*ಎರಡು ವರ್ಷ ಕಳೆದರೂ ಇನ್ನೂ ಆಗದ ಅಧ್ಯಕ್ಷ ಉಪಾಧ್ಯಕ್ಷ*
*ಚನ್ನಮ್ಮನ ಕಿತ್ತೂರು*
*ವರದಿ. ವೀರೇಶ ಹಿರೇಮಠ*
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಮುಗಿದು ಹೊಸ ಸರಕಾರ ರಚನೆಯಗಿ ಅರ್ಧವಾರ್ಷಿಕ ಕಳೆಯಿತು ಕಿತ್ತೂರು ತಾಲೂಕಿನಲ್ಲಿ ಕಿತ್ತೂರು ಪಟ್ಟಣ ಮತ್ತು ಎಂ ಕೆ ಹುಬ್ಬಳ್ಳಿ ಸೇರಿದಂತೆ ರಾಜ್ಯದಲ್ಲಿ ಇನ್ನೂ56 ಪಟ್ಟಣ ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಗೆ ಇನ್ನೂ ಕಾಲ ಕೂಡಿಬಂದಿಲ್ಲ. ಹೊಸ ಕಾಂಗ್ರೆಸ್ ಸರಕಾರದಲ್ಲಾದರೂ ಆಡಳಿತಾಧಿಕಾರಿಗಳ ಅಧಿಕಾರ ಅಂತ್ಯ ಕೊನೆ ಆಗುವುದೇ ಎನ್ನುವ ಪ್ರಶ್ನೆ ಜನರಲ್ಲಿ ಮೂಡಿರುವುದು ನಿಜ..
2021ರ ಡಿಸೆಂಬರ್ನಲ್ಲಿ
ಚುನಾವಣೆ ನಡೆದು ನೂತನ ಸದಸ್ಯರು ಆಯ್ಕೆಯಾಗಿ ಸರಿಯಾಗಿ ಇದೇ ತಿಂಗಳಿಗೆ ಎರಡು ವರ್ಷ ಕಳೆಯಿತು..
ಒಬಿಸಿ ಮೀಸಲು ವಿಚಾರದಲ್ಲಿನ ಗೊಂದಲದಿಂದಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಿ ಆಯ್ಕೆ ಮಾಡುವ ಪ್ರಕ್ರಿಯೆಯೇ ನಡೆದಿಲ್ಲ. ಹಾಗಾಗಿ, ಸದಸ್ಯರು ಚುನಾವಣೆಯಲ್ಲಿ ಗೆದ್ದರೂ ಅಧಿಕಾರವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಒಬಿಸಿ ಮೀಸಲು ವಿಚಾರವಾಗಿ ಗೊಂದಲ ಸೃಷ್ಟಿಯಾಗಿದ್ದರಿಂದ ತಕ್ಷಣಕ್ಕೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ನಿಗದಿಪಡಿಸಲು ಹಿಂದಿನ ಸರಕಾರ ಆಸಕ್ತಿ ತೋರಲಿಲ್ಲ. ಈ ನಡುವೆ ಸುಪ್ರೀಂ ಕೋರ್ಟ್, ಹೈಕೋರ್ಟ್ನಲ್ಲಿ ಮೀಸಲು ಸಂಬಂಧ ನಾನಾ ಪ್ರಕರಣಗಳಿರುವುದನ್ನೇ ನೆಪವಾಗಿಸಿಕೊಂಡು ಮೀಸಲು ನಿಗದಿ ಗೋಜಿಗೆ ಹೋಗಲಿಲ್ಲ ಎಂಬ ಆರೋಪವಿದೆ.
