Kittur : ನಾಡಿಗೆ ಬರದ ಛಾಯೆ ಆವರಿಸಿ ರೈತರು ಸಂಕಷ್ಟದಲ್ಲಿ ಇರುವ ಕಾರಣ ಶಾಸಕ ವಿನಯ ಕುಲಕರ್ಣಿ ಅವರ ಜನ್ಮದಿನವನ್ನು ಸರಳವಾಗಿ ಆಚರಣೆ

ನಾಡಿಗೆ ಬರದ ಛಾಯೆ ಆವರಿಸಿ ರೈತರು ಸಂಕಷ್ಟದಲ್ಲಿ ಇರುವ ಕಾರಣ ಶಾಸಕ ವಿನಯ ಕುಲಕರ್ಣಿ ಅವರ ಜನ್ಮದಿನವನ್ನು ಸರಳವಾಗಿ ಆಚರಣೆ ಮಾಡಲಾಯಿತು

ಹುಟ್ಟು ಶ್ರೇಷ್ಠತೆಯಲ್ಲ ಹುಟ್ಟಿದ ನಂತರದ ಬದುಕುವ ಬದುಕು ಶ್ರೇಷ್ಠ; ನಿಜಗುಣಾನಂದ ಶ್ರೀಗಳು ಅಭಿಮತ

ಚನ್ನಮ್ಮನ ಕಿತ್ತೂರು:  ಹುಟ್ಟು ಶ್ರೇಷ್ಠವಲ್ಲ ಹುಟ್ಟು ನಿಸರ್ಗ ಸಮ್ಮತವಾದದ್ದು. ಹುಟ್ಟಿದ ನಂತರದ ಬದುಕು ಬದುಕುವುದಿದೆಯಲ್ಲ ಅದು ಬಹಳ ಶ್ರೇಷ್ಠ ಅಂತಹ ಬದುಕು ಬದುಕಿದವರು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಎಂದು  ಬೈಲೂರು ನಿಷ್ಕಲ ಮಂಟಪ ಹಾಗೂ ಮುಂಡರಗಿ ತೋಂಟದಾರ್ಯ ಮಠದ ಶ್ರೀ ನಿಜಗುಣ ಪ್ರಭು ಮಹಾಸ್ವಾಮಿಗಳು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದ ಆಡಳಿತ ಸೌಧದ ಹತ್ತಿರ ಇರುವ ಖಾಸಗಿ ಖುಲ್ಲಾ ಜಾಗದಲ್ಲಿ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರ 55 ನೇ ಜನ್ಮದಿನದ ನಿಮಿತ್ತ ನಡೆದ ವಿಜಯೋತ್ಸದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರಾಸ್ತಾವಿಕ ಅರವಿಂದ ಏಗನಗೌಡರ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಕ್ಷೇತ್ರಕ್ಕೆ ಕಾಲು ಇಡದೆ ಶಾಸಕರಾಗಿ ಆಯ್ಕೆಯಾದ ಮೊಟ್ಟ ಮೊದಲ ವ್ಯಕ್ತಿ ಶಾಸಕ ವಿನಯ ಕುಲಕರ್ಣಿ ಅವರು. ಕೆಲವು ಪಟ್ಟಭದ್ರ ಹಿತಾಶಕ್ತಿಗಳು ಅವರ ಹೆಸರಿಗೆ ಮಸಿ ಬಳಿಯಲು ಕುತಂತ್ರ ಮಾಡಿದ್ದಾರೆ. ಇಂದು ಕ್ಷೇತ್ರದಾದ್ಯಂತ ಅವರು ಮಾಡಿದ ಜನಪರ ಕೆಲಸಗಳಿಂದ ಅವರ ಹೆಸರು ಅಜರಾಮರವಾಗಿ ಉಳಿದಿದೆ. ನಮ್ಮ ನಾಡಿಗೆ ಬರ ಬಂದು ರೈತರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ ಹುಟ್ಟು ಹಬ್ಬ ಆಚರಣೆ ಬೇಡ ಎಂದು ವಿನಯ ಕುಲಕರ್ಣಿ ಅವರು ಹೇಳಿದ್ದರು. ಆದರೂ ಅವರ ಅಭಿಮಾನಿಗಳು ಮತ್ತು  ಹಿತೈಷಿಗಳು ಸೇರಿ ಜನ್ಮದಿನದ ಆಚರಣೆ ಮಾಡಲು ನಿರ್ದರಿಸಿ ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಬೆಟಗೇರಿ ಶ್ರೀ ವಿರೂಪಾಕ್ಷ ಮಹಾಸ್ವಾಮಿಗಳು ಮಾತನಾಡಿ ವಿನಯ ಕುಲಕರ್ಣಿ ಅವರು ಕ್ಷೇತ್ರದ ಜನರ ಕಷ್ಟಗಳನ್ನು ಕೇಳಿ ಅವುಗಳನ್ನು ಪರಿಹರಿಸುವ ಮೂಲಕ ಕ್ಷೇತ್ರದ ಜನರಿಗೆ ಬೆಲ್ಲ ಸಕ್ಕರೆಯಾಗಿದ್ದಾರೆ ಎಂದರು.

