ಕರ್ನಾಟಕ ಸಂಭ್ರಮ - ೫೦ ರ ನಿಮಿತ್ತ ರವಿವಾರ ಡಿಸೆಂಬರ್ ೩ ರಂದು ಕಿತ್ತೂರಿನ
ಶ್ರೀ ಕಲ್ಮಠದ ಸಭಾ ಭವನದಲ್ಲಿ ಬೆಳಗಾವಿ ಜಿಲ್ಲಾ ಕವಿಗೋಷ್ಠಿ,
ಡಾ.ಎಸ್.ಬಿ.ದಳವಾಯಿ
ಚನ್ನಮ್ಮನ ಕಿತ್ತೂರು ;- ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ನಿಮಿತ್ತವಾಗಿ ಕನ್ನಡ
ಸಾಹಿತ್ಯ ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾ
ಮಟ್ಟದ ವಿಶೇಷ ಕವಿಗೋಷ್ಠಿಯು ರವಿವಾರ ಡಿಶೆಂಬರ ೩ ರಂದು ಮುಂಜಾನೆ ೧೦ ಗಂಟೆಗೆ
ಕಲ್ಮಠದ ಶ್ರೀ ಚಂದರಗಿ ಸಭಾ ಭವನದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು
ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಅಧ್ಯಕ್ಷರಾದ ಡಾ.ಎಸ್.ಬಿ.ದಳವಾಯಿ ಪತ್ರಿಕಾ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲ್ಮಠದ ಪೂಜ್ಯ ಶ್ರೀ ಮಡಿವಾಳ ರಾಜಯೋಗೀಂದ್ರ
ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿರುವ ಸಮಾರಂಭದ ಅಧ್ಯಕ್ಷತೆಯನ್ನು
ಡಾ.ಎಸ್.ಬಿ.ದಳವಾಯಿ ವಹಿಸಲಿದ್ದಾರೆ. ಉದ್ಘಾಟನೆಯನ್ನು ಕಿತ್ತೂರಿನ ಶಾಸಕರಾದ ಶ್ರೀ
ಬಾಬಾಸಾಹೇಬ ಪಾಟೀಲ ಮಾಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಕಿತ್ತೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಾದ ಶ್ರೀ ಆರ್.ಪಿ.ಜುಟ್ಟನವರ ಮತ್ತು ಹಿರಿಯ ಪತ್ರಕರ್ತರಾದ ಶ್ರೀ ಪ್ರದೀಪ ಮೇಲಿನಮನಿ ಆಗಮಿಸಲಿದ್ದಾರೆ. ಡಿಶಂಬರ ತಿಂಗಳ ಸಾಹಿತಿ ಸನ್ಮಾನದ ಅಂಗವಾಗಿ ಯುವ ಸಾಹಿತಿ ಬೆಳಗಾವಿ ಜಿಲ್ಲಾ ಅತ್ತುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಶ್ರೀ ನಾಗಯ್ಯ
ಹುಲೆಪ್ಪನವರಮಠ ಇವರನ್ನು ಗೌರವಿಸಲಾಗುವದು. ಆಶಯ ನುಡಿಗಳನ್ನು ಕನ್ನಡ ಸಾಹಿತ್ಯ
ಪರಿಷತ್ತು ತಾಲೂಕಾ ಘಟಕ ಚನ್ನಮ್ಮನ ಕಿತ್ತೂರಿನ ಗೌರವ ಕಾರ್ಯದರ್ಶಿಗಳಾದ ಶ್ರೀ ಮಂಜುನಾಥ ಕಳಸಣ್ಣವರ ಆಡಲಿದ್ದಾರೆ.ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು ೫೦ ಕ್ಕೂ ಹೆಚ್ಚು ಕವಿ ಕವಯತ್ರಿಯರು ಕವನ ವಾಚನ ಮಾಡಲಿದ್ದಾರೆ.ಈಗಾಗಲೇ ಕಿತ್ತೂರು ಜಿಲ್ಲಾ ಕವಿಗೋಷ್ಠಿ ' ಎಂಬ ತಲೆ ಬರಹದಲ್ಲಿ ವ್ಯಾಟ್ಸಪ್ ಸಮೂಹ ರಚಿಸಲಾಗಿದ್ದು ಅದರಲ್ಲಿ ಆಯ್ಕೆ ಆದ ಕವಿಗಳನ್ನು ಸೇರಿಸಲಾಗಿದೆ.ಇವರುಗಳು ರವಿವಾರ ಡಿಶೆಂಬರ ೩ ರಂದು ಮುಂಜಾನೆ ೧೦ ಗಂಟೆಗೆ ನಿಗದಿಪಡಿಸಿದ ಶ್ರೀ ಕಲ್ಮಠದ ಸಭಾ ಭವನದಲ್ಲಿ ಹಾಜರಿರಲು ಕೋರಲಾಗಿದೆ.
0 Comments