ಆಡಳಿತಾಧಿಕಾರಿಗಳ ಆಡಳಿತ
ಅಧ್ಯಕ್ಷ-ಉಪಾಧ್ಯಕ ಸ್ಥಾನಕ್ಕೆ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿಗಳು ಸದ್ಯ ಆಡಳಿತಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಹಲವೆಡೆ ಒಬ್ಬರೇ ಆಡಳಿತಾಧಿಕಾರಿಗೆ ಒಂದಕ್ಕಿಂತ ಹೆಚ್ಚು ಪಟ್ಟಣ ಪಂಚಾಯಿತಿಗಳ ಹೊಣೆ ವಹಿಸಲಾಗಿದೆ. ಹಾಗಾಗಿ ಆಡಳಿತಾಧಿಕಾರಿಗಳು ತಮ್ಮ ಮೂಲ ಜವಾಬ್ದಾರಿ ನಿರ್ವಹಿಸುವ ಜತೆ ಜತೆಗೆ ಪಟ್ಟಣ ಪಂಚಾಯಿತಿಗಳ ಆಡಳಿತವನ್ನೂ ನಿಭಾಯಿಸಬೇಕಿದ್ದು, ಎಷ್ಟರ ಮಟ್ಟಿಗೆ ನ್ಯಾಯ ಒದಗಿಸಲು ಸಾಧ್ಯ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕರಿಗೆ ಮೂಡುತಿದೆ
ಗೆದ್ದು 2 ವರ್ಷ ಆದ್ರೂ ಸಿಗದ ಅಧಿಕರ .. ಹಿಂದಿನ ಸರ್ಕಾರ ಪಟ್ಟಣ ಪಂಚಾಯಿತಿಯ ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲು ನಿಗದಿಗೆ ಮುಂದಾಗಲಿಲ್ಲ. ಈಗ ಹೊಸ ಸರ್ಕಾರ ಬಂದಿದ್ದು, ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಜನಪ್ರತಿನಿಧಿಗಳು ಇದ್ದರೂ ಇಲ್ಲದಂತಿರುವುದರಿಂದ ಜನರು ನಾಗರಿಕ ಸೇವೆ ಪಡೆಯಲು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳನ್ನೇ ಆಶ್ರಯಿಸುವಂತಾಗಿದೆ. ಇದು ಆಡಳಿತಾಧಿಕಾರಿಗಳ ಮೇಲೂ ಹೆಚ್ಚಿನ ಒತ್ತಡ ಸೃಷ್ಟಿಗೆ ಕಾರಣವಾಗಲಿದೆ ಎಂಬುದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ವರದಿ ಸಲ್ಲಿಸಿದ ಆಯೋಗ: ಮೀಸಲು ವಿಚಾರವಾಗಿ ರಚನೆಯಾಗಿರುವ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಆಯೋಗವು ಈಗಾಗಲೇ ವರದಿಯನ್ನೂ ಸಲ್ಲಿಸಿದ್ದು, ಸರಕಾರವೂ ಅನುಮೋದನೆ ನೀಡಿದೆ. ಆದರೆ, ಹೈಕೋರ್ಟ್ನಲ್ಲಿರುವ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಯುತ್ತಿದೆ.
ಅಧಿಕಾರ ಮೊಟಕಾಗದು
ರಾಜ್ಯದ 58 ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಮೀಸಲು ನಿಗದಿಗೆ ಸದ್ಯ ಕಾನೂನಿನ ತೊಡಕಿಲ್ಲ. ಯಾವುದೇ ಪ್ರಕರಣಗಳು ನ್ಯಾಯಾಲಯದಲ್ಲೂಇಲ್ಲ. ಹಾಗಾಗಿ ಸರಕಾರವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ರಾಜ್ಯ ಚುನಾವಣಾ ಆಯೋಗವು ಚುನಾವಣೆಯನ್ನಷ್ಟೇ ನಡೆಸುತ್ತದೆ. ನೂತನ ಅಧ್ಯಕ್ಷರು- ಉಪಾಧ್ಯಕ್ಷರ ಆಯ್ಕೆಯಾದಾಗಿನಿಂದ 5 ವರ್ಷ ಆಡಳಿತಾವಧಿ ಇರುವುರಿಂದ ಅಧಿಕಾರಾವಧಿ ಮೊಟಕಾಗುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಆಯೋಗದ ಮೂಲಗಳು ತಿಳಿಸಿವೆ.
,...............................
ಆದಷ್ಟು ಬೇಗನೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗಬೇಕು ಆಯ್ಕೆಯಾಗಿ ಎರಡು ವರ್ಷ ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯವು ನಡೆಯುತ್ತಿಲ್ಲ ಸರಕಾರ ಗಮನಹರಿಸಿ ಸಿಗ್ರಾ ಜನರ ಸಮಸ್ಯೆಯನ್ನು ಬಗೆಹರಿಸಬೇಕು
*ಪಟ್ಟಣ ಪಂಚಾಯತಿ ಸದಸ್ಯ ಸುತ್ತುಗಟ್ಟಿ*
2) ನಮ್ಮ ವಾರ್ಡಿನಲ್ಲಿ ಅಭಿವೃದ್ಧಿಯಂಬುದು ಮರಚುಕ್ಕಿಯಾಗಿದೆ ಯಾವುದೇ ಕೆಲಸವು ಆಗುತ್ತಿಲ್ಲ ಅಧಿಕಾರಿಗಳನ್ನು ಕೇಳಿದರೆ ಹಾರಕ್ಕೆ ಉತ್ತರವನ್ನು ಕೊಡುತ್ತಿದ್ದಾರೆ ಜನರು ನೀವು ಜನಪ್ರತಿನಿಧಿಯಾಗಿ ಆಯ್ಕೆ ಆಗಿದ್ದೀರಿ ಅಥವಾ ಇಲ್ವೋ ಎಂಬ ಪ್ರಶ್ನೆಯು ಮಾಡುತ್ತಿದ್ದಾರೆ ಜನ ಸರ್ಕಾರ ಆದಷ್ಟು ಬೇಗನೆ ಈ ಸಮಸ್ಯೆಯನ್ನು ಬಗೆಹರಿಸಬೇಕು
*ಲಕ್ಷ್ಮಿ ಬಸ್ಸು ಬಡಿಗೇರ್*
0 Comments