ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮಸಹಾಯಕ ಸಂಘದ ವತಿಯಿಂದ ಗ್ರಾಮಸಹಾಯಕರ ಬಹುದಿನಗಳ ಬೇಡಿಕೆ ಇಡೇರಿಕೆಗಾಗಿ ದಿನಾಂಕ 11-12-2023 ರಂದು ಬೆಳಿಗ್ಗೆ 8-00 ಗಂಟೆಗೆ ಕಿತ್ತೂರಿನ ರಾಣಿ ಚನ್ನಮ್ಮನ ಕೋಟೆ ಆವರಣದಿಂದ ಪಾದಯಾತ್ರೆಯನ್ನು ಸುವರ್ಣ ಸೌಧದ ವರೆಗೆ ಹಮ್ಮಿಕೊಂಡಿದ್ದು ಸದರಿ ಕಾರ್ಯಕ್ರಮಕ್ಕೆ ಸಮಸ್ತ ಕರ್ನಾಟಕ ರಾಜ್ಯದ ಎಲ್ಲ ಗ್ರಾಮಸಹಾಯಕರು ಸುಮಾರು ನಾಲ್ಕೈದು ಸಾವಿರ ಜನ ಗ್ರಾಮಸಹಾಯಕರು ಸೇರುವ ನಿರೀಕ್ಷೆ ಇರುತ್ತದೆ. ನಂತರ ದಿನಾಂ12-12-2023 ರಂದು ಸುವರ್ಣ ಸೌಧದ ಹತ್ತಿರ ನಿಗಧಿಪಡಿಸಿದ ( ಕೊಂಡಸಕೊಪ್ಪ. ಎ )ಸ್ಥಳದಲ್ಲಿ ಮುಷ್ಕರ ಕೈಗೊಳ್ಳಲು ನಿಗಧಿಪಡಿಸಲಾಗಿದೆ. ಕಾರಣ ದಿನಾಂಕ 11-12-2023 ರಂದು ಮುಂಜಾನೆ 8-00 ಗಂಟೆಗೆ ಕೋಟೆ ಆವರಣ ಹತ್ತಿರ ಪಾದಯಾತ್ರೆ ಉದ್ಘಾಟನಾ ಕಾರ್ಯಕ್ರಮಕ್ಕೆ ತಾವುಗಳು ಬಂದು ಪತ್ರಿಕಾ / ದ್ರಶ್ಯ ಮಾಧ್ಯಮದ ಮೂಲಕ ಸುದ್ದಿಯನ್ನು ಪ್ರಚಾರ ಮೂಲಕ ಸರಕಾರ ಗಮನ ಸೆಳೆಯಲು ತಮ್ಮ ಅತ್ಯಮುಲ್ಯ ಸಹಾಯ ಸಹಕಾರ ಅವಶ್ಯಕವಾಗಿರುತ್ತದೆ. ಕಾರಣ ಸದರಿ ದಿವಸ ತಾವು ಉಪಸ್ಥಿತರಿರಲು ತಮ್ಮ ಸಹಾಯ ಸಹಕಾರ ನೀಡಲು ಈರಪ್ಪ ( ಈರಣ್ಣಾ )ಮಲ್ಲಪ್ಪ ಕುಂಟಿರಪ್ಪಗೋಳ, ಅಧ್ಯಕ್ಷರು ಕಿತ್ತೂರ ತಾಲೂಕ ಕರ್ನಾಟಕ ಕಂದಾಯ ಇಲಾಖೆ ಗ್ರಾಮಸಹಾಯಕರ ಸಂಘ ಚ.ಕಿತ್ತೂರ ವಿನಂತಿಸಿದ್ದಾರೆ
0 Comments