kittur vijay news.ಡಿಜಿಪಿ ರಾಮಚಂದ್ರ ರಾವ್ ಸಸ್ಪೆಂಡ್

ಕಿತ್ತೂರು ವಿಜಯ ಸುದ್ದಿ.ಕಚೇರಿಯಲ್ಲೇ ಹಲವು ಮಹಿಳೆಯರೊಂದಿಗೆ ರಾಸಲೀಲೆ ಮತ್ತು ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿ ಡಿಜಿಪಿ ರಾಮಚಂದ್ರ ರಾವ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ಅಮಾನತು ಮಾಡಿದೆ.

ಸರ್ಕಾರಿ ಕರ್ತವ್ಯದಲ್ಲಿ ಸಮವಸ್ತ್ರದಲ್ಲಿ ಇರುವಾಗಲೇ ಮಹಿಳೆಯರ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಡಿಜಿಪಿ ರಾಮಚಂದ್ರ ರಾವ್ ರನ್ನು ಅಮಾನತ್ತು ಮಾಡಿ ಸಿಎಂ ಕಚೇರಿಯಿಂದ ಅಧಿಕೃತ ಆದೇಶ ಹೋರಡಿಸಲಾಗಿದೆ.ತನಿಖೆ ವೇಳೆ ರಾಮಚಂದ್ರ ವಿರುದ್ಧ ಗಂಭೀರ ಆರೋಪಗಳು ಇದ್ದು ಪ್ರಾಥಮಿಕ ವರದಿ ಆಧರಿಸಿ ಅಮಾನತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ.ತನಿಖೆ ಪೂರ್ಣಗೊಳ್ಳುವವರೆಗೆ ಅವರನ್ನು ಯಾವುದೇ ಅಧಿಕೃತ ಜವಾಬ್ದಾರಿಯಿಂದ ಮುಕ್ತಗೊಳಿಸಲಾಗಿದೆ.

Post a Comment

0 Comments