ಕಿತ್ತೂರು ವಿಜಯ ಸುದ್ದಿ ಕಳೆದ ವರ್ಷ ಆರ್‌ಸಿಬಿ ತಂಡ ಕಪ್ ಗೆದ್ದ ವೇಳೆ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತದಿಂದ ಸಾವು-ನೋವುಗಳು ಸಂಭವಿಸಿದ್ದವು. ಹೀಗಾಗಿ ಚಿನ್ನಸ್ವಾಮಿ ಕ್ರಿಡಾಂಗಣದಲ್ಲಿ ಪಂದ್ಯಗಳನ್ನು ನಡೆಸಲು ಬ್ರೇಕ್ ಬಿದ್ದಿತ್ತು. ಆದರೆ ಇದೀಗ ಅಂತರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳಿಗೆ ರಾಜ್ಯ ಸರಕಾರದ ಗೃಹ ಇಲಾಖೆ ಅನುಮತಿ ನೀಡಿದೆ.ಸದ್ಯ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ ಐಪಿಎಲ್ ಪಂದ್ಯಗಳನ್ನು ನಡೆಸಲು ಸರಕಾರ ಒಪ್ಪಿಗೆ ನೀಡಿದೆ. ಈ ಬಗ್ಗೆ ಕೆಎಸ್‌ಸಿಎ ಅಧಿಕೃತ ಘೋಷಣೆ ಒಂದೇ ಬಾಕಿ ಇದೆ.ಮುಂಬರುವ ಐಸಿಸಿ ಟಿ20 ವಿಶ್ವಕಪ್ ಮತ್ತು ಐಪಿಎಲ್ 2026 ರ ಪಂದ್ಯಗಳು ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜನೆ ಬಹುತೇಕ ಖಚಿತವಾಗಿದೆ. ಕೆಎಸ್ ಸಿಎಗೆ ಗೃಹ ಇಲಾಖೆ ಷರತ್ತುಬದ್ಧ ಅವಕಾಶ ನೀಡಿದೆ. ಈ ಬಗ್ಗೆ ಕೆಎಸ್‌ಸಿಎಗೆ ಅಧಿಕೃತ ಮಾಹಿತಿ ನೀಡಿದೆ.
ಈಗಾಗಲೇ ಪೊಲೀಸರು ಕೆಲ ಬದಲಾವಣೆ ಸೂಚಿಸಿದ್ದಾರೆ. ಭದ್ರತೆಗೆ ಸಂಬಂಧಿಸಿದಂತೆ ಪೊಲೀಸರಿಂದ ಮಾರ್ಗಸೂಚಿ ಸಿದ್ಧವಾಗಿದೆ. 33 ಸಾವಿರ ವೀಕ್ಷಕರ ಸಾಮರ್ಥ್ಯ ಹೊಂದಿದ ಕ್ರೀಡಾಂಗಣದಲ್ಲಿ ಪಾರ್ಕಿಂಗ್ & ಪಿಕ್ ಉಂಡ್ ಡ್ರಾಪ್‌ಗೆ ವ್ಯವಸ್ಥೆ ಮಾಡಬೇಕು. ಪ್ರೇಕ್ಷಕರು ಕ್ಯೂ ನಿಲ್ಲುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ಕಿರಿದಾದ ಗೇಟ್‌ಗಳನ್ನ ಕನಿಷ್ಠ 6 ಅಡಿ ಅಗಲದ ಜಾಗ ಇರಬೇಕು. ಚಿನ್ನಸ್ವಾಮಿ ಕ್ರೀಡಾಂಗಣದ ಎಂಟ್ರಿ & ಎಕ್ಸಿಟ್ ಸುಲಭಗೊಳಿಸಬೇಕು. ಮಹಿಳೆಯರು, ಮಕ್ಕಳ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಲಾಗಿದೆ.
0 Comments