಾಚಾರಿ ಶಿಕ್ಷಣ ಸಂಸ್ಥೆಯ ಶಾಲೆ,
ಚಚಡಿ,ಹಾರೂಗೊಪ್ಪ ಗ್ರಾಮದಿಂದ ಮರಕುಂಬಿ ಗ್ರಾಮದ ಶಾಲೆಗೆ ಮಕ್ಕಳನ್ನು ತರುವಾಗ ಶುಕ್ರವಾರ ಬೆಳಿಗ್ಗೆ ನಡೆದ ಘಟನೆ,

ಸಣ್ಣ ವಾಹನದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿದ್ದ ಆರೋಪ,

ಚಾಲಕನ‌ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗುತ್ತಿದ್ದಂತೆ ಓಡಿ ಹೋಗಿ ಮಕ್ಕಳನ್ನು ರಕ್ಷಿಸಿದ ಸ್ಥಳೀಯರು,

ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾದಿಂದ ಪಾರಾದ 37 ಮಕ್ಕಳು,

ವಾಹನ ಬದಲಾಯಿಸಿ ಎಂದು ಎಷ್ಟು ಹೇಳಿದರೂ ಸಹ ಕೇಳುತ್ತಿಲ್ಲ‌ ಎಂದು ಕಿಡಿ ಕಾರಿದ ಪೋಷಕರು,

ಮುರುಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ,
ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಶಾಲಾ ವಾಹನ ತಪ್ಪಿದ ಭಾರಿ ಅನಾಹುತ
ಬೈಲಹೊಂಗಲ- ಶಾಲಾ ಮಕ್ಕಳನ್ನು ಕರೆತರುತಿದ್ದ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಘಟನೆ ಹಾರುಗೊಪ್ಪ ಸಮೀಪ ಶುಕ್ರವಾರ ಬೆಳಿಗ್ಗೆ ಜರುಗಿದೆ.
    ಬೈಲಹೊಂಗಲ ಸಮೀಪದ ಮರಕುಂಬಿ ಗಣಾಚಾರಿ ಶಿಕ್ಷಣ ಸಂಸ್ಥೆಯ ಎಕ್ಸಲಂಟ್ ಎಜುಕೇಷನ್ ಸೊಸೈಟಿಗೆ ಸೇರಿದ ಟಾಟಾ ಮ್ಯಾಜಿಕ ವಾಹನವು ಚಚಡಿ, ಹಾರುಗೊಪ್ಪ ಗ್ರಾಮದಿಂದ ಸುಮಾರು 37 ಮಕ್ಕಳನ್ನು ಶಾಲೆಗೆ ಕರೆತರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗುತ್ತಿದ್ದಂತೆ  ಸ್ಥಳೀಯರು ಓಡಿ ಹೋಗಿ ಮಕ್ಕಳನ್ನು ರಕ್ಷಿಸಿದ್ದಾರೆ.
    ಸಣ್ಣ ವಾಹನದಲ್ಲಿ ಸಾಮಥ್ರ್ಯಕ್ಕಿಂತ ಹೆಚ್ಚು ಮಕ್ಕಳನ್ನು ಕೂರಿಸಿದ್ದೆ ಅಪಘಾತವಾಗಲು ಕಾರಣವೆನ್ನಲಾಗಿದೆ. ಮಕ್ಕಳು ಸಣ್ಣ ಪುಟ್ಟ ಗಾಯಗಳಾಗಿ  ಪ್ರಾಣಾಪಾಯದಿಂದ ಪಾರಾಗಿದ್ದಾರೆ.
    ಗ್ರಾಮದ ಪೋಷಕರು ಶಾಲಾ ವಾಹನವನ್ನು  ಬದಲಾಯಿಸಿ ಎಂದು ಎಷ್ಟು ಹೇಳಿದರೂ ಸಹ ಕೇಳುತ್ತಿಲ್ಲ ಎಂದು ಕಿಡಿ ಕಾರಿದರು.
   ಮುರಗೋಡ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದೆ.

Post a Comment

0 Comments