ಇತ್ತೀಚೆಗೆ ಬೆಳಗಾವಿ ಜಿಲ್ಲೆ ವೆಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ಬೆತ್ತಲೆಗೊಳಿಸಿ ನಡುರಸ್ತೆಯಲ್ಲಿ ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇಡೀ ಸಮಾಜವೇ ತಗ್ಗಿಸುವಂತಹ ಕೃತ್ಯ ಇದಾಗಿದ್ದು ಸಂತ್ರಸ್ತಗೆ ಸೂಕ್ತ ನೆರವು ನೀಡಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಧಿಕಾರಿಗಳಿಗೆ ಸೂಚಿಸಿದರು
ಘಟನೆಯ ನಂತರ ನಾನು ಕೂಡ ಸಂತ್ರಸ್ತ ಮಹಿಳೆಯ ಮನೆಗೆ ಹೋಗಿ ಅವಳಿಗೆ ಧೈರ್ಯ ಹೇಳಿ ಆತ್ಮವಿಶ್ವಾಸವನ್ನು ಸೂಚಿಸಿದ್ದೇನೆ ಇಂತಹ ಘಟನೆಗಳು ಸಮಾಜದಲ್ಲಿ ಮರುಕಳಿಸಬಾರದು ಹಾಗೂ ಅನ್ಯಾಯವಾದ ಮಹಿಳೆಗೆ ನ್ಯಾಯ ಕೊಡಿಸಿದ ಕೆಲಸ ನಾವೆಲ್ಲ ಮಾಡಬೇಕಾಗಿದೆ ಎಂದು ಹೇಳಿದರು
ಸಂತ್ರಸ್ತ ಮಹಿಳೆಗೆ ನಮ್ಮ ಇಲಾಖೆಯಿಂದ ಅಗತ್ಯ ಇರುವ ಎಲ್ಲ ಸೋಲತ್ತುಗಳನ್ನು ಒದಗಿಸಿ ಮಹಿಳೆಗೆ ಅತಿ ಶೀಘ್ರದಲ್ಲಿ ನ್ಯಾಯ ಕೊಡಿಸುವ ಭರವಸೆ ನೀಡಿದರು
0 Comments