- ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನಿಮಿತ್ತವಾಗಿ ಕನ್ನಡ ಸಾಹಿತ್ಯ
ಚನ್ನಮ್ಮನ ಕಿತ್ತೂರು
ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ವಿಶೇಷ
ಕವಿಗೋಷ್ಠಿಯು ರವಿವಾರ ಡಿಶೆಂಬರ ೩ ರಂದು ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ಅತೀ
ಸಡಗರದಿಂದ ನಡೆಯಿತು.
ಕವಿಗೋಷ್ಟಿಯನ್ನು ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸುವದರ ಮೂಲಕ ಉದ್ಘಾಟಿಸಿದ ಹಿರಿಯ
ಪತ್ರಕರ್ತರಾದ ಶ್ರೀ ಪ್ರದೀಪ ಮೇಲಿನಮನಿ ಕರ್ನಾಟಕದಾದ್ಯಂತ ಇಡೀ ವರ್ಷ ಅತೀ ಸಡಗರದಿಂದ
ಆಚರಿಸಲಾಗುತ್ತಿರುವ ಕರ್ನಾಟಕ ಸಂಭ್ರಮ – ೫೦ ರ ನಿಮಿತ್ತವಾಗಿ ಕಿತ್ತೂರಿನ ಕನ್ನಡ ಸಾಹಿತ್ಯ ಪರಿಷತ್ತು
ತಾಲೂಕಾ ಘಟಕವು ಜಿಲ್ಲಾ ಮಟ್ಟದ ವಿಶೇಷ ಕವಿಗೋಷ್ಠಿಯನ್ನು ಹಮ್ಮಿಕೊಂಡಿರುವದು
-
ಅಭಿನಂದನಾರ್ಹವಾದುದಾಗಿದೆ ಎಂದು ಭಾಗವಹಿಸಲಿರುವ ಕವಿಗಳಿಗೆ ಶುಭ ಕೋರಿದರು. ಬೆಳಗಾವಿ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾದ ಶ್ರೀ ವೀರಭದ್ರ ಅಂಗಡಿ ಮಾತನಾಡಿ
ಕನ್ನನಡ ಅಳಿವು ಉಳಿವಿಗಾಗಿ ಸರಕಾರಿ ಕನ್ನಡ ಶಾಲೆಗಳ ಗುಣಮಟ್ಟ ಕಾಯ್ದುಕೊಳ್ಳುವದು ಅತೀ
ಅವಶ್ಯಕವಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಿತ್ತೂರಿನ ಪ್ರಣವ ಯೋಗ ಕೇಂದ್ರದ
ಸಂಚಾಲಕಿಯರಾದ ಶ್ರೀಮತಿ ಸೌಮ್ಯಾ ರಾಘವೇಂದ್ರ ಮೈಸೂರು ರಾಜ್ಯವು ಕರ್ನಾಟಕ ರಾಜ್ಯವಾಗಿರುವ
ಕುರಿತು ಮಾತನಾಡುತ್ತ ಇದಕ್ಕಾಗಿ ಶ್ರಮಿಸಿದ ಎಲ್ಲ ಸಾಹಿತಿಗಳನ್ನು ಸ್ಮರಿಸುತ್ತಾ ಕನ್ನಡ ಭಾಷೆಯ ಹಿರಿಮೆ
ಅಗಾಧವಾದುದಾಗಿದ್ದು ಅದನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದು
ತಿಳಿಸಿದರು.ಜೊತೆಗೆ ಕನ್ನಡ ಭಾಷೆ ಯನ್ನು ಬೋಧನಾ ಮಾಧ್ಯಮವನ್ನಾಗಿ ಆಯ್ಕೆ ಮಾಡಿಕೊಳ್ಳುವತ್ತ
ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿದರು.
