ಕಿತ್ತೂರಿನ ಶ್ರೀ ಕಲ್ಕತದಲ್ಲಿ ಮಂಗಳವಾರ ದಿನಾಂಕ 26 ರಂದು ಸಾಯಂಕಾಲ ಮಾಸಿಕ ಶಿವಾನುಭವ ಕಾರ್ಯಕ್ರಮ-mkvani

ಕಿತ್ತೂರಿನ ಶ್ರೀ ಕಲ್ಕತದಲ್ಲಿ ಮಂಗಳವಾರ ದಿನಾಂಕ 26 ರಂದು ಸಾಯಂಕಾಲ ಮಾಸಿಕ ಶಿವಾನುಭವ ಕಾರ್ಯಕ್ರಮ.


ಚನ್ನಮ್ಮನ ಕಿತ್ತೂರು:- ಕಿತ್ತೂರಿನ ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ಮಂಗಳವಾರ ದಿನಾಂಕ 26 ರಂದು ಸಾಯಂಕಾಲ 6 ಗಂಟೆಗೆ ಮಾಸಿಕ ಶಿವಾನುಭವ ಕಾರ್ಯಕ್ರಮ ನಡೆಯಲಿದೆ ಎಂದು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸಾನಿಧ್ಯವನ್ನು ಶ್ರೀ ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಮತ್ತು ನಿಚ್ಚಣಕಿಯ ಪೂಜ್ಯ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ವಹಿಸಲಿದ್ದಾರೆ.

ಡಾ.ಎಸ್.ಬಿ.ದಳವಾಯಿ ಇವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಶಿವಾನುಭವಕಾರ್ಯಕ್ರಮದಲ್ಲಿ ಹಿರೇನಂದಿಹಳ್ಳಿಯ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಶ್ರೀ ನಾಗಯ್ಯ ಹುಲೆಪ್ಪನವರಮಠ ಅಷ್ಟಾವರಣ ಕುರಿತು ಉಪನ್ಯಾಸ ನೀಡಲಿದ್ದಾರೆ. ಪ್ರತಿ ತಿಂಗಳು ಹುಣ್ಣಿಮೆಯ ದಿವಸ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಶ್ರೀ ಈಶ್ವರ ಗಡಿಬಿಡಿ, ಶ್ರೀ ಪ್ರಲ್ಲಾದ ಶಿಗ್ಗಾಂವಿ ತಂಡದವರು ಮತ್ತು ಸದ್ಗುರು ಶ್ರೀ ನಾಗಭೂಷಣ ಶಿವಯೋಗಿಗಳ ಭಜನಾ ಮಂಡಳಿ ಹಿರೇನಂದಿಹಳ್ಳಿ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಕಿತ್ತೂರ ನಾಡಿನ ಶರಣ ಶರಣೆಯರು ಭಾಗವಹಿಸಬೇಕೆಂದು ಶ್ರೀ ಕಲ್ಮಠದ ಸಕಲ ಸದ್ಭಕ್ತರ ಪರವಾಗಿ ಕೋರಲಾಗಿದೆ.

Post a Comment

0 Comments