ನಯಾನಗರದ ಶ್ರೀ ಸುಖದೇವಾನಂದ ಮಹಾಸ್ವಾಮಿಗಳು ಮಾತನಾಡಿ ನಾಯಕರು ವಿವಿಧ ಹುದ್ದೆಗಳನ್ನು ಅಲಂಕರಿಸಿದರೆ ಜನನಾಯಕರಾಗುವುದಿಲ್ಲ ಹಗಲಿರಳು ಜನರ ಸೇವೆ ಮಾಡುವ ಮೂಲಕ ಜನನಾಯಕರಾಗುತ್ತಾರೆ. ಅಂತವರ ಸಾಲಿನಲ್ಲಿ ವಿನಯ ಕುಲಕರ್ಣಿ ಮೊದಲಿಗರು ಎಂದರು.
 
ಧಾರವಾಡ ಮುರಗಾಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮಾತನಾಡಿ ಆತ್ಮ ಸಾಕ್ಷಿ ಮತ್ತು ಮನಸಾಕ್ಷಿ ಬದುಕ ಬದುಕಿದ ವಿನಯ ಕುಲಕರ್ಣಿ ಶಾಸಕ ಮಂತ್ರಿ ಅಷ್ಟೇ ಅಲ್ಲ ಮುಖ್ಯಮಂತ್ರಿ ಆಗಲಿ ಎಂದು ಹಾರೈಸಿದರು.

ವಿಜಯಪೂರದ ಇಸ್ಲಾಂ ಧರ್ಮಗುರುಗಳಾದ ಹಾಸೀಮ್ಪೀರ ಸಾಹೇಬ ಖಾದ್ರಿ ಮಾತನಾಡಿ ಕೆಲವು ನಾಯಕರು ಗೆದ್ದ ತಕ್ಷಣ ಗೆಲ್ಲಿಸಿದ ಮತದಾರರನ್ನು ಮರೆಯುತ್ತಾರೆ ಆದರೆ ಗೆಲ್ಲಿಸಿದ ಜನರ ಕೈ ಬಿಡದ ನಾಯಕರು ವಿನಯ ಕುಲಕರ್ಣಿ ಎಂದ ಅವರು ಅವರು ಮುಂದಿನ ಜನ್ಮದಿನ ಆಚರಣೆ ವೇಳೆ ಮಂತ್ರಿಗಳಾಗಿ ಜನ್ಮದಿನದ ಆಚರಣೆ ಮಾಡಿಕೊಳ್ಳಲಿ ಎಂದು ಆಶೀರ್ವದಿಸಿದರು.

ಹೂಲಿ ಮಠದ ಶ್ರೀ ಉಮೇಶ ಮಹಾಸ್ವಾಮಿಗಳು ಮಾತನಾಡಿ ವಿನಯ ಕುಲಕರ್ಣಿ ಅವರಿಗೆ ರಾಜಕೀಯ ಅಂಗಳಕ್ಕೆ ಬರಲು ಸೂಚಿಸಿದ್ದು ನಮ್ಮ ಕಲಘಟಗಿಯ ಶಾಖಾ ಮಠ. ಮುಂದಿನ ದಿನಗಳಲ್ಲಿ ಅವರು ಮಂತ್ರಿಗಳಾಗುವ ಮೂಲಕ ಧಾರವಾಡ ಜಿಲ್ಲೆಗೆ ಪ್ರವೇಶಿಸುವಂತಾಗಲಿ ಶುಭ ನುಡಿದರು.


