Kittur : ಕರ್ನಾಟಕ ರಾಜ್ಯೋತ್ಸವನ್ನು ಆಚರಣೆ ಕುರಿತು ಪೂರ್ವಭಾವಿ ಸಭೆ

ಎಂ.ಕೆ.ನ್ಯೂಜ ಚನ್ನಮ್ಮನ ಕಿತ್ತೂರು ದಿ:30-10-2023 ಕಿತ್ತೂರ ಪಟ್ಟಣದಲ್ಲಿ ನವ್ಹಂಬರ-01 ರಂದು ಕರ್ನಾಟಕ ರಾಜ್ಯೋತ್ಸವನ್ನು ಆಚರಣೆ ಕುರಿತು ಪೂರ್ವಭಾವಿ ಸಭೆಯನ್ನು ಇಂದು ದಿನಾಂಕ 30-10-2023  ರಂದು ಮಧ್ಯಾಹ್ನ   3-00 ಗಂಟೆಗೆ ತಹಶೀಲ್ದಾರ ಕಾರ್ಯಾಲಯದಲ್ಲಿ ಮಾನ್ಯ ಶ್ರೀ ಬಾಬಾಸಾಹೇಬ ದೇ.ಪಾಟೀಲ, ಮಾನ್ಯ ಶಾಸಕರು ಕಿತ್ತೂರ ಇವರ ಅಧ್ಯಕ್ಷತೆಯಲ್ಲಿ ಸಭೆಯನ್ನು ಜರುಗಿಸಲಾಯಿತು. 

 ನವ್ಹಂಬರ -01 ರಂದು ರಾಷ್ಟ್ರೀಯ ಹೆದ್ದಾರಿ ಪಕ್ಕದ ಚನ್ನಮ್ಮಾಜಿ ಪುಥ್ಥಳಿ ಹತ್ತಿರ ಭುವನೇಶ್ವರಿ ದೇವಿಗೆ ಪೂಜೆ ಕೈಕೊಂಡು ಆರು ಶಾಲೆಗಳಿಂದ ವೈವಿದ್ಯಮಯವಾದ ರೂಪಕಗಳನ್ನು ಶಾಲಾಮಕ್ಕಳಿಂದ ತಯಾರಿಸಿ ಮೆರವಣಿಗೆಯನ್ನು ಪ್ರಾರಂಬಿಸಿ ಮೆರವಣಿಗೆಯು ಕಿತ್ತೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸೋಮವಾರ ಪೇಟೆಯ ಚನ್ನಮ್ಮನ ವರ್ತುಳದಲ್ಲಿ ಹಾಯ್ದು ಪಟ್ಟಣ ಪಂಚಾಯತವರೆಗೆ ಬಂದು ಪಂಚಾಯತಿಯಲ್ಲಿ ಮುಕ್ತಾಯಗೊಳಿಸಲು ತಿರ್ಮಾಣಿಸಲಾಯಿತು. 
 ಕರ್ನಾಟಕ ರಾಜ್ಯೋತ್ಸವದ 50 ನೇ ವರ್ಷಾಚರಣೆ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸೇರುವ ಶಾಲಾ ಮಕ್ಕಳು/ ಸಾರ್ವಜನಿಕರು ಸರಕಾರದವರು ನಿಗಧಿಪಡಿಸಿದ ಐದು ಗೀತೆಗಳನ್ನು ಹಾಡುವುದು ಅಂತಾ ಚರ್ಚಿಸಿ ತಿರ್ಮಾನಿಸಿತು.  ಸಭೆಯಲ್ಲಿ ಶ್ರೀ ರವೀಂದ್ರ ಕೆ.ಹಾದಿಮನಿ,  ತಹಶೀಲ್ದಾರ ಕಿತ್ತೂರ ಹಾಗೂ ಅವರ ಸಿಬ್ಬಂದಿ, ಲೋಕೊಪಯೋಗಿ, ಶಿಕ್ಷಣ ,ಹೆಸ್ಕಾಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ತಾಲೂಕ ಪಂಚಾಯತ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.  ಅದರಂತೆ ಉರಿನ ಗಣ್ಯರಾದ ಶ್ರೀ ಸುನೀಲ ಘೀವಾರಿ, ಶ್ರೀ ಆಶ್ಪಾಕ ಹವಾಲ್ದಾರ, ಶ್ರೀ ಬಸವರಾಜ ಸಂಗೋಳ್ಳಿ, ಶ್ರೀ ಕ್ರಷ್ಣಾ ಬಾಳೆಕುಂದರಗಿ,ಶ್ರೀ ಸೂರ್ಯಕಾಂತ ಕಿತ್ತೂರ, ಶ್ರೀ ಈರಪ್ಪ ವಡ್ಡರ, ( ಕರ್ನಾಟಕ ರಕ್ಷಣಾ ವೇದಿಕೆ) ಶ್ರೀ ಅಪ್ಪಸಾಬ ಶೀಲೆದಾರ ಹಾಗೂ ಇನ್ನಿತರು ಮತ್ತ ಪಟ್ಟಣದ ಎಲ್ಲ ಪತ್ರಕಾ ಮಾಧ್ಯಮದವರು ಹಾಜರ ಇದ್ದರು.

Post a Comment

0 Comments