ಚನ್ನಮ್ಮನ ಕಿತ್ತೂರು : ರಮೇಶ್ ಪರವಿನಾಯ್ಕರ್ ನಟನೆ, ನಿರ್ದೇಶನ, ನಿರ್ಮಾಣದ ‘ನಮೋ ಭಾರತ’ ಸಿನಿಮಾ ಇಂದು ಬಿಡುಗಡೆಯಾಗುತ್ತಿದೆ.
ಚಿತ್ರದ ಕುರಿತು ಅವರ ಮಾತುಗಳು:
ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಜನರಿಗೆ ತಲುಪಿಸಲು ‘ಗಾಂಧೀಜಿ ಕನಸು’ ಸಿನಿಮಾ ಮಾಡಿದ್ದೆ. ಇದೀಗ ಸೈನಿಕನ ಕಷ್ಟಗಳು, ಗ್ರಾಮೀಣ ಪ್ರದೇಶದ ತೊಂದರೆಗಳು ಮತ್ತು ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಿಳಿಸಲು ಈ ಸಿನಿಮಾ ಮಾಡಿದ್ದೇನೆ.
ರೈತನ ಮಗನೊಬ್ಬ ಸೈನಿಕನಾಗಿ ಕಾಶ್ಮೀರಕ್ಕೆ ಹೋಗುವ ಕತೆ ಹೊಂದಿರುವ ಸಿನಿಮಾ ಇದು. ಮೊದಲಾರ್ಧದಲ್ಲಿ ಕಾಶ್ಮೀರದ ಸ್ಥಿತಿಗತಿ ಬಗ್ಗೆ ತೋರಿಸಲಾಗುತ್ತದೆ. ದ್ವಿತೀಯಾರ್ಧದಲ್ಲಿ ಉತ್ತರ ಕರ್ನಾಟಕದ ಹಳ್ಳಿಯ ತಾಪತ್ರಯಗಳನ್ನು ಹೇಳಿದ್ದೇನೆ. ಜನ ನೋಡಿ ಮೆಚ್ಚುತ್ತಾರೆಂಬ ನಂಬಿಕೆ ನನಗಿದೆ.
ಎಲ್ಲವನ್ನೂ ಕಮರ್ಷಿಯಲ್ ಸಿನಿಮಾ ರೀತಿಯಲ್ಲಿ ತೋರಿಸಿದ್ದೇನೆ. ಒಟ್ಟಾರೆ ಇದೊಂದು ದೇಶಭಕ್ತಿ ಸಾರುವ ಸಿನಿಮಾ.
ಈ ಚಿತ್ರದಲ್ಲಿ ದೊಡ್ಡರಂಗೇಗೌಡ, ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯಾ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್, ಮಾಸ್ಟರ್ ಯುವರಾಜ್ ಪರವಿನಾಯ್ಕರ್, ಸಂತೋಷ ಹಡಪದ ನಟಿಸಿದ್ದಾರೆ.
0 Comments