ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ರೈತ ಸಂಘದ ರಾಜಶೇಖರ ಹಿಂಡಲಗಿ ಕಣಕ್ಕೆ

ಕಿತ್ತೂರ ವಿಜಯ ಪತ್ರಿಕಾ ಭವನದಲ್ಲಿ ರಾಜ್ಯಾಧ್ಯಕ್ಷ ರವಿ ಪಾಟೀಲ ಮಾತನಾಡಿದರು

ಕಿತ್ತೂರ ವಿಜಯ

 ಚನ್ನಮ್ಮನ ಕಿತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳನ್ನು ಅನುಸರಿಸಿಕೊಂಡು ಬರುತ್ತಿದ್ದು ಅದನ್ನು ರೈತ ಸಂಘಟನೆಗಳ ಸಂಯುಕ್ತ ಹೋರಾಟದಿಂದ ಕೇಂದ್ರ ರ‍್ಕಾರ ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದರು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ರೈತ ವಿರೋಧಿ ನೀತಿಯನ್ನು ಹಿಂಪಡೆಯದೆ ಮುಂದುವರೆಸಿದ್ದರಿಂದ ಕಳೆದ 2023 ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಕೆಡವಿ ಕಾಂಗ್ರೇಸ್ ರ‍್ಕಾರವನ್ನು ತಂದರೂ ಇದುವರೆಗೆ ಕಾಂಗ್ರೇಸ್ ರ‍್ಕಾರ ರೈತ ವಿರೋಧಿ ನೀತಿಗಳನ್ನು ಹಿಂಪಡೆಯದೆ ಅದನ್ನೇ ಮುಂದುವರೆಸಿದ್ದಾರೆ. ಈ ಎರಡು ರಾಷ್ಟ್ರೀಯ ಪಕ್ಷಗಳು ತಮ್ಮ ವಯಕ್ತಿಕ ಬೆಳವಣಿಗೆಯನ್ನು ಮಾತ್ರ ಮಾಡಿಕೊಳ್ಳುತ್ತಿದ್ದು ರೈತರ ಮತ್ತು ದೇಶದ ಶ್ರೇಯೋಅಭಿವೃದ್ಧಿ ಬಗ್ಗೆ ಕಾಳಜಿ ತೋರುತ್ತಿಲ್ಲ ಆದ್ದರಿಂದ ನಮ್ಮ ರೈತ ಸಂಘದ ಪದಾಧಿಕಾರಿಯಾದ ರಾಜಶೇಖರ ಹಿಂಡಲಗಿ ಅವರನ್ನು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿಸಲಿದ್ದೇವೆ ಎಂದು ನೇಗಿಲ ಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷ ರವಿ ಪಾಟೀಲ ಪಟ್ಟಣದ ಕೋಟೆ ರಸ್ತೆಯಲ್ಲಿ ಇರುವ ಕಿತ್ತೂರ ವಿಜಯ ಭವನದಲ್ಲಿ ಜರುಗಿದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.

ಬಿಜೆಪಿ ನೇತೃತ್ವದ ಕೇಂದ್ರ ರ‍್ಕಾರ ಮತ್ತು ಕಾಂಗ್ರೇಸ್ ನೇತೃತ್ವದ ರಾಜ್ಯ ರ‍್ಕಾರ ರೈತ ವಿರೋಧಿ ನೀತಿಗಳನ್ನು ಮುಂದುವರೆಸಿದ್ದು ರೈತರ ಕೊಳವೆ ಭಾವಿ ಹಾಗೂ ನೀರಾವರಿ ಸೌಲಭ್ಯಕ್ಕೆ ವಿದ್ಯುತ್ ಪಡೆಯಲು ರೈತರು ತಮ್ಮ ಸ್ವಂತ ರ‍್ಚಿನಲ್ಲಿ ಕಂಭ, ವಾಯರ್, ಟ್ರಾನ್ಸ್ರ‍್ಮರ್, ಖರೀದಿಸಿಅವುಗಳ ಜೋಡನೆಗೆ ಬೇಕಾದ ಎಲ್ಲಾ ವೆಚ್ಚಗಳನ್ನು ರೈತರೇ ಭರಿಸಬೇಕು ಎಂದು ಆದೇಶ ಮಾಡುವ ಮೂಲಕ ದೇಶದ ಬೆನ್ನೆಲುಭಾದ ರೈರನ ಬೆನ್ನು ಮುರಿಯತ್ತಿವೆ ಎಂದು ಕೇಂದ್ರ ಮತ್ತು ರಾಜ್ಯ ರ‍್ಕಾರಗಳ ವಿರುದ್ಧ ರವಿ ಪಾಟೀಲ ಹರಿ ಹಾಯ್ದರು.

