MK Vani E-Paper : ಕಿತ್ತೂರಿನಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಬಿಜೆಪಿ ಅಭ್ಯರ್ಥಿ

ಕಿತ್ತೂರು ಕ್ಷೇತ್ರಕ್ಕೆ ದೂರದೃಷ್ಟಿ ಯೋಜನೆ ತಂದಿರುವೆ : ಬಿಜೆಪಿ ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡ

ಚನ್ನಮ್ಮನಕಿತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ದೊಡ್ಡಗೌಡರ ಭರ್ಜರಿ ರೋಡ್ ಶೋ ನಡೆಸಿದರು.

ಚನ್ನಮ್ಮನ ಕಿತ್ತೂರು: ಬಿಜೆಪಿ ಅಭ್ಯರ್ಥಿ, ಶಾಸಕ ಮಹಾಂತೇಶ ದೊಡ್ಡಗೌಡರ ರೋಡ್ ಶೋ ಮೂಲಕ ಆಡಳಿತ ಸೌಧಕ್ಕೆ ಆಗಮಿಸಿ ಚುನಾವಣೆ ಅಧಿಕಾರಿ ರೇಶ್ಚಾ ಹಾನಗಲ್ ಅವರಿಗೆ ನಾಮಪತ್ರ ಸಲ್ಲಿಸಿದರು. ಯಾವದೇ ಕೆಲಸವನ್ನು ಮಾಡಿರುವದಿಲ್ಲ. ಪ್ರಧಾನಿ
ನರೇಂದ್ರ ಮೋದಿ, ಅಮಿತಶಾ, ಬಿಎಸ್ ಯಡಿಯೂರಪ್ಪ ಇಂತಹ ಮಹಾನ್ ನಾಯಕರ ನೇತೃತ್ವದಲ್ಲಿ ದೇಶ, ರಾಜ್ಯ ಅಭಿವೃದ್ಧಿಯತ್ತ ಸಾಗಿದೆ. ಬಿಜೆಪಿ ಪ್ರಚಾರದ ಅಬ್ಬರಕ್ಕೆ 150 ಸ್ಥಾನ ಪಡೆದುಕೊಳ್ಳಲಿದೆ ಎಂದು ಹೇಳುವ ಸ್ಥಿತಿ ಕಾಂಗ್ರೆಸ್‌ಗೆ ಬರುತ್ತದೆ ಎಂದು ಹೇಳಿದರು.
ಶಾಸಕ ಇಲ್ಲಿಯ ಸೋಮವಾರ ಪೇಟೆ ಚನ್ನಮ್ಮಾಜಿ ಸರ್ಕಲ್‌ನಿಂದ ಬೃಹತ್ ಮೆರವಣಿಗೆ ಮೂಲಕ ರೋಡ್ ಶೋ ಪ್ರಾರಂಭಿಸಿದರು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣಸಿಂಗ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಹಾರಾಷ್ಟ್ರ ಮಣೆಯ ಶಾಸಕ ಸಿದ್ದಾರ್ಥ ಶಿರೋಳಿ, ದೊಡ್ಡಗೌಡರ ಪತ್ನಿ ಮಂಜುಳಾ ದೊಡ್ಡಗೌಡರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ ಸಾಥ್ ನೀಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ರಾಣಿ ಚನ್ನಮ್ಮಾಜಿ ಪುತ್ಥಳಿಗೆ ಅರುಣಸಿಂಗ್, ಶಾಸಕ ದೊಡ್ಡಗೌಡರ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಮಹಾಂತೇಶ ದೊಡ್ಡಗೌಡರ ಮಾತನಾಡಿ, ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಕಿತ್ತೂರ
ಕ್ಷೇತ್ರಕ್ಕೆ ಅನೇಕ ದೂರದೃಷ್ಟಿಯುಳ್ಳಯೋಜನೆಗಳನ್ನು ತಂದಿದ್ದೇನೆ ಎಂದು ಹೇಳಿದರು. ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ತುಬಾಕಿ, ಜಿಲ್ಲಾ ಗ್ರಾಮೀಣ ಘಟಕದ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಚಿನ್ನಪ್ಪ, ಮುತ್ನಾಳ, ಚನಬಸಪ್ಪ ಮೊಕಾಶಿ, ಶ್ರೀಕರ ಕುಲಕರ್ಣಿ, ಅರವಿಂದ ಪಾಟೀಲ, ಜಗದೀಶ ವಸ್ತದ, ಮಹಾಂತೇಶ ಏಣಗಿ, ಪ್ರಕಾಶ ಮುಗಬಸವ, ಉಳವಪ್ಪ ಉಳ್ಳಾಗಡಿ, ನಿಜಲಿಂಗಯ್ಯ ಹಿರೇಮಠ, ದಿನೇಶ ವಳಸಂಗ ಭಾಗವಹಿಸಿದ್ದರು.

Post a Comment

0 Comments