Kittur: ಶ್ರೀಕಲ್ಮಠದಲ್ಲಿ ರಾಣಿ ಚನ್ನಮ್ಮಳ ೨೪೫ ನೇಯ ಜನ್ಮ ಜಯಂತಿ

ಶ್ರೀಕಲ್ಮಠದಲ್ಲಿ ರಾಣಿ ಚನ್ನಮ್ಮಳ ೨೪೫ ನೇಯ ಜನ್ಮ ಜಯಂತಿ

ಕಿತ್ತೂರು:- ರಾಜಗುರು ಸಂಸ್ಥಾನ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ
ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಶ್ರೀ ಕಲ್ಮಠದಲ್ಲಿ ರಾಜಗುರು ಸಂಸ್ಥಾನ ಕಲ್ಮಠ, ಕಿತ್ತೂರ
ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಿತ್ತೂರು ತಾಲೂಕ ಶರಣ ಸಾಹಿತ್ಯ ಪರಿಷತ್ತ
ಗಳ ಸಂಯುಕ್ತ ಆಶ್ರಯದಲ್ಲಿ ವೀರ ರಾಣಿ ಚನ್ನಮ್ಮಳ ೨೪೫ ನೇಯ ಜನ್ಮ ಜಯಂತಿ ಮತ್ತು
ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಶಿಕ್ಷಕಿಯರು ರಂಗೋಲಿ ಹಾಕಿ ವೀರ
ರಾಣಿ ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ವೀರ ರಾಣಿ ಚನ್ನಮ್ಮಳ
ಜಯಂತಿಯನ್ನು ಪ್ರತಿ ವರ್ಷ ನವಂಬರ್ 14 ರಂದು ಆಚರಿಸುತ್ತಾ ಬರಲಾಗಿದೆ. ಸರಕಾರವು
ಅಕ್ಟೋಬರ್ 23 ರಂದು ಚನ್ನಮ್ಮಳ ಜಯಂತಿಯನ್ನು ಆಚರಿಸುವದರ ಮೂಲಕ ಜನತೆಯಲ್ಲಿ
ಗೊಂದಲ ಮೂಡಿಸಬಾರದು ಎಂದು ಕಿತ್ತೂರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು
ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ತಿಳಿಸುತ್ತಾ ಪ್ರತಿ ವರ್ಷ ಆಚರಿಸಲಾಗುತ್ತಿರುವ ಕಿತ್ತೂರ
ಉತ್ಸವ ಇಡೀ ನಾಡಿಗ ರಾಣಿ ಚನ್ನಮ್ಮಳ ಇತಿಹಾಸವನ್ನು ಮುಟ್ಟಿಸುವಲ್ಲಿ
ಸಫಲವಾಗಬೇಕೆಂದು ಮನವಿ ಮಾಡಿದರು. ಶಿಕ್ಷಕರು ಮಕ್ಕಳಲ್ಲಿ ಚನ್ನಮ್ಮನ ಜಯಂತಿ ಮತ್ತು
ವಿಜಯೋತ್ಸವ ಕುರಿತು ಸರಿಯಾದ ಮಾಹಿತಿ ನೀಡುವದಾಗಬೇಕೆಂದು ಕಿತ್ತೂರು ತಾಲೂಕ
ಶರಣ ಸಾಹಿತ್ಯ ಪರಿಷತ್ತ ಅಧ್ಯಕ್ಷರಾದ ಶ್ರೀ ಗಂಗಣ್ಣ ಕರಿಕಟ್ಟಿ ಮನವಿ ಮಾಡಿದರು.
ಸಾನಿಧ್ಯ ವಹಿಸಿದ ಕಲ್ಮಠದ ಪೂಜ್ಯ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು
ರಾಣಿ ಚನ್ನಮ್ಮ ಕಿತ್ತೂರಿನ ಹೆಸರನ್ನು ತ್ಯಾಗ ಬಲಿದಾನದ ಮೂಲಕ ಇಡೀ ವಿಶ್ವಕ್ಕೆ
ಪರಿಚಯಿಸಿದ ಧೀರ ಮಹಿಳೆಯಾಗಿದ್ದು ಇವಳ ಇತಿಹಾಸವನ್ನು ಪ್ರತಿ ಮಕ್ಕಳು
ಓದುವಂತಾಗಬೇಕೆಂದು ಮತ್ತು ಮಕ್ಕಳ ದಿನಾಚರಣೆ ಆಚರಣೆಯ ಈ ಸಂದರ್ಭದಲ್ಲಿ
ಅವರಲ್ಲಿ ಅಡಗಿರುವ ಸೃಜನಶೀಲ ಕೌಶಲ್ಯಗಳ ವಿಕಾಸಕ್ಕೆ ಅವಕಾಶಗಳನ್ನು ಪಾಲಕರು
ನೀಡುವಂತಾಗಬೇಕೆಂದು ಆಶೀರ್ವದಿಸಿದರು..
ಸಮಾರಂಭದಲ್ಲಿ ರಾಜಗುರು ಶಿಕ್ಷಣ ಸಂಸ್ಥೆಯ ಶಿಕ್ಷಕರು, ಕನ್ನಡ ಸಾಹಿತ್ಯ ಪರಿಷತ್ತು
ಮತ್ತು ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು. ನಿವೃತ್ತ ಮುಖ್ಯಾಧ್ಯಾಪಕರಾದ ಶ್ರೀ ಎಸ್.ಎಸ್.ನರಸಣ್ಣವರ ಸ್ವಾಗತಿಸಿದರು. ಶ್ರೀ ಗುರುಪಾದಯ್ಯ ಗಾಳೀಮಠ ವಂದಿಸಿದರು. ಶ್ರೀ ಆನಂದ ಶಿವಳ್ಳಿಮಠ ನಿರೂಪಿಸಿದರು.

Post a Comment

0 Comments