ನವಲಗುಂದ ಶಾಸಕ ಎನ್ ಎಚ್ ಕೋನರಡ್ಡಿ ಮಾತನಾಡಿ ರಾಜ್ಯ ರಾಜಕಾರಣದಲ್ಲಿ ಮುಂದಿನ ಕೆಲವೇ ಕೆಲವು ದಿನಗಳಲ್ಲಿ ಶಾಸಕ ವಿನಯ ಕುಲಕರ್ಣಿ ಅವರ ಮುಖಂಡತ್ವದಲ್ಲಿ ನಾವೆಲ್ಲರು ಕೆಲಸ ಮಾಡುವ ಸಂದರ್ಭ ಬರಲಿದ್ದು ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ಸಿಗಲಿದೆ ಎಂದು ಹೇಳಿದರು.

ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ ಕ್ಷೇತ್ರದ ಹೊರಗೆ ಇದ್ದು ಚುನಾವಣೆಯಲ್ಲಿ ಜಯ ಗಳಿಸಲು ಗಂಡೆದೆ ನಾಯಕರ ಬೇಕು ಅಂತಹ ಗಂಡೆದೆಯ ನಾಯಕ ನನ್ನ ಸ್ನೇಹಿತ ವಿನಯ ಕುಲಕರ್ಣಿ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ ವಿನಯ ಕುಲಕರ್ಣಿ ಜನನಾಯಕರಲ್ಲ ಜನಸೇವಕರು. ಕ್ಷೇತ್ರಕ್ಕೆ ಕಾಲು ಇಡದೆ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಫಲದಿಂದ ಜಯ ಗಳಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ ಇದು ಇತಿಹಾಸ ಎಂದರು.

ಶಿವಲೀಲಾ ಕುಲಕರ್ಣಿ ಮಾತನಾಡಿ ಧಾರವಾಡ ಗ್ರಾಮೀಣ ಮತಕ್ಷೇತ್ರದ ಮತದಾರರು ವಿನಯ ಕುಲಕರ್ಣಿ ಅವರನ್ನು ದಾಖಲೆಯ ಮತಗಳಿಂದ ಆರಿಸಿ ತಂದಿದ್ದು ನಿಮ್ಮ ಋಣ ನಮ್ಮ ಮೇಲಿದ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ನಿಮಗೆ ಚಿರಋಣಿಯಾಗಿ ಇರುತ್ತೇವೆ ಎಂದರು. 
ಧಾರವಾಡ ಶಾಸಕ ವಿನಯ ಕುಲಕರ್ಣಿ ಮಾತನಾಡಿ ನಾಡಿಗೆ ಬರದ ಛಾಯೆ ಆವರಿಸಿ ರೈತರು ಸಂಕಷ್ಟದಲ್ಲಿ ಇರುವ ಕಾರಣ ನಾನು ನನ್ನ ಜನ್ಮದಿನದ ಆಚರಣೆ ಮಾಡುವುದು ಬೇಡ ಎಂದು ಹೇಳಿದರೂ ಅಭಿಮಾನಿಗಳು ಮತ್ತು ಹಿತೈಷಿಗಳು ಇದನ್ನೆಲ್ಲಾ ಮಾಡಿದ್ದು ಜನ್ಮದಿನದ ಆಚರಣೆ ಕೇವಲ ನೆಪ ಮಾತ್ರ ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಬೇಟಿ ಮಾಡುವುದೇ ಉದ್ದೇಶವಾಗಿತ್ತು ಎಂದ ಅವರು ನಮ್ಮ ಪಕ್ಷದ ಗ್ಯಾರಂಟಿಗಳ ಹೊಂದಾಣಿಕೆ ಹಿನ್ನಲೆಯಲ್ಲಿ ಅಭಿವೃದ್ಧಿಯ ಕಾರ್ಯಗಳು ಇನ್ನೂ ಪ್ರಾರಂಭ ಆಗಿಲ್ಲ ಮುಂದಿನ ತಿಂಗಳು ಅಭಿವೃದ್ಧಿ ಕಾರ್ಯಗಳು ಪ್ರಾರಂಭ ಆಗುತ್ತವೆ. ಸರ್ಕಾರದ ಅನುದಾನ ಬಂದರೆ ಸರಿ ತಡವಾದರೆ ನನ್ನ ಸ್ವಂತ ಹಣದಿಂದ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗುವುದು ಎಂದರು. 

