ಅಂಜಲಿ ನಿಂಬಾಳಕರ ಅವರನ್ನು ರಿಜೆಕ್ಟ್ ಪೀಸ್ ಎಂದವರು ಆಯ್ಕೆ ಮಾಡಿದ ಅಭ್ಯರ್ಥಿ (ಕಾಗೇರಿ) ಏನು ಆಸ್ಪೆಕ್ಟ್ ಪೀಸಾ ? ಶಾಸಕ ಬಾಬಾಸಾಹೇಬ ಪಾಟೀಲ

 


ಕಿತ್ತೂರು ವಿಜಯ

ಚನ್ನಮ್ಮನ ಕಿತ್ತೂರು: ಪಟ್ಟಣದ ವಿದ್ಯಾಗಿರಿಯಲ್ಲಿ ಇರುವ ಕಾಂಗ್ರೇಸ್ ಮುಖಂಡ ಉಳವಪ್ಪ ಶೆಟ್ಟರ ಅವರ ಗೃಹ ಕಚೇರಿಯಲ್ಲಿ ಲೋಕಸಾಭಾ ಚುನಾವಣೆ ಹಿನ್ನಲೆಯಲ್ಲಿ ಹಳಿಯಾಳ ಶಾಸಕ ಆರ್ ವ್ಹಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಪತ್ರಿಕಾ ಗೋಷ್ಠಿ ಜರುಗಿತು.

ಅಧ್ಯಕ್ಷ ಸ್ಥಾನ ವಹಿಸಿ ಮಾಜಿ ಸಚಿವ ಹಾಲಿ ಶಾಸಕ ಆರ್ ವ್ಹಿ ದೇಶಪಾಂಡೆ ಮಾತನಾಡಿ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದ್ದು ನಮ್ಮ ರಾಜ್ಯಕ್ಕೆ ತಾರತಮ್ಯ ಎಸಗಿದೆ. ಬಿಜೆಪಿ ಸಂಸದರಿಂ ನಮ್ಮ ರಾಜ್ಯದ ಜನರಿಗೆ ನೆರೆ, ಬರ, ಕೊರೋನಾ, ಜಿಎಸ್ಟಿ ಪಾಲು ಹಂಚಿಕೆ, ಅನುದಾನ ಹಂಚಿಕೆಯಲ್ಲಿ ಯಾವಯದೇ ಪ್ರಯೋಜನೆ ಅಗಿಲ್ಲ, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಗೆ ಕೆಜಿಗೆ ರೂ 34 ಹಣ ಕೊಡುತ್ತೇವೆ ಎಂದರು ಅಕ್ಕಿ ಕೊಡಲಿಲ್ಲ, ಕಾವೇರಿ ನೀರು ಹಂಚಿಕೆ, ಭದ್ರಾ ಮೇಲ್ದಂಡೆ, ಮಹಾದಾಯಿ ಮೇಕೆದಾಟು ಯೋಜನೆಗಳಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಗ್ಯಾರಂಟಿ ಯೋಜನೆಗಳಿಂದು ಇಂದು ನಮ್ಮ ರಾಜ್ಯದ ಜನರು ಸಂತೃಪ್ತಿಯಿA ಜೀವನ ನಡೆಸುತ್ತಿದ್ದಾರೆ. ಕಾಂಗ್ರೇಸ್ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದ್ದು ರಾಜ್ಯದ ಐದು ಗ್ಯಾರಂಟಿ ಯೋಜನೆಗಳಂತೆ ಕೇಂದ್ರದಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಯುವ ನ್ಯಾಯ, ನಾರಿ ನ್ಯಾಯ, ಕಿಸಾನ ನ್ಯಾಯ, ಶ್ರಮಿಕ ನ್ಯಾಯ, ಹಿಸ್ಸಾದ್ರಿ ನ್ಯಾಯ ಎಂದು ಐದು ಯೋಜನೆ ಸೇರಿದಂತೆ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಮ್ಮ ಪ್ರಣಾಳಿಕೆಯಲ್ಲಿವೆ ಎಂದರು

ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳಕರ ಅವರನ್ನು ರಿಜೆಕ್ಟ್ ಪೀಸ್ ಎಂದು  ಭಾರತೀಯ ಜನತಾ ಪಕ್ಷದ ಕೆಲವು ನಾಯಕರು ಜರಿದಿದ್ದರು. ಇಂದು ಭಾರತೀಯ ಜನತಾ ಪಕ್ಷ ಆಯ್ಕೆ ಮಾಡಿದ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯೇನು ಆಸ್ಪೆಕ್ಟ್ ಪೀಸಾ ಎಂದು ಹೇಳುವ ಮೂಲಕ ಬಿಜೆಪಿಯವರಿಗೆ ಟಾಂಗ್ ಕೊಟ್ಟರು.

ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ರಮಂತೆ ದೇವತಾ ಎಲ್ಲಿ ನಾರಿಯರನ್ನು ಪೂಜಿಸುತ್ತಾರೆ ಅಲ್ಲಿ ದೇವತೆಗಳು ವಾಸವಾಗಿರಯತ್ತಾರೆ ಎಂದು ನಂಬಿದ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಬಿಜೆಪಿಯ ಕೆಲವರು ನಮ್ಮ ಪಕ್ಷದ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳಕರ ಅವರನ್ನು ರಿಜೆಕ್ಟ್ ಪೀಸ್ ಎಂದು  ಜರಿದದ್ದು ನಮ್ಮ ದೇಶದಲ್ಲಿರುವ ಪ್ರತಯೊಬ್ಬು ಹೆಣ್ಣು ಮಕ್ಕಳಿಗೆ ತೋರಿದ ಅಗೌರವ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ಮಾಡಿದರು.

ಎಪ್ರಿಲ್ ರಂದು ಕಿತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಜಿ ಶಾಸಕ ಮಹಾಂತೇಸ ದೊಡ್ಡಗೌಡರ ಅವರು ಮಂಜೂರು ಮಾಡಿಸಿದ ಕಾಮಗಾರಿಗಳನ್ನೇ ಪುನಃ ಪುನಃ ಅದೇ ಕಾಮಗಾರಿಗಳಿಗೆ ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರು ಗುದ್ದಲಿ ಪೂಜೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಇಂದಿನ ಶಾಸಕರು ಹೊಸ ಕಾಮಗಾರಿಗಳನ್ನು ತರುವಲ್ಲಿ ವಿಫಲವಾಗಿದ್ದಾರೆ ಎಂದು ಹೇಳಿದ ಮಾತಿಗೆ ಶಾಸಕ ಬಾಬಾಸಾಹೇಬ ಪಾಟೀಲ ಅವರು ನಾನು ತಂದ ಕಾಮಗಾರಿಗಳನ್ನೇ ನಾನು ಪೂಜೆ ಮಾಡಿಲ್ಲ ನಮ್ಮ ಕಾರ್ಯಕರ್ತರು ಮಾಡಿದ್ದಾರೆ, ಇನ್ನೂ ಅವನು ತಂದ ಕಾಮಾಗಾರಿಗಳ ಪೂಜೆ ನಾನೇಕೆ ಮಾಡಲಿ ಎಂದು ಉತ್ತರ ಕನ್ನಡ ಲೋಕಸಭಾ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿರುದ್ಧ ಹರಿಹಾಯ್ದ ಅವರು ಮುಂದಿನ ದಿನಗಳಲ್ಲಿ ನನ್ನ ಭಾಷೆಯಲ್ಲಿ ಅವರಿಗೆ ಉತ್ತರಿಸುತ್ತೇನೆ ಎಂದು ಹರಿಹಾಯ್ದರು.

ಈ ವೇಳೆ ಕೆಪಿಸಿಸಿ ಸದಸ್ಯ ಶಂಕರ ಹೊಳಿ, ಮಂಡಳ ಅಧ್ಯಕ್ಷ ಸಂಗನಗೌಡ ಪಾಟೀಲ, ಅಸ್ಫಕ್ ಹವಾಲ್ದಾರ, ಸಾಗರ ಕಾಕತಿದೇಸಾಯಿ, ಮಲಪ್ರಭಾ ಯೋಜನಾ ನೀರಾವರಿ ಸಲಹಾ ಸಮಿತಿ ಅಧಿಕಾರೇತರ ಸದಸ್ಯ ರಮೇಶ ಮೊಖಾಶಿ, ಕೃಷ್ಣಾ ಬಾಳೇಕುಂದರಗಿ, ಪ.ಪಂ ಸದಸ್ಯ ಎಮ್. ಎಫ್. ಜಕಾತಿ, ಉಮೇಶ ಹುಂಬಿ, ಕಿರಣ ವಾಳದ, ಅನಿಲ ಎಮ್ಮಿ,  ಸೇರಿದಂತೆ ಇತರರಿದ್ದರು

Post a Comment

0 Comments