ಡಿ.26ಕ್ಕೆ ಚಾಲನೆ; ಅರ್ಜಿ ಸಲ್ಲಿಕೆ ಹೇಗೆ? ಯಾರಿಗೆ ಸಿಗಲ್ಲಈ ಯೋಜನೆ?
ಐದನೇ ಗ್ಯಾರಂಟಿ ಯುವ ನಿಧಿ ಜಾರಿಗೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಈ ಸಂಬಂಧ ಸಚಿವ ಶರಣ ಪ್ರಕಾಶ್ ಪಾಟೀಲ್ ಸುದ್ದಿಗೋಷ್ಠಿ ನಡೆಸಿ, ಯುವನಿಧಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು
ಯುವನಿಧಿ ಅರ್ಜಿ ಸಲ್ಲಿಕೆಗೆ ಡಿಸೆಂಬರ್ 26ರಂದು ಬೆಳಗ್ಗೆ 11ಗಂಟೆಗೆ ಬ್ಯಾಂಕ್ವೆಂಟ್ ಹಾಲ್ ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಲಿದ್ದಾರೆ
ರಾಜ್ಯದಲ್ಲಿ ಯುವನಿಧಿ ಯೋಜನೆಗೆ 4,81,000 ಪದವೀಧರರು, 48,153 ಡಿಪ್ಲೋಮಾ ತೇರ್ಗಡೆಯಾದವರು ಸೇರಿ ಅಂದಾಜು 5,29,153 ಫಲಾನುಭವಿಗಳಿದ್ದಾರೆ. 2023-24 ರಲ್ಲಿ ನಿರುದ್ಯೋಗ ಭತ್ಯೆ ನೀಡಲು 250 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು
ಪದವೀಧರರಿಗೆ ಮಾಸಿಕ 3000 ರೂಪಾಯಿ ಮತ್ತು ಡಿಪ್ಲೋಮಾ ಹೋಲ್ಡರ್ಸ್ ಗೆ ಮಾಸಿಕ 1500 ರೂ ನಿರುದ್ಯೋಗ ಭತ್ಯೆಯನ್ನು ಫಲಾನುಭವಿಗಳಿಗೆ ಎರಡು ವರ್ಷದವರೆಗೆ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ ಮಾಡಲಾಗುತ್ತದೆ.
*ಷರತ್ತುಗಳು ಅನ್ವಯ*
ಯುವನಿಧಿ ಯೋಜನೆಯ ಫಲಾನುಭವಿಗಳು 2022-23 ರಲ್ಲಿ ವ್ಯಾಸಾಂಗ ಮಾಡಿ 2023 ರಲ್ಲಿ ತೇರ್ಗಡೆಯಾಗಿರಬೇಕು. ಕರ್ನಾಟಕದಲ್ಲಿ ಕನಿಷ್ಠ 6 ವರ್ಷಗಳ ಕಾಲ ವ್ಯಾಸಾಂಗ ಮಾಡಿರಬೇಕು. ಸ್ವಯಂ ಉದ್ಯೋಗಿಗಳಾಗಿದ್ರೆ ನಿರುದ್ಯೋಗ ಭತ್ಯೆ ಇಲ್ಲ. ಸರ್ಕಾರಿ, ಅನುದಾನಿತ, ಖಾಸಗಿ ನೌಕರರಾಗಿದ್ರೆ ಯೋಜನೆಗೆ ಅರ್ಹರಲ್ಲ ಎಂದು ಸಚಿವರು ಮಾಹಿತಿ ನೀಡಿದರು
*ಯಾರಿಗಿಲ್ಲ ಯುವ ನಿಧಿ ಯೋಜನೆ?*
ಸರ್ಕಾರಿ/ ಸರ್ಕಾರಿ ಅನುದಾನಿತ ಸಂಸ್ಥೆ/ ಖಾಸಗಿ ಉದ್ಯೋಗದಲ್ಲಿರುವ ಅಭ್ಯರ್ಥಿಗಳಿಗಿಲ್ಲ. ಸ್ವಯಂ ಉದ್ಯೋಗಿಗಳಾಗಿರುವ ಅಭ್ಯರ್ಥಿಗಳಿಗೂ ಇಲ್ಲ. ವಿದ್ಯಾಭ್ಯಾಸವನ್ನು ಮುಂದುವರಿಸುವ ಅಭ್ಯರ್ಥಿಗಳಿಗಿಲ್ಲ
*ಅರ್ಜಿ ಸಲ್ಲಿಕೆ ಹೇಗೆ?*
ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳು, ಗ್ರಾಮ ಒನ್ ಕೇಂದ್ರ ಮತ್ತು ಸೇವಾ ಸಿಂಧು ಜಾಲತಾಣದಲ್ಲಿಯೂ ಅರ್ಜಿ ಸಲ್ಲಿಕೆ ಮಾಡಬಹುದು.
*ಯಾವೆಲ್ಲಾ ದಾಖಲೆಗಳು ಬೇಕು?*
ಅಭ್ಯರ್ಥಿಗಳು ಕರ್ನಾಟಕ ರಹವಾಸಿ ಎಂದು ನಿರೂಪಿಸಬೇಕು. ಪೋರ್ಟಲ್ ನಲ್ಲಿ ಸಂಬಂಧಿಸಿದ ಎಲ್ಲಾ ದಾಖಲೆ ಸಲ್ಲಿಸಬೇಕು. ಎಸ್ಎಸ್ಎಲ್ಸಿ, ಪಿಯುಸಿ ಅಂಕಪಟ್ಟಿ, ಸಿಇಟಿ ಸಂಖ್ಯೆ, ರೇಷನ್ ಕಾರ್ಡ್, ಪದವಿ ಪ್ರಮಾಣ ಪತ್ರ ಅಥವಾ ತಾತ್ಕಾಲಿಕ ಪ್ರಮಾಣ ಪತ್ರ ಸಲ್ಲಿಸಬೇಕು.
ಯುವ ನಿಧಿಗೆ ಈ ವರ್ಷ 250 ಕೋಟಿ ಬೇಕಾಗುತ್ತದೆ. ಮುಂದಿನ ವರ್ಷ 2,500 ಕೋಟಿ ಬೇಕಾಗಬಹುದು. ವಿವೇಕಾನಂದ ಜಯಂತಿ ದಿನ ಶಿವಮೊಗ್ಗದಲ್ಲಿ ಡಿಬಿಟಿ ಮೂಲಕ ಹಣ ಜಮಾವಣೆಗೆ ಚಾಲನೆ ನೀಡಲಾಗುತ್ತದೆ.
ನಾಲ್ಕು ಗ್ಯಾರಂಟಿಗಳ ಜಾರಿ ಕಾರ್ಯಕ್ರಮವನ್ನು ವಿವಿಧ ಭಾಗಗಳಲ್ಲಿ ಮಾಡಿದ್ದೇವೆ. ಈ ಗ್ಯಾರಂಟಿಗಳನ್ನು ಬಿಜೆಪಿಯವರು ಮಾತ್ರ ಸಹಿಸಿಲ್ಲ. ಐದು ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ನಾವು ನುಡಿದಂತೆ ನಡೆಯುತ್ತಿದ್ದೇವೆ. ಚುನಾವಣೆ ಬಳಿಕ ಗ್ಯಾರಂಟಿಗಳ ಸ್ಥಗಿತ ಅನ್ನೋದೆಲ್ಲ ಸುಳ್ಳು ಎಂದು ಸ್ಪಷ್ಟಪಡಿಸಿದರು.
0 Comments