ಡಿಶಂಬರ ತಿಂಗಳ ಸಾಹಿತಿ ಸನ್ಮಾನದ ಅಂಗವಾಗಿ ಯುವ ಸಾಹಿತಿ ಮತ್ತು ಬೆಳಗಾವಿ ಜಿಲ್ಲಾ ಅತ್ಯುತ್ತಮ
ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ನಾಗಯ್ಯ ಹುಲೆಪ್ಪನವರಮಠ ಇವರನ್ನು ಗೌರವಿಸಲಾಯಿತು. ಗೌರವ
ಸ್ವೀಕರಿಸಿದ ಇವರು ಕನ್ನಡ ಅಸ್ಮಿತೆ ಯ ಅರಿವನ್ನು ಎಲ್ಲರಲ್ಲಿ ಮೂಡಿಸಬೇಕಾಗಿದೆ ಎನ್ನುತ್ತ ಈ ದಿಶೆಯಲ್ಲಿ
ಕನ್ನಡ ಪ್ರೇಮಿಗಳು ಭಾಷಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಗೌರವ ಕಾರ್ಯದರ್ಶಿಗಳಾದ
ಶ್ರೀ ಮಂಜುನಾಥ ಕಳಸಣ್ಣವರ ತಮ್ಮ ಆಶಯ ನುಡಿಗಳಲ್ಲಿ ಕವನಗಳ ರಚನೆ ಮತ್ತು ಮಹತ್ವವನ್ನು ಕುರಿತು
ತಿಳಿಸುತ್ತಾ ಇಂದಿನ ಯುವ ಪೀಳಿಗೆ ಕವನಗಳನ್ನು ಬರೆಯುವ ರೂಢಿ ಮಾಡಿಕೊಳ್ಳಬೇಕು ಎಂದು ಕರೆ
ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಡಾ.ಎಸ್.ಬಿ.ದಳವಾಯಿ ಈ ಕವಿಗೋಷ್ಠಿ ಹಮ್ಮಿಕೊಳ್ಳಲು ಸಹಕರಿಸಿದ ಎಲ್ಲ
ಸ್ನೇಹಿತರನ್ನು ಅಭಿನಂದಿಸುತ್ತ ಬೆಳಗಾವಿ ಜಿಲ್ಲೆಯ ಎಲ್ಲ ತಾಲೂಕುಗಳಿಂದ ಕವಿಗಳು ಆಗಮಿಸಿರುವದಕ್ಕೆ
ಸಂತಸ ವ್ಯಕ್ತ ಪಡಿಸಿದರು. ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಕೇವಲ
ಈ ಒಂದು ವರ್ಷ ಮಾತ್ರ ಕನ್ನಡ ಸಂಭ್ರಮಾಚರಣೆ ಅಗಿರದೆ ಪ್ರತಿ ದಿವಸ , ಪ್ರತಿ ವರ್ಷ ನಿರಂತರವಾಗಿ
ಕನ್ನಡ ಭಾಷೆಯ ಅರಿವನ್ನು ನಮ್ಮ ಮಕ್ಕಳಲ್ಲಿ ಬೆಳೆಸುವ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ
ಆಶೀರ್ವದಿಸಿದರು. ಕುಮಾರಿ ಕೃತಿ ರಾಘವೇಂದ್ರ ಇವರ ಕನ್ನಡ ಗೀತೆಯೊಂದಿಗೆ ಆರಂಭವಾದ
ಕವಿಗೋಷ್ಠಿಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಕವಿ ಕವಯತ್ರಿಯರು ಕವನ ವಾಚನ ಮಾಡಿದರು.
ಇವರೆಲ್ಲರಿಗೆ ಪ್ರಮಾಣ ಪತ್ರ ಮತ್ತು ಪುಸ್ತಕಗಳನ್ನು ವಿತರಿಸಲಾಯಿತು.
ಶಿಕ್ಷಕಿ ಸುನಂದಾ ಪಾಟೀಲ ಪ್ರಾರ್ಥಿಸಿದರು. ಕಸಾಪ ಮಹಿಳಾ ಪ್ರತಿನಿಧಿಗಳು ನಾಡಗೀತೆ ಹಾಡಿದರು. ಕನ್ನಡ
ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಕೋಶಾಧ್ಯಕ್ಷರಾದ ಮಹೇಶ್ವರ ಹೊಂಗಲ
ಸ್ವಾಗತಿಸಿದರು. ಕಸಾಪ ಕಾರ್ಯದರ್ಶಿ ವಿ.ಎಸ್.ನಂದೀಹಳ್ಳಿ ವಂದಿಸಿದರು. ಪ್ರಭಾ ಲದ್ದೀಮಠ ಮತ್ತು
ಶೋಭಾ ಪಾಶ್ಚಾಪೂರ ನಿರೂಪಿಸಿದರು.
0 Comments