Kittur: ಡಾ.ಸುಲಭಾ ದತ್ತ ಡಂಬಳರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು

ಡಾ.ಸುಲಭಾ ದತ್ತ ಡಂಬಳರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ.ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು
ಚನ್ನಮ್ಮನ ಕಿತ್ತೂರು:- ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಖ್ಯಾತ ಸಂಗೀತಗಾರ್ತಿ ಡಾ.ಗಂಗೂಬಾಯಿ ಹಾನಗಲ್ ಅವರ ಪರಮ ಶಿಷ್ಯರಾಗಿದ್ದ ಡಾ.ಸುಲಭಾ ದತ್ತ ಡಂಬಳ(ನೀರಲಗಿ) ಇವರ ಅಕಾಲಿಕ ನಿಧನಕ್ಕೆ ಕಿತ್ತೂರ ನಾಡ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ, ಶ್ರೀ ಕಲ್ಮಠದ ಪೂಜ್ಯರೂ ಆಗಿರುವ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಕಂಬನಿ ಮಿಡಿದರು. ರಾಜಗುರು ಸಂಸ್ಥಾನ ಕಲ್ಮಠ, ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ
ಹಮ್ಮಿಕೊಳ್ಳಲಾಗಿದ್ದ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪೂಜ್ಯರು ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಕ್ಷೇತ್ರದಲ್ಲಿ ತರಬೇತಿ ನೀಡಿದ ಡಾ.ಎಸ್.ವಿ. ಡಂಬಳ ಇವರ ಸಾಧನೆಯನ್ನು ಮರೆಯಲಾಗದು ಎಂದು ತಿಳಿಸಿದರು. ಕಿತ್ತೂರಿನ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸಂಗೀತ ಉಪನ್ಯಾಸಕರಾಗಿ ಅನೇಕ ವರ್ಷಗಳವರೆಗೆ ಸೇವೆ ಸಲ್ಲಿಸಿ ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾದ ಡಾ.ಎಸ್.ವಿ. ಡಂಬಳ ಇವರ ಸರಳ ಜೀವನ ಮತ್ತು ಸಹೋದ್ಯೋಗಿ ಮತ್ತು ವಿದ್ಯಾರ್ಥಿಗಳೊಂದಿಗಿನ ಮಧುರ ಬಾಂಧ್ಯವದ ಸವಿ
ನೆನಪುಗಳನ್ನು ವಿಶ್ರಾಂತ ಪ್ರಾಚಾರ್ಯರೂ ಮತ್ತು ಕಿ.ನಾ.ವಿ.ವ.ಸಂಘದ ಮಾಜಿ ಗೌರವ
ಕಾರ್ಯದರ್ಶಿಗಳೂ ಆದ ಪ್ರೊ.ಆರ್.ವಾಯ್.ಪರವಣ್ಣವರ ಸ್ಮರಿಸಿದರು. ತಮ್ಮ ವಿಶ್ರಾಂತ ಜೀವನದಲ್ಲೂ ಧಾರವಾಡದ ಅವರ ಕಲಾಶ್ರೀ ಮನೆಯಲ್ಲಿ ಇಂದಿಗೂ ಅನೇಕ ಸಂಗೀತಾಸಕ್ತರಿಗೆ ಪಾಠ ಹೇಳಿಕೊಡುತ್ತಿದ್ದ ಮತ್ತು ದೇಶದ ತುಂಬ ಅಪಾರ ಸಂಗೀತ ಕಾರ್ಯಕ್ರಮಗಳನ್ನು
ನಡೆಸಿಕೊಡುತ್ತಿದ್ದ ಸಹೋದ್ಯೋಗಿ ಮಿತ್ರರಾದ ಇವರಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡಮಿ ಕೊಡಮಾಡುವ ಕರ್ನಾಟಕ ಕಲಾಶ್ರೀ,ಡಾ. ಡಾ.ಗಂಗೂಬಾಯಿ ಹಾನಗಲ್ ಸ್ಮರಣ ಪುರಸ್ಕಾರ,ಸಂಗೀತ ಸುಧಾಮನಿ,ಸಂಗೀತ ಶಿರೋಮಣಿ,ಕನಕಶ್ರೀ,ಸ್ವರನಿ ಮುಂತಾದ ಪ್ರಶಸ್ತಿಗಳು ದೊರೆತಿದ್ದು ಇವರು ಇಷ್ಟು ಬೇಗನೆ ನಮ್ಮನ್ನು ಬಿಟ್ಟು ಹೋಗಿದ್ದು ವಿಷಾದನೀಯವಾಗಿದೆ ಎಂದು ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಸಂತಾಪ ಸೂಚಿಸಿದರು. ಆಕಾಶವಾಣಿ ಮತ್ತು ದೂರದರ್ಶನದ ಉನ್ನತ ಶ್ರೇಣಿಯ ಕಲಾವಿದರಾಗಿದ್ದ ಡಾ.ಎಸ್.ವೈ, ಡಂಬಳ ಇಷ್ಟು ಬೇಗನೆ ಅಗಲಬಾರದಾಗಿತ್ತು ಎಂದು ಶ್ರೀ ಗಂಗಣ್ಣ ಕರೀಕಟ್ಟಿ ಅವರ ಸಂಗೀತ ಸೇವೆಯನ್ನು ಸ್ಮರಿಸಿದರು. ಸಮಾರಂಭದಲ್ಲಿ ಕಿತ್ತೂರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post a Comment

0 Comments