belagavi: ಪುಷ್ಪಾ ಸಿನಿಮಾ ಸ್ಟೈಲಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ..!

ಬೆಳಗಾವಿ: ಪುಷ್ಪಾ ಸಿನಿಮಾ ಸ್ಟೈಲಲ್ಲಿ ಸಾಗಿಸುತ್ತಿದ್ದ ಅಕ್ರಮ ಮದ್ಯ ವಶ..!

ಕ್ಯಾಂಟರ್‌ನಲ್ಲಿ ಐದು ಅಡಿ ಅಗಲದ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಮಾಡಿ ಅದಕ್ಕೆ ಶೆಟರ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಮದ್ಯ ಸಾಗಣೆಗೆ ತಂತ್ರ ರೂಪಿಸಲಾಗಿತ್ತು.

ಬೆಳಗಾವಿ(ನ.25):  ಪುಷ್ಪಾ ಸಿನಿಮಾ ಮಾದರಿಯಲ್ಲಿ ಗೋವಾದಿಂದ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ವಾಹನ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, ಒಬ್ಬನನ್ನು ಬಂಧಿಸಿ, 25 ಲಕ್ಷ ರು. ಮೌಲ್ಯದ ಮದ್ಯ‍ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಿಹಾರ ರಾಜ್ಯದ ಬಂಗಾ ಬಝಾರ್ ನಿವಾಸಿ ಸುಭೋದ ರಾಮನಾಥ ಮಹತೊ (49) ಬಂಧಿತ ಆರೋಪಿ. ಕ್ಯಾಂಟರ್‌ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಣೆ ಮಾಡುತ್ತಿರುವ ಕುರಿತು ಮಾಹಿತಿ ಕಲೆ ಹಾಕಿದ್ದ ಅಬಕಾರಿ ಅಧಿಕಾರಿಗಳು ಬೆಳಗ್ಗೆ 4.30ರ ಸುಮಾರಿಗೆ ಖಾನಾಪುರ ತಾಲೂಕಿನ ಕಣಕುಂಬಿ ಚೆಕ್‌ ಪೊಸ್ಟ್‌ನಲ್ಲಿ ವಾಹನ ತಡೆದು ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಕ್ಯಾಂಟರ್‌ನಲ್ಲಿ ಐದು ಅಡಿ ಅಗಲದ ಪ್ರತ್ಯೇಕ ಕಂಪಾರ್ಟ್‌ಮೆಂಟ್‌ ಮಾಡಿ ಅದಕ್ಕೆ ಶೆಟರ್‌ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಯಾರಿಗೂ ಸಣ್ಣ ಸುಳಿವೂ ಸಿಗದಂತೆ ಮದ್ಯ ಸಾಗಣೆಗೆ ತಂತ್ರ ರೂಪಿಸಲಾಗಿತ್ತು.

Post a Comment

0 Comments