ದಕ್ಷಿಣ ಭಾರತೀಯರ ಎದೆಗೆ ಅಕ್ಷರ ಬೀಜ ಬಿತ್ತಿದವರು ಅರಟಾಳ ರುದ್ರಗೌಡರು; ಸಂಶೋಧಕ ಮಹೇಶ ಚನ್ನಂಗಿ ಅಭಿಮತ
ಬೆಳಗಾವಿ: ದಕ್ಷಿಣ ಭಾರತೀಯರ ಎದೆಗೆ ಅಕ್ಷರ ಬೀಜ ಬಿತ್ತಿದವರು ಅರಟಾಳ ರುದ್ರಗೌಡರು ಎಂದು ಸಂಶೋಧಕರು ಕಿತ್ತೂರು ಸರ್ಕಾರಿ ಪ್ರೌಡಶಾಲೆಯ ಉಪ ಪ್ರಾಂಶುಪಾಲ ಮಹೇಶ ಚನ್ನಂಗಿ ಹೇಳಿದರು. ಜಿಲ್ಲೆಯ ಮುರಗೋಡ ಶ್ರೀ ಮಹಾಂತೇಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 1999-2000 ನೇ ಸಾಲಿನಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡಿದ ಸಹಪಾಠಿಗಳಿಂದ ಗುರುವಂದನೆ ಹಾಗೂ ಅಪೂರ್ವ ಸ್ನೇಹ ಸಂಗಮ ಸಮಾರಂಭದಲ್ಲಿ ಮಾತನಾಡಿದರು.
ವಿಜ್ಞಾನ ಶಿಕ್ಷಕ ಎಮ್ ವಿ ಉಪ್ಪಿನ ಪ್ರಾಸ್ಥಾವಿಕವಾಗಿ ಮಾತನಾಡಿ ಪ್ರತಿಯೊಬ್ಬ ಮನುಷ್ಯರ ಜೀವನದಲ್ಲಿ ಮೂರು ತರಹದ ಗುರುಗಳು ಇರುತ್ತಾರೆ ಮೊದಲ ಗುರು ತಾಯಿ, ಎರಡನೇಯ ಗುರು ಶಿಕ್ಷಕ, ಹಾಗೂ ಮೂರನೇಯವರು ಆದ್ಯಾತ್ಮಿಕ ಗುರುಗಳು ಎಂದ ಅವರು ಗುರುಶಿಷ್ಯರ ಸಂಬಂಧ ಅವಿನಾಭಾವ ಸಂಬಂಧವಾಗಿರುತ್ತದೆ ಎಂದು ಹೇಳಿದರು.
ಮಹಾಂತೇಶ ಪಡೆನ್ನವರ ಮಾತನಾಡಿ ಗುರು ಅಂದರೆ ವ್ಯಕ್ತಿ ಅಲ್ಲಾ ನಮ್ಮಲ್ಲಿ ಇರುವ ಅಜ್ಞಾನವನ್ನು ತೊಲಗಿಸಿ ಜ್ಞಾನವನ್ನು ಬಿತ್ತುವ ಶಕ್ತಿ ಎಂದ ಅವರು ಅಗಲಿದ ಅನೇಕ ಶಿಕ್ಷಕರನ್ನು ನೆನೆದರು.
ಮಹಾಂತೇಶ ಬಡಿಗೇರ ಮಾತನಾಡಿ ವಿದ್ಯಾರ್ಥಿಗಳು ಗುರುಗಳಿಂದ ಕಲಿತು ಅವರಿಗೆ ವಂದನೆ ಹೇಳುವುದು ಶಿಷ್ಯರ ಕರ್ತವ್ಯ ಎಂದು ಹೇಳುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡರು.
ಶರಣೆ ಪಾರ್ವತಿ ಗೌಡರ ಮಾತನಾಡಿ ಸುಖ ಬೇಕಾದರೆ ಸುಖದ ಮಾರ್ಗವನ್ನೂ ಕಂಡುಕೊಳ್ಳಬೇಕು ಅಂತಹ ಮಾರ್ಗವನ್ನೂ ತೋರಿಸುವವರು ಗುರುಗಳು ಎಂದರು.
ಮುರಗೋಡ ಮಹಾಂತ ದರದುಂಡೇಶ್ವರ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು, ಸುವರ್ಣಾ ಚೌಡಕ್ಕನ್ನವರ ಸ್ವಾಗತಿಸಿದರು, ಎಮ್ ವಿ ಉಪ್ಪಿನ ನಿರೂಪಸಿ ವಂದಿಸಿದರು
ಈ ವೇಳೆ ಪ್ರಾಚಾರ್ಯ ಆರ್ ಎಮ್ ಭಜಂತ್ರಿ , ಶಿಕ್ಷಕರಾದ ಎಮ್ ಎಮ್ ಕಾರಗಿ, ಎನ್ ಎಸ್ ತಲ್ಲೂರ, ಎಮ್ ಆರ್ ಮುತಾಲಿಕದೇಶಾಯಿ, ಎಮ್ ಎ ಹಕ್ಕಿ, ಆರ್ ಎಮ್ ಅಂಗಡಿ ಸೇರಿದಂತೆ ಇತರರಿದ್ದರು.
0 Comments