ಈ ವೇಳೆ ಝಿ ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಹಣಮಂತ ಲಮಾಣಿ ಹಾಗೂ ಸಂಗಡಿಗರಿಂದ ಸಂಗೀತ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗದವು. ಮಂಗಳೂರ ಕಲಾವಿದರ ಹುಲಿ ನೃತ್ಯ ನೋಡುಗರ ಕನ್ಮನ ಸೆಳೆಯಿತು. ಈ ವೇಳೆ ಮಂಗಳೂರ ಹುಲಿ ಕುಣಿತ ಕಲಾವಿದರ ಜೊತೆ ಶಾಸಕ ವಿನಯ ಕುಲಕರ್ಣಿ ಹಾಗೂ ಬಾಬಾಸಾಹೇಬ ಪಾಟೀಲ ಅವರು ನೃತ್ಯ ಮಾಡಿ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಶಾಸಕ ವಿನಯ ಕುಲಕರ್ಣಿ ಅವರಿಗೆ ಗರಗ ಗ್ರಾಮದ ಮಡಿವಾಳೆಪ್ಪ ಉಳವನ್ನವರ ಹಾಗೂ ಗೆಳೆಯರ ಬಳಗದ ವತಿಯಿಂದ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ ಪಡೆದ ರಾಷ್ಟ್ರಧ್ವಜ ತಯಾರಿಕಾ ಕೇಂದ್ರದಿಂದ ಪೋಟೋ ಕಟ್ಟು ಹಾಕಿದ ರಾಷ್ಟ್ರಧ್ವಜ ಹಾಗೂ ಭಾರತ ಸಂವಿಧಾನದ ಪೀಠಿಕೆ ವಿತರಿಸಿದರು.

ಈ ವೇಳೆ ಅರುಣ ಪಾಟೀಲ, ರವಿವರ್ಮ ಪಾಟೀಲ, ಮಡಿವಾಳೆಪ್ಪ ಉಳವನ್ನವರ, ತವನಪ್ಪ ಅಷ್ಟಗಿ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಕೃಷ್ಣಾ ಬಾಳೆಕುಂದರಗಿ, ಅಸ್ಫಾಕ ಹವಾಲ್ದಾರ, ಮದಕಪ್ಪ ಮರಡಿ, ಧರೆಪ್ಪ ಟಕ್ಕನ್ನವರ, ಸಂಗನಗೌಡ ಪಾಟೀಲ, ರಾಘವೇಂದ್ರ ಘಟ್ಟದ, ಮಲ್ಲಪ್ಪ ರೇವನ್ನವರ, ಅನೀಲ ಎಮ್ಮಿ, ಕಾಂಗ್ರೇಸ್ ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಸೇರಿದಂತೆ ಇತರರಿದ್ದರು. 

ಈಶ್ವರ ಶಿವಳ್ಳಿ ಸ್ವಾಗತಿಸಿದರು, ಗೌರಿ ಮಟ್ಟಿ ನಿರೂಪಿಸಿ ವಂದನಾರ್ಪಣೆ ಮಾಡಿದರು. 

ಪೋಟೋ ಶಿರ್ಷೀಕೆ08ಕೆಟಿಆರ್01:ರಾಜಕೀಯ ನಾಯಕರು ಹಾಗೂ ಮಠಾಧೀಶರು ಕಾರ್ಯಕ್ರಮ ಉದ್ಘಾಟನೆ ಮಾಡಿದರು. 2-ಶಾಸಕ ವಿನಯ ಕುಲಕರ್ಣಿ ಅವರಿಗೆ ರಾಷ್ಟ್ರಧ್ವಜ ಹಾಗೂ ಭಾರತ ಸಂವಿಧಾನದ ಪೀಠಿಕೆ ವಿತರಸಿದರು.

Post a Comment

0 Comments