MK.vani ಸುದ್ದಿ. ಮಾಜಿ ಮುಖ್ಯಮಂತ್ರಿ. ಕುಮಾರಸ್ವಾಮಿಯವರಿಗೆ. ಮೋದಿಜಿಯವರೇ ಕೊಟ್ರು ಭರ್ಜರಿ ಆಫರ್!?

ಲೋಕಸಭೆ ಚುನಾವಣೆ. ಸಮೀಪಿಸುತ್ತಿದ್ದಂತೆ  ಭರ್ಜರಿ ಬಿಜೆಪಿ ಆಫರ್?*ಕುಮಾರಸ್ವಾಮಿಗೆ ಮೋದಿಯವರೇ ಕೊಟ್ರು ಭರ್ಜರಿ ಆಫರ್!*?

ಒಂದು ಮೂಲಗಳ ಪ್ರಕಾರ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿಯವರನ್ನು ಸ್ಪರ್ಧಿಸಿ ಗೆಲ್ಲುವಂತೆ ಮಾಡಿ, ಅವರನ್ನು ಕೇಂದ್ರ ಸಚಿವರನ್ನಾಗಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ನಿಜಕ್ಕೂ ಇದೊಂದು ಬಂಪರ್ ಆಫರ್ ಆಗಿದ್ದು ಇದನ್ನು ಈಗಾಗಲೇ ಎಚ್.ಡಿ. ಕುಮಾರಸ್ವಾಮಿಯವರಿಗೆ ತಿಳಿಸಲಾಗಿದೆ.

ಸದ್ಯದ ಮಟ್ಟಿಗೆ ಕರ್ನಾಟಕದಲ್ಲಿ ಅಧಿಕಾರದಲ್ಲಿದ್ದು ಬಲಿಷ್ಠವಾಗಿರುವ ಕಾಂಗ್ರೆಸ್ಸನ್ನು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಗ್ಗುಬಡಿದು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಲು ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಆ ನಿಟ್ಟಿನಲ್ಲಿ ಈಗಾಗಲೇ ತಾನು ಕೈಗೊಂಡಿರುವ ಬಿಜೆಪಿ- ಜೆಡಿಎಸ್ ಮೈತ್ರಿಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಎಚ್ ಡಿ ಕುಮಾರಸ್ವಾಮಿಯವರಿಗೆ ಬಂಪರ್ ಆಫರ್ ನೀಡಲು ಬಿಜೆಪಿ ಮುಂದಾಗಿದೆ

ಬಿಜೆಪಿ ಹೈಕಮಾಂಡ್ ನಲ್ಲಿ ಇಂಥದ್ದೊಂದು ಚಿಂತನೆ ಹೊಮ್ಮಿದ ಕೂಡಲೇ ಅದನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೆ ಚರ್ಚಿಸಲಾಗಿದೆ. ಇದು ಸಮಂಜಸವಾದ ಆಲೋಚನೆ ಎಂದು ಮೂವರೂ ನಾಯಕರು ಸಮ್ಮತಿ ಸೂಚಿಸಿದ್ದು, ಈ ವಿಚಾರವನ್ನು ಖುದ್ದು ನರೇಂದ್ರ ಮೋದಿಯವರ ಕಡೆಯಿಂದಲೇ ಕುಮಾರಸ್ವಾಮಿಯವರಿಗೆ ಸಂದೇಶ ಕಳುಹಿಸಲಾಗಿದೆ.

 *ಆದರೆ* , ಏಕಾಏಕಿ ಒದಗಿಬಂದ ಈ ಆಫರನ್ನು ಕುಮಾರಸ್ವಾಮಿಯವರು ಕೂಡಲೇ ಒಪ್ಪಿಕೊಂಡಿಲ್ಲ. ಮೊದಲು ತಮ್ಮ ತಂದೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಬಳಿ ಈ ವಿಚಾರವನ್ನು ಚರ್ಚಿಸಿ ಆನಂತರ ಈ ಬಗ್ಗೆ ತಿಳಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

 *ಗೋವಾ ಸಿಎಂಗೆ ಮಧ್ಯಸ್ಥಿಕೆ ಜವಾಬ್ದಾರಿ* 
ಬಿಜೆಪಿ ಹೈಕಮಾಂಡ್ ಕೊಟ್ಟಿರುವ ಈ ಆಫರ್ ಅನ್ನು ಕುಮಾರಸ್ವಾಮಿಯವರೊಂದಿಗೆ ಮತ್ತೊಮ್ಮೆ ಚರ್ಚಿಸಿ, ಅವರನ್ನು ಈ ಆಫರ್ ಗೆ ಒಪ್ಪಿಸುವುದು. ದೇವೇಗೌಡರ ಜೊತೆಗೂ ಮಾತನಾಡಿ ಅವರಿಗೆ ಈ ಆಫರ್ ನ ಹಿಂದಿರುವ ಉದ್ದೇಶ ಹಾಗೂ ಆಫರ್ ಒಪ್ಪಿಕೊಂಡರೆ ಬಿಜೆಪಿ - ಜೆಡಿಎಸ್ ಮೈತ್ರಿ ಮೇಲಾಗುವ ಉತ್ತಮ ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವುದು ಇತ್ಯಾದಿಗಳ ಜವಾಬ್ದಾರಿಯನ್ನು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರಿಗೆ ವಹಿಸಲಾಗಿದೆ...

Post a Comment

0 Comments