ಕಿತ್ತೂರ ವಿಜಯ
ಗೋಕಾಕ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬೆಳಗಾವಿ ಲೋಕಸಭಾ ವ್ಯಾಪ್ತಿಯ ಗೋಕಾಕ ಹಾಗೂ ಅರಭಾವಿ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆ ಜರುಗಿತು. ಈ ಸಂದರ್ಭದಲ್ಲಿ ಬೆಳಗಾವಿ ಲೋಕಸಭಾ ಚುನಾವಣೆಯ ಕುರಿತು ಹಲವಾರು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಯಿತು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್, ಮುಖಂಡರಾದ ಡಾ.ಮಹಾಂತೇಶ ಕಡಾಡಿ, ಅನಿಲಕುಮಾರ ದಳವಾಯಿ, ಚಂದನ ಗಿಡ್ಡನವರ, ರಮೇಶ್ ಉಟಗಿ, ಭರಮಣ್ಣ ಉಪ್ಪಾರ್, ಕಲ್ಲಪ್ಪಗೌಡ ಲಕ್ಕಾರ್, ರಾವಸಾಹೇಬ ಬೆಳಕೊಡು, ಬಸವರಾಜ ಬೆಳಕೊಡು, ಎಸ್.ಆರ್ ಸೋನವಾಲ್ಕರ್, ಸಂಜಯ ಪೂಜಾರಿ, ಗಂಗಾಧರ್ ಬಡಕುಂದ್ರಿ, ಪ್ರಕಾಶ ಅರಳಿ, ಶಂಕರ ಹುರಕಡ್ಲಿ, ಭರಮಣ್ಣ ಉಪ್ಪಾರ, ಪ್ರಕಾಶ ಡಾಂಗೆ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
0 Comments