ದಲಿತ ಮುಖಂಡ ಬಸವರಾಜ ಕೆಲಗಡೆ ಮಾತನಾಡಿ ಕಿತ್ತೂರು ಹಾಗೂ ಖಾನಾಪೂರ ತಾಲೂಕಿನ ದಲಿತ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಸಂಪರ‍್ಣ ಬೆಂಬಲದೊಂದಿಗೆ ರೈತ ಸಂಘದ ಪಕ್ಷೇತರ ಅಭ್ಯರ್ಥಿಯಾಗಿ ರಾಜಶೇಖರ ಹಿಂಡಲಗಿ ಅವರನ್ನು ಕೆನರಾ ಮತಕ್ಷೇತ್ರದ ಅಭ್ರ‍್ಥಿಯಾಗಿ ಕಣಕ್ಕೆ ಇಲಸಲಿದ್ದೇವೆ ಎಂದು ಹೇಳಿದ ಅವರು ಮತಕ್ಷೇತ್ರದ ಎಲ್ಲರೂ ಅವರಿಗೆ ತಮ್ಮ ಮತ ನೀಡುವ ಮೂಲಕ ತಮ್ಮ ಸೇವೆ ಮಾಡಲು ಅನುವು ಮಾಡಿ ಕೊಡಬೇಕು ಎಂದು ಮನವಿ ಮಾಡಿದರು.

ಕೆನರಾ ಕ್ಷೇತ್ರದ ಸಂಬಾವ್ಯ ಅಭ್ರ‍್ಥಿ ರಾಜಶೇಖರ ಹಿಂಡಲಗಿ ಮಾತನಾಡಿ ನಾನು ಸುಮಾರು ರ‍್ಷಗಳಿಂದ ರೈತ ಸಂಘಟನೆ, ದಲಿತ ಸಂಘಟನೆ ಸೇರಿದಂತೆ ಅನೇಕ ಸಂಘಟನೆಗಳಲ್ಲಿ ಭಾಗವಹಿಸುವ ಮೂಲಕ ಅನೇಕ ಸೇವಾಕರ‍್ಯಗಳನ್ನು ಮಾಡಿಕೊಂಡು ಬಂದಿದ್ದೇನೆ. ನಾನು ಒಬ್ಬ ಯುವ ವಿದ್ಯಾವಂತನಾಗಿ ಸುಮಾರು ರ‍್ಷಗಳಿಂದ ನೊಂದವರಿಗೆ ನ್ಯಾಯ ಕೊಡಿಸಿದ್ದೇನೆ. ಶಿಕ್ಷಣ ಸುಧಾರಣೆಗೆ ಬೇಕಾದ ಅಂಶಗಳ ಕುರಿತು ಜಾಗೃತಿ, ರೈತ ಹೋರಾಟಗಳಲ್ಲಿ ಭಾಗವಹಿಸುವ ಮೂಲಕ ರೈತರಿಗೆ ಬೆನ್ನೆಲುಬಾಗಿ ನಿಂತಿದ್ದೇನೆ ಎಂದು ಹೇಳಿದ ಅವರು ಕಾಂಗ್ರೇಸ್ ರ‍್ಕಾರ ದಲಿತರಿಗಾಗಿ ಮಿಸಲಿಟ್ಟ ಸುಮಾರು 11.5 ಸಾವಿರ ಕೋಟಿ ಹಣವನ್ನು ತಮ್ಮ ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಹೇಳಿದರು.

ಈ ವೇಳೆ ಬೆಳಗಾವಿ ಜಿಲ್ಲಾಧ್ಯಕ್ಷ ಕಲ್ಲಪ್ಪ ಹರಿಯಾಲ, ಉಪಾಧ್ಯಕ್ಷ ಶಿವಾನಂದ ತುರಮರಿ, ಭಿಮಪ್ಪ ಕುರಬರ, ತಾಲೂಕಾಧ್ಯಕ್ಷ ಬದವರಾಜ ತುರಮರಿ, ಖಾನಾಪೂರ ತಾಲೂಕಾಧ್ಯಕ್ಷ ನಿಂಗಪ್ಪ ಕಡೆಮನಿ, ರಾಘವೇಂದ್ರ ಚಲವಾದಿ, ರಾಜಶೇಖರ ಚಲವಾದಿ ಸೇರಿದಂತೆ ಇತರರಿದ್ದರು.




Post a Comment

0 Comments