MK.vani ಸುದ್ದಿ. ಚೆನ್ನಮ್ಮ ಕಿತ್ತೂರು ಶ್ರೀ ಸಾಯಿ ಮಂದಿರದಲ್ಲಿ. ಅದ್ದೂರಿಯಾಗಿ ಕಾರ್ತಿಕ ಸಂಭ್ರಮ ಆಚರಣೆ

ಶ್ರೀ ಸಾಯಿ ಮಂದಿರದಲ್ಲಿ ಅದ್ದೂರಿ ಕಾರ್ತಿಕ ಮಾಸ ಆಚರಣೆ ಮಾಡಲಾಯಿತು
ಚನ್ನಮ್ಮನ ಕಿತ್ತೂರು: "ಸಾಯಿ..ಸಾಯಿ.. ಎಂದವರೇ ಪುಣ್ಯಾತ್ಮರು" ಎಂದು ಭಗವಂತನ ಮಹಿಮೆಯನ್ನು ಕೊಂಡಾಡಿದ, ಅಭೂತಪೂರ್ವ ಪವಾಡಗಳಿಂದ ಲೋಕವನ್ನೇ ಬೆಳಗಿ ಬೆರಗುಗೊಳಿಸಿದ ದಿವ್ಯ ಸಂತ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ ಕಾರ್ತಿಕ ಮಾಸದ ನಿಮಿತ್ತ ದೀಪತ್ಸೋವ ಕಾರ್ಯಕ್ರಮ ಆರಚರಿಸಲಾಯಿತು.
ಈ ವೇಳೆ ಶ್ರೀ ಸಾಯಿ ಸೇವಾ ಸಮೀತಿ ಅಧ್ಯಕ್ಷರಾದ ಶಿವಾನಂದ ಜಕಾತಿ ಹಾಗೂ ಕುಟುಂಬದ ಸದಸ್ಯರು, ಮಠದ ಭಕ್ತರು ಹಾಗೂ ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ವೇದಿಕೆ ಪದಾಧಿಕಾರಿಗಳು ಸಾವಿರಾರು ದೀಪಗಳನ್ನು ಹೊತ್ತಿಸುವ ಮೂಲಕ ಸಂಭ್ರಮದಿಂದ ದೀಪೋತ್ಸವ ಕಾರ್ಯಕ್ರಮವನ್ನು ಆಚರಿಸಿದರು.
ಖ್ಯಾತ  ಸಂಗೀತಗಾರರಾದ  ಈಶ್ವರ ಗಡಿಬಿಡಿ ಅವರು ಗ್ರಾಮದೇವಿ ಭಜನಾ ತಂಡದೊಂದಿಗೆ ಭಜನೆ ಮೂಲಕ ಭಕ್ತಿಯ ಸುಧೆ ಹರಿಸಿದರು. ಮಂದಿರಕ್ಕೆ ಬರುವ ಭಕ್ತ ಸಮೂಹಕ್ಕೆ ಭಕ್ತಾಧಿಗಳ ಮಾಗೂ ಮಂದಿರದ ವತಿಯಿಂದ ಪ್ರಸಾದ ಸೇವೆ ಜರುಗಿತು.
ಈ ವೇಳೆ ಮಠದ ಭಕ್ತರು, ಬೆಳ್ಳಿ ಚುಕ್ಕಿ ರಾಣಿ ಚನ್ನಮ್ಮ ಮಹಿಳಾ ವೇದಿಕೆ, ಹಾಗೂ ಗ್ರಾಮದೇವಿ ಭಜನಾ ಸಂಘದ ಸರ್ವ ಸದಸ್ಯರು ಇದ್ದರು.

Post a Comment

0 Comments