ಪಾದಯಾತ್ರೆಗೆ ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಮಠದ ಶ್ರೀ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಸಹಾಯಕ ರ ಹೋರಾಟ ನೋವು ಅನಿಸ್ತಿದೆ, ಹಗಲಿರುಳು ದುಡಿಯುತ್ತಿರುವ, ಸರಕಾರದ ಯೋಜನೆಗಳನ್ನು ಹಗಲು ರಾತ್ರಿ ಕೆಲಸ ನಿರ್ವಹಿಸುತ್ತಿದ್ದರು ಇವರಿಗೆ ಸೌಲಭ್ಯ ಸಿಗದೆ ಇರುವುದು ಶೋಚನಿಯ ಎಂದರು. ರಾಣಿ ಚೆನ್ನಮ್ಮ ನ , ಸಂಗೊಳ್ಳಿ ರಾಯಣ್ಣ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಗ್ರಾಮ ಸಹಾಯಕರಿಗೆ "ಡಿ" ದರ್ಜೆ ಬೇಡಿಕೆ ಈಡೇರಿಸಿ, ಸೇವಾ ಭದ್ರತೆಯನ್ನು ಸರಕಾರ ಒದಗಿಸಲಿ ಎಂದರು.ಬೆಳಗಾವಿ ಜಿಲ್ಲಾಧ್ಯಕ್ಷ ಮಹಾದೇವಪ್ಪ ಇಂಗಳಗಿ ಮಾತನಾಡಿ, ಗಾಂಧೀಜಿ ಪಾದಯಾತ್ರೆಯ ಮುಖಾಂತರ ಹೋರಾಡಿದ್ದು, ಅವರ ಸ್ಮರಣೆ ಮಾಡಿ ಯಶಸ್ಸು ಸಿಗುವರೆಗೆ ಹೋರಾಟ ಅನಿವಾರ್ಯ ಎಂದರು. ರಾಜ್ಯಾಧ್ಯಕ್ಷ ಎಚ್.ಎನ್.ದೇವರಾಜ, ಗ್ರಾ.ಸ.ಸಂಘದ ಕಾನೂನು ಹೋರಾಟ ಸಮಿತಿ ರಾಜ್ಯಾದ್ಯಕ್ಷ ಮಡಿವಾಳಪ್ಪ ವಣ್ಣೂರ ಮಾತನಾಡಿ ರಾಜ್ಯಾಧ್ಯಂತ ಸು.8 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮ ಸಹಾಯಕರು ಆಗಮಿಸಿದ್ದು ಜಯ ಸಿಗುವರೆಗೆ ಹೋರಾಡುತ್ತೇವೆ ಎಂದರು. ಪಾದಯಾತ್ರೆಯು ಕೋಟೆ ಆವರಣದಿಂದ ಆರಂಭಗೊಂಡು, ರಾಣಿ ಚೆನ್ನಮ್ಮ ವೃತ್ತದಲ್ಲಿ ಚೆನ್ನಮ್ಮನ ಮೂರ್ತಿಗೆ ರಾಯಣ್ಣ ಮೂರ್ತಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಗ್ರಾಮ ಸಹಾಯಕರ ಸಂಘದ ಕಾನೂನು ಸಲಹೆಗಾರ ಪಾವಗಡ ಶ್ರೀರಾಮ ಹಲೋ ಗ್ರಾಮ ಸಹಾಯಕ, ಚಲೋ ಬೆಳಗಾವಿ ಘೋಷಣೆ ಕೂಗುತ್ತ, ಗ್ರಾಮ ಸಹಾಯಕರ ಸೇವೆ, ಕಷ್ಟ, ಕಣ್ಣಿರು ಅರಿತು ನಮ್ಮ ಸೇವೆಯನ್ನು "ಡಿ" ದರ್ಜೆಗೆ ಸೇರಿಸಿ, ಸೇವಾ ಭದ್ರತೆ ಒದಗಿಸಬೇಕೆಂದರು. ಗ್ರಾಮ ದೇವತೆಯ ಆರ್ಶಿವಾದ ಪಡೆದು ಹೋರಾಟ ಆರಂಭಿಸಿದ್ದೇವೆ. ಕಂದಾಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಸಹ ನಮ್ಮ ಪದಾಧಿಕಾರಿಗಳನ್ನು ಒಳಗೊಂಡು ಸಭೆ ನಡೆಸಿದ್ದು ಸರಕಾರ ಖಂಡಿತವಾಗಿಯೂ ನಮಗೆ ಸೇವಾ ಭದ್ರತೆ ಒದಗಿಸುವ ವಿಶ್ವಾಸವಿದೆ ಎಂದರು.ನಂತರ ಪಾದಯಾತ್ರೆ ಯು
ಎಂ.ಕೆ.ಹುಬ್ಬಳ್ಳಿ ಕಡೆ ಅತಿ ಹುಮ್ಮಸ್ಸಿನಿಂದ ಸಾಗಿತು.ದಾರಿಯುದ್ದಕ್ಕೂ ರೈತರು ನೀರು ಒದಗಿಸಿದರು. ಪಾದಯಾತ್ರೆಯಲ್ಲಿ ರಾಜ್ಯದ ಮೂಲೆಮೂಲೆಯಿಂದ ಗ್ರಾಮಸಹಾಯಕರು ಅಪಾರ ಸಂಖ್ಯೆಯಲ್ಲಿ ಹುಮ್ಮಸ್ಸಿನಿಂದ ಪಾಲ್ಗೊಂಡರು.
0 Comments