Kittur : ಮತದಾನಕ್ಕೆ ಅವಕಾಶ ನೀಡಿ:ತಡಕೋಡ

ಮತದಾನಕ್ಕೆ ಅವಕಾಶ ನೀಡಿ:ತಡಕೋಡ
ಚನ್ನಮ್ಮನ ಕಿತ್ತೂರ: ಸೋಮೇಶ್ವರ ಸಹಕಾರಿ ಸಕ್ಕರೆ
ಕಾರ್ಖಾನೆಯ ಕೆಲವು ಸದಸ್ಯರನ್ನು ಅನರ್ಹತ ಮಾಡಿ
ಚುನಾವಣೆ ನಡೆಸುವದು ಸರಿಯಾದ ಕ್ರಮವಲ್ಲ, ಎಲ್ಲ
ಸದಸ್ಯರಿಗೂ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ
ಕಲ್ಪಿಸಬೇಕೆಂದು ಮಾಜಿ ತಾಪಂ ಅಧ್ಯಕ್ಷ ನಿಂಗಪ್ಪ ತಡಕೋಡ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,
ಸಮೀಪದ ಬೆಳವಡಿಯ ಸೋಮೇಶ್ವರ ಸಹಕಾರಿ
ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯೂ
ಅನರ್ಹತೆ ಹೆಸರಿನಲ್ಲಿ ಸದಸ್ಯರ ಮತದಾನದ ಹಕ್ಕನ್ನು
ಕಸೆದುಕೊಂಡಿರುವ ಕ್ರಮ ಸರಿಯಲ್ಲ,
ಒಟ್ಟು ಕಾರ್ಖಾನೆಯ ಸದಸ್ಯರ ಪೈಕಿ ಶೇಖ
90ರಷ್ಟು ಸದಸ್ಯರನ್ನು ತೆಗೆದಿರುವದು ಖಂಡನೀಯ
ಕೇವಲ ಶೇ.10ರಷ್ಟು ಮಾತ್ರ ಅರ್ಹರಿದ್ದಾರೆನ್ನುವದು
ಹಾಸ್ಯ ಸ್ಪದವೆಂದರು. ಕಾರ್ಖಾನೆಯನ್ನು ಕಟ್ಟುವಾಗ ಮತ್ತು ಶೇರು ಬಂಡವಾಳ ಹೆಚ್ಚು ಮಾಡುವಲ್ಲಿ
ಎಲ್ಲರೂ ಬೇಕು ಚುನಾವಣೆಗೆ ಬೇಡವೇ ಎಂದರು.
ಎಲ್ಲ ಸದಸ್ಯರ ಕಬ್ಬನ್ನು ಕಾರ್ಖಾನೆಯವರೇ
ಒಯ್ದಿರುವದಿಲ್ಲ, ಕಬ್ಬನ್ನು ನುರಿಸುವಷ್ಟು ಕಾರ್ಖಾನೆಯ
ಸಾಮರ್ಥ್ಯವಿರುವದಿಲ್ಲ, ನೋಟಿಸ್ ಮುಟ್ಟದೇ
ಇರಬಹುದು ಇಂತಹ ಹಲವಾರು ಸಮಸ್ಯೆಗಳು
ತಮ್ಮ ಕಾರ್ಖಾನೆಯಲ್ಲಿವೆ ಇವುಗಳನ್ನು ಬಿಟ್ಟು
ಉದ್ದೇಶಪೂರ್ವಕವಾಗಿ ರೈತರು ಚುನಾವಣೆಯಲ್ಲಿ
ಭಾಗವಹಿಸದ೦ತೆ ನೋಡಿಕೊಳ್ಳುತ್ತಿದ್ದಾರೆ ಹೀಗೆ
ಮುಂದುವರೆದರೆ ರೈತ ಹೋರಾಟ, ಕಾನೂನು ಹೋರಾಟ ಅನಿವಾರ್ಯ ಆದರೆ ರೈತರ ಹಿತ ಕಾಯಬೇಕೆಂದರೆ ಎಲ್ಲ ಸದಸ್ಯರಿಗೂ ಚುನಾವಣೆಗೆ ಅವಕಾಶ ಕಲ್ಪಿಸಬೇಕೆಂದರು.
ಈ ಸಂದರ್ಭದಲ್ಲಿ ರವಿ ಜಾಲಿಕಟ್ಟಿ, ನಿಜಗುಣಿ ಗೌರಣ್ಣವರ ಸೇರಿದಂತೆ ಇತರರು ಇದ್ದರು.

Post a Comment